ಚಾಮರಾಜನಗರ: ಏಣಿ ಮೂಲಕ ಶಿಥಿಲಗೊಂಡ ಶಾಲೆ ಮೇಲೇರಿದ ಶಾಸಕ ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ, ಆಗಸ್ಟ್‌, 24: ಶಾಲೆ ಶಿಥಿಲಗೊಂಡಿದೆ ಎಂದು ಮುಖ್ಯ ಶಿಕ್ಷಕ ದೂರವಾಣಿ ಕರೆಮಾಡಿದ ಬೆನ್ನಲ್ಲೇ ಭೇಟಿ ನೀಡಿದ ಶಾಸಕರು ಏಣಿ ಏರಿ ಪರಿಸ್ಥಿತಿ ಅವಲೋಕಿಸಿ ಸ್ಥಳದಲ್ಲೇ ರಿಪೇರಿಗೆ ಸೂಚನೆ ಕೊಟ್ಟ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ನಡೆದಿದೆ.

ಚಂದಕವಾಡಿ ಪಬ್ಲಿಕ್ ಶಾಲೆಯ ಹಲವು ಕೊಠಡಿಗಳು ಶಿಥಿಲಗೊಂಡ ಮಾಹಿತಿ ಅರಿತ ಶಾಸಕ ಪುಟ್ಟರಂಗಶೆಟ್ಟಿ ಇಂದು ಭೇಟಿ ಕೊಟ್ಟು ಶಾಲೆಗಳ ಕೊಠಡಿ ಪರಿಶೀಲನೆ ನಡೆಸಿದರು. ತಾರಸಿ ಹೇಗಿದೆ ಎಂಬುದನ್ನು ಅರಿಯುವ ಸಲುವಾಗಿ ಏಣಿಯೊಂದನ್ನು ತರಿಸಿದ ಶಾಸಕರು ಶಾಲೆ ಮೇಲೇರಿ ಎಲ್ಲವನ್ನೂ ಕಂಡು ಅನುದಾನ ಕೊಡುತ್ತೇನೆ. ಶುಕ್ರವಾರದಿಂದಲೇ ಕಾಮಗಾರಿ ಆರಂಭಿಸಿ ಎಂದು ಪಟಾಪಟ್ ಕಾಯಕಲ್ಪ ಕೊಟ್ಟು ಗಮನ ಸೆಳೆದಿದರು.

c-puttarangashetty-inspected-school

ಶಾಲಾ ಕೊಠಡಿಗಳು ಸೋರುತ್ತಿವೆ ಎಂದು ಶಿಕ್ಷಕರರು ಹತ್ತಾರು ಬಾರಿ ಮನವಿ ಮಾಡಿದರೂ ಅನುದಾನವಿಲ್ಲ ಎನ್ನುವ ಶಾಸಕರ ಮಧ್ಯೆ ಭೇಟಿ ಕೊಟ್ಟ ಕೂಡಲೇ ಕಾಮಗಾರಿ ಆದೇಶ ಕೊಟ್ಟಿದ್ದು ಗಮನಾರ್ಹವಾಗಿದೆ.

ಹೊಸ ಶಿಕ್ಷಣ ನೀತಿ ರದ್ದು ಮಾಡಬೇಡಿ

ಮತ್ತೊಂದೆಡೆ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ರದ್ದು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೃಹತ್ ಪ್ರತಿಭಟನೆ ನಡೆಸಿತು. ನಗರದ ವಿದ್ಯಾನಗರದ ಬಿವಿಬಿ ಕಾಲೇಜಿನಿಂದ ಚೆನ್ನಮ್ಮ ಸರ್ಕಾಲ್‌ವರೆಗೂ 8 ಕೀಲೋ ಮೀಟರ್‌ವರಗೂ ರಾಜ್ಯ‌ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಮೊದಲು ಯಾವ ದೋಷವಿದೆ ಅಂತಾ ಹೇಳಬೇಕು. ಎನ್‌ಇಪಿ ಬೇಡ ಎನ್ನುವ ರಾಜಕಾರಣಿಗಳ ಮಕ್ಕಳು ಹಾಗೂ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಉಳ್ಳವರು ಮಕ್ಕಳು ಸಿಬಿಎಸ್‌ಸಿಯಲ್ಲಿ ಓದಬಹುದು, ಆದರೆ ಬಡಮಕ್ಕಳು ಮಾತ್ರ ಸ್ಟೇಟ್ ಸಿಲಬಸ್‌ನಲ್ಲಿ ಓದಬೇಕಾ? ಎಂದು ಪ್ರಶ್ನಿಸಿದರು.

ಅಲ್ಲದೆ ಇದೇ ವೇಳೆ ಬಹುತೇಕ ಖಾಸಗಿ ಶಾಲೆಗಳು ರಾಜಕಾರಣಿಗಳ ಒಡೆತನದ್ದಾಗಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಇದರ ಹಿಂದಿದೆ ಎಂದು ಗಂಭೀರ ಆರೋಪ ಮಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಸುಧಾರಣೆ ಆಗಲಿದ್ದು, ನರ್ಸರಿಯಿಂದ ಉನ್ನತ ಶಿಕ್ಷಣದವರೆಗೆ ಹೊಸ ಶಿಕ್ಷಣ ವ್ಯವಸ್ಥೆ ಮೂಲಕ ಸುಧಾರಣೆ ಆಗಲಿದೆ. ಈ ಸುಧಾರಣೆ ವಿಶ್ವ ವ್ಯಾಪ್ತಿಯಲ್ಲಿ ಸಾಬೀತಾಗಿರುವಂತಹದ್ದು. ಯಾವುದೇ ವಿದ್ಯಾರ್ಥಿಗಳ ವಿರುದ್ಧವಾಗಿಲ್ಲ. ಇನ್ನು ಆತುರದಲ್ಲಿ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗಿಲ್ಲ. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕ್ರಮ‌ಕೈಗೊಳ್ಳಲಾಗುತ್ತಿದೆ ಎಂದರು.

ಶಿಕ್ಷಣ ಕ್ಷೇತ್ರದ ಮೂಲತತ್ವಗಳಲ್ಲಿ ಸುಧಾರಣೆ ಮಾಡಲಾಗುತ್ತಿದೆ. ಕಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲಾಗಿದೆ. ಅಂತರ್ ಶಿಸ್ತು ಪಾಲನೆಗೆ ಆದ್ಯತೆ ನೀಡಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಇಲ್ಲ ಅಂದ್ರೆ ನಿಂತ ನೀರಾಗುತ್ತದೆ. ನಮ್ಮ ವಿದ್ಯಾರ್ಥಿಗಳು ವಿಶ್ವಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದೆ. ನರ್ಸರಿಯಿಂದ ಉನ್ನತ ಎನ್ಇಪಿಯಲ್ಲಿ ಸುಧಾರಣೆಯಾಗಲಿದೆ ಎಂದು ಅಖಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡ ಮಣಿಕಂಠ ಹೇಳಿದರು.

ಸುಧಾರಣೆ ವಿಶ್ವ ವ್ಯಾಪ್ತಿಯಲ್ಲಿ ಸಾಬೀತಾಗಿರುವಂತಹದ್ದು. ಯಾವುದೇ ವಿದ್ಯಾರ್ಥಿಗಳ ವಿರುದ್ಧವಾಗಿರುವಂತಹದ್ದು ಏನೂ ಇಲ್ಲ ಎಂದು ಮಂಗಳೂರು ವಿವಿಯಲ್ಲಿ ಸಚಿವರು ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಸಿಎಫ್‌ಐ ಕಾರ್ಯಕರ್ತರ ಪ್ರತಿಭಟನೆ ನಡೆಸಿದ ಘಟನೆ ಮಂಗಳೂರಿನ ಕೋಣಾಜೆ ವಿಶ್ವ ವಿದ್ಯಾನಿಲಯದಲ್ಲಿ ನಡೆದಿತ್ತು. ಈ ಸಂಬಂಧ ಅಶ್ವತ್ಥ್ ನಾರಾಯಣ ಮಾತುಗಳು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧ ಸರಿಯಲ್ಲ ಎಂದರು. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ನಿಯೋಜಿಸಲಾಗಿತ್ತು ಎಂದರು. ಈ ವೇಳೆ ಎಬಿವಿಪಿ ಮುಖಂಡ ಮಣಿಕಂಠ, ಪುಷ್ಟಾ ಗಾಡರೆಡ್ಡಿ ಸೇರಿದಂತೆ ಮತ್ತತರರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+