Get Updates
Get notified of breaking news, exclusive insights, and must-see stories!

ವಿ.ಸೋಮಣ್ಣನವರ ಅಸಲಿ ಸತ್ಯವನ್ನು ಶೀಘ್ರದಲ್ಲೇ ಬಯಲು ಮಾಡುತ್ತೇನೆ: ಬಿ.ವೈ.ವಿಜಯೇಂದ್ರ ಆಪ್ತ ರುದ್ರೇಶ್‌ ಬಾಂಬ್‌

ಚಾಮರಾಜನಗರ, ಏಪ್ರಿಲ್‌, 12: ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಚಾಮರಾಜನಗರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಚಾಮರಾಜನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರುದ್ರೇಶ್ ಅವರು ಸೋಮಣ್ಣ ವಿರುದ್ಧ ಹರಿಹಾಯ್ದಿದ್ದಾರೆ. ಸಲ್ಲದೆ ಸೋಮಣ್ಣನವರ ಇಂಚಿಂಚು ಕರ್ಮಕಾಂಡಗಳನ್ನು ಬಿಚ್ಚಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಕ್ಷ ಸಂಘಟನೆಗೆ ಒಂದಿಂಚೂ ಕೂಡ ಶ್ರಮಿಸಿಲ್ಲ

ಚಾಮರಾಜನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, ರಾಮನಗರದಲ್ಲಾಗಲಿ ಹಾಗೂ ಚಾಮರಾಜನಗರದಲ್ಲಾಗಲಿ ಸೋಮಣ್ಣ ಅವರು ಪಕ್ಷ ಸಂಘಟನೆಗೆ ಒಂದಿಂಚೂ ಕೂಡ ಶ್ರಮಿಸಿಲ್ಲ. ಅವರ ತವರಲ್ಲೇ ಅವರು ಪಕ್ಷ ಸಂಘಟಿಸಿಲ್ಲ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದಿಲ್ಲ. ಈ ರೀತಿ ವ್ಯಕ್ತಿಗೆ ಎರಡು ಕ್ಷೇತ್ರದ ಟಿಕೆಟ್ ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

BY Vijayendra close aide Rudresh said will reveal V Somanna real truth soon

ವಿ.ಸೋಮಣ್ಣ ವಿರುದ್ಧ ರುದ್ರೇಶ್‌ ಆಕ್ರೋಶ

ಪಕ್ಷ ಸಂಘಟನೆಗೆ ಕರೆದರೇ ನನಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ, ನಾನು ಸರ್ಕಾರದ ಸಚಿವ ಎಂದು ಹೇಳುತ್ತಿದ್ದರು. ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿದ್ದ ಸೋಮಣ್ಣ ಅವರು ಕೆಲ ಷರತ್ತುಗಳಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಚಾಮರಾಜನಗರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಲು ಸೋಮಣ್ಣ ಅವರೇ ಕಾರಣರಾಗಿದ್ದರು. ಇದೀಗ ಸೋಮಣ್ಣ ಅವರೇ ಅಭ್ಯರ್ಥಿ ಆಗಿರುವುದು ವಿಪರ್ಯಾಸವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಬಾರಿ ಪ್ರೊ.ಮಲ್ಲಿಕಾರ್ಜುನಪ್ಪ ಸೋಲಲು ಸೋಮಣ್ಣ ಕಾರಣ, ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಕೂಡ ಇದೆ, ಚಾಮರಾಜನಗರದಲ್ಲಿ ಎಲ್ಲರನ್ನೂ ಸೋಲಿಸಿ ಅವರೂ ಮಾತ್ರ ಗೆಲ್ಲುತ್ತಾರೆ, ಗೆದ್ದ ಬಳಿಕ ಸಿದ್ದರಾಮಯ್ಯ ಜೊತೆ ಕೈ ಜೋಡಿಸಿ ಕಾಂಗ್ರೆಸ್ ಗೆ ಹೋಗುತ್ತಾರೆಂಬ ಅನುಮಾನ ಇದೆ ಗಂಭೀರ ಆರೋಪ ಹಾಕಿದರು.

BY Vijayendra close aide Rudresh said will reveal V Somanna real truth soon

ಸೋಮಣ್ಣ ಕಾಂಗ್ರೆಸ್ ಗೆ ಹೋಗದಂತೆ ಈಗಲೇ ಹೈಕಮಾಂಡ್ ಬಿಗಿ ಮಾಡಬೇಕಿದೆ. ಮುಂದೊಂದು ದಿನ ಪಕ್ಷಕ್ಕೆ ಕೆಟ್ಟ ದಿನ ಬರಬಾರದು, ಅವರು ಮಾತನಾಡುವುದಲ್ಲ ಬರೀ ಸುಳ್ಳು, ಸುಳ್ಳು ಸೋಮಣ್ಣ ಎಂತಲೇ ಜನರು ಕರೆದಿದ್ದಾರೆ ಎಂದು ಲೇವಡಿ ಮಾಡಿದರು.

ಪಕ್ಷದ ಮಹಾನ್ ನಾಯಕ ಬಿ‌.ಎಸ್‌.ಯಡಿಯೂರಪ್ಪನವರ ವಿರುದ್ಧವಾಗಿ ಕಾರ್ಯಕರ್ತರ ಜೊತೆ ಮಾತನಾಡುತ್ತಾರೆ. ಅದರ ಆಡಿಯೋಗಳು ನನ್ನ ಬಳಿ ಇದೆ, ಸಿದ್ಧಗಂಗಾಶ್ರೀಗಳ ವಿರುದ್ಧವಾಗಿಯೂ ಮಾತನಾಡಿದ್ದಾರೆ. ಅದರ ಆಡಿಯೋ ಕೂಡ ಇದೆ‌. ಶೀಘ್ರದಲ್ಲೇ ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆ ಎಂದು ರುದ್ರೇಶ್ ಬಾಂಬ್ ಸಿಡಿಸಿದ್ದಾರೆ.

4 ಕ್ಷೇತ್ರಗಳಿಗೂ ಟಿಕೆಟ್‌ ಘೋಷಣೆ

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ, ಮಂಗಳವಾರ ರಾತ್ರಿ ಬಿಜೆಪಿಯು ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದೇ ರೀತಿ ಚಾಮರಾಜನಗರ ಜಿಲ್ಲೆಯ 4 ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಚಾಮರಾಜನಗರ ವಿ.ಸೋಮಣ್ಣ, ಹನೂರು ಡಾ.ಪ್ರೀತಂ ನಾಗಪ್ಪ, ಕೊಳ್ಳೇಗಾಲ ಎನ್‌.ಮಹೇಶ್‌, ಗುಂಡ್ಲುಪೇಟೆಯಿಂದ ಸಿ.ಎಸ್.ನಿರಂಜನ್‌ಕುಮಾರ್ ಅವರಿಗೆ ಟಿಕೆಟ್‌ ನೀಡಲಾಗಿದೆ.

ಚಾಮರಾಜನಗರ ಜಿಲ್ಲೆಯಿಂದ ಸ್ಪರ್ಧಿಸಬೇಕೆಂಬ ವಸತಿ ಸಚಿವ ವಿ. ಸೋಮಣ್ಣ ಅವರ ಬಹುಕಾಲದ ಕನಸು ನನಸಾಗಿದ್ದು, ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರ ಬಿಟ್ಟುಕೊಟ್ಟು, ಗಡಿ ಜಿಲ್ಲೆ ಚಾಮರಾಜನಗರ ರಾಜಕೀಯ ಅಖಾಡಕ್ಕೆ ಕಾಲಿಟ್ಟಿದ್ದಾರೆ.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ವರುಣಾ ಮತ್ತು ಚಾಮರಾಜನಗರ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹ್ಯಾಟ್ರಿಕ್ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರನ್ನು ಒಮ್ಮೆಗೆ ಎದುರಿಸಲು ಸಜ್ಜಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+