ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಬೆನ್ನಲ್ಲೇ ಚಾಮರಾಜನಗರಕ್ಕೆ ಬಿ.ಎಲ್. ಸಂತೋಷ್ ಆಗಮನ: ಗುಪ್ತ ಸಭೆಯ ಉದ್ದೇಶವೇನು?
ಚಾಮರಾಜನಗರದಲ್ಲಿ ಬಿ.ಎಲ್. ಸಂತೋಷ್ ಬಿಜೆಪಿ ಪಕ್ಷದ ಮುಖಂಡರ ಜೊತೆ ಗುಪ್ತ ಸಭೆ ನಡೆಸಿದ್ದೇಕೆ?, ಹಾಗೂ ಸಭೆಯ ಉದ್ದೇಶವೇನು ಎಂದು ತಿಳಿಯಿರಿ.
ಚಾಮರಾಜನಗರ, ಫೆಬ್ರವರಿ, 23: ಚಾಮರಾಜನಗರ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆಯಿತು. ಯಾತ್ರೆಯ ಬಳಿಕ ಚಾಮರಾಜನಗರಕ್ಕೆ ರಾಜಕೀಯ ಚಾಣಕ್ಯ ಬಿ.ಎಲ್.ಸಂತೋಷ್ ಎಂಟ್ರಿ ಕೊಟ್ಟು ಪಕ್ಷದ ಪ್ರಮುಖರ ಜೊತೆ ಸಭೆ ನಡೆಸಿ ಗಮನ ಸೆಳೆದಿದ್ದಾರೆ.
ಚಾಮರಾಜನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸುತ್ತಿದ್ದಾರೆ. ಇದರಲ್ಲಿ ಬಿಜೆಪಿ ಶಾಸಕರು, ಮಂಡಲ ಪ್ರಮುಖರು ಮತ್ತು ಪಕ್ಷದ ಇತರೆ ಪದಾಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ.
ಹಳೇ ಮೈಸೂರು ಭಾಗ ಕಬ್ಜಕ್ಕೆ ಈಗಾಗಲೇ ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿದ್ದು, ಇದೀಗ ಜಿಲ್ಲಾ ಬಿಜೆಪಿ ಪ್ರಮುಖರ ಸಭೆಯನ್ನು ನಡೆಸುತ್ತಿದ್ದಾರೆ.

ಮಾಧ್ಯಮದವರನ್ನು ಹೊರಗಿಟ್ಟು ಸಭೆ
ಮುಂದಿನ ಚುನಾವಣೆಗೆ ಸಜ್ಜುಗೊಳ್ಳುವ ಬಗ್ಗೆ ಜಿಲ್ಲಾ ಪ್ರಮುಖರಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಪಕ್ಷ ಸಂಘಟನೆ ಬಗ್ಗೆ ಸಲಹೆ, ಸೂಚನೆಯನ್ನು ಸಂತೋಷ್ ಕೊಡುತ್ತಿದ್ದಾರೆ. ಒಟ್ಟಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ನಾಯಕರು ಚದುರಂಗದಟ ಶುರು ಮಾಡಿದ್ದಾರೆ. ಹಾಗೆಯೇ ತಮ್ಮ ಪಕ್ಷಗಳಲ್ಲಿನ ಒಡಕುಗಳನ್ನು ಸರಿ ಮಾಡಲು ವಿವಿಧ ರೀತಿಯ ಸಭೆಗಳನ್ನು ಕೂಡ ಮಾಡುತ್ತಿದ್ದಾರೆ.

ಹಾಗೆಯೇ ಚಾಮರಾಜನಗರದಲ್ಲಿ ಬಿ.ಎಲ್.ಸಂತೋಷ್ ಅವರು ಮಾಧ್ಯಮದವರನ್ನು ಹೊರಗಿಟ್ಟು ಪಕ್ಷದ ಮುಖಂಡದ ಜೊತೆ ಸಭೆ ನಡೆಸಿರುವುದು ಕುತೂಹಲ ಕೆರಳಿಸುವಂತಿದೆ. ಸಭೆಯ ಯಾವುದೇ ಗುಟ್ಟುಗಳನ್ನು ಬಿಟ್ಟುಕೊಡದೇ ಇರುವುದು ಕೂಡ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ ಬಿ.ಎಲ್. ಸಂತೋಷ್ ಅವರು ಗುಪ್ತ ಸಭೆಯ ಬಿಳಿಕ ಯಾವ ರೀತಿಯಾಗಿ ಪ್ರತಿಕ್ರಿಯೆ ನೀಡಲಿದ್ದಾರೆ ಅನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications