ಚಾಮರಾಜನಗರ: ಬರಗಿಕೆರೆ ಏರಿ ಒಡೆದೀತು ಹುಷಾರು!

Posted By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಸೆಪ್ಟೆಂಬರ್ 16: ಕಳೆದ ಕೆಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಕೆರೆಕಟ್ಟೆಗಳು ಒಣಗಿ ರೈತರು ಕೃಷಿ ಮಾಡಲಾಗದ ಸ್ಥಿತಿ ಎದುರಾಗಿತ್ತು. ಕೆರೆಕಟ್ಟೆಗಳಲ್ಲಿ ನೀರಿಲ್ಲದ ಕಾರಣ ಜಾನುವಾರುಗಳನ್ನು ಸಾಕಲಾಗದೆ ಮಾರಾಟ ಮಾಡಿ ರೈತರು ಕೈತೊಳೆದುಕೊಂಡಿದ್ದರು.

ಇದುವರೆಗೆ ಅನುಭವಿಸಿದ ಸಂಕಷ್ಟಕ್ಕೆ ಮುಕ್ತಿ ಎಂಬಂತೆ ಈ ಬಾರಿ ವರುಣ ಕೃಪೆ ತೋರಿದ್ದಾನೆ. ಇದುವರೆಗೆ ತುಂಬದ ಕೆರೆಕಟ್ಟೆಗಳು ಈಗ ತುಂಬಿವೆ. ಕೆಲವು ಕೆರೆಗಳ ನಿರ್ವಹಣೆಯಿಲ್ಲದೆ ಈಗಾಗಲೇ ಏರಿ ಒಡೆದು ನೀರು ಪೋಲಾಗಿದ್ದಲ್ಲದೆ, ರೈತರ ಕೃಷಿ ಬೆಳೆಗಳು ಕೂಡ ನಾಶವಾಗಿವೆ.

ಗುಂಡ್ಲುಪೇಟೆಯಲ್ಲಿ ಒಡೆದ ದೊಡ್ಡಕೆರೆ ಏರಿ: ರೈತರ ಆಕ್ರೋಶ

ದೊಡ್ಡಕೆರೆ, ಅಮಾನಿಕೆರೆಗಳಿಂದ ನೀರು ಪೋಲಾಗಿತ್ತು. ಈಗ ಇನ್ನೊಂದು ಕೆರೆಯ ಏರಿ ಒಡೆಯುವ ಸ್ಥಿತಿಗೆ ಬಂದು ನಿಂತಿದೆ. ಆ ಕೆರೆಯೇ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದ ಬರಗಿ ಕೆರೆ. ಈ ಕೆರೆ ಕಳೆದ ಆರು ವರ್ಷಗಳಿಂದ ಭರ್ತಿಯಾಗಿರಲಿಲ್ಲ. ಆದರೆ ಈ ಬಾರಿ ಭರ್ತಿಯಾಗಿದೆ. ಇದು ರೈತರಿಗೆ ಹರ್ಷ ತಂದಿದೆ. ಆದರೆ ಕೆರೆಯಿಂದ ನೀರು ಸೋರಿಕೆಯಾಗುತ್ತಿರುವುದರಿಂದ ಯಾವಾಗ ಕೆರೆ ಏರಿ ಒಡೆದು ಹೋಗುತ್ತೋ ಎಂಬ ಭಯವೂ ರೈತರನ್ನು ಕಾಡಲು ಆರಂಭಿಸಿದೆ.

ಕೆರೆಯ ನಿರ್ವಹಣೆಯಿಲ್ಲದ ಕಾರಣ ಮತ್ತು ಕಳೆದ ಕೆಲವು ವರ್ಷಗಳಿಂದ ನೀರು ತುಂಬದ ಕಾರಣ ಏಡಿ, ಇಲಿಗಳು ಬಿಲತೋಡಿ ವಾಸ್ತವ್ಯ ಹೂಡಿದ್ದು, ಅದರ ಮೂಲಕ ನೀರು ಸೋರಿಕೆಯಾಗುತ್ತಿದೆ ಎಂಬುದು ರೈತರ ಆರೋಪವಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ನೀರು ಸೋರಿಕೆಯನ್ನು ತಡೆಗಟ್ಟದಿದ್ದರೆ ಅಪಾಯ ತಪ್ಪಿದಲ್ಲ.

ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆ

ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆ

ಬರಗಿ ಕೆರೆಯು ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನಲ್ಲಿರುವ ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ಈ ಕೆರೆ ತುಂಬಿದರೆ ಇದರಿಂದ ಮದ್ದೂರು ವಲಯದ ವನ್ಯಜೀವಿಗಳ ದಾಹತಣಿಸಲಿದೆ.

ಹತ್ತಾರು ಗ್ರಾಮಗಳಿಗೂ ಅನುಕೂಲ

ಹತ್ತಾರು ಗ್ರಾಮಗಳಿಗೂ ಅನುಕೂಲ

ಅಷ್ಟೇ ಅಲ್ಲದೆ 34 ಹೆಕ್ಟೇರ್ ಪ್ರದೇಶದ ವಿಸ್ತೀರ್ಣದಲ್ಲಿರುವ ಕೆರೆಯಿಂದ ಬರಗಿ, ಹೊಂಗಹಳ್ಳಿ, ಮೂಖಹಳ್ಳಿ, ಮುಂಟೀಪುರ, ಹೊನ್ನಶೆಟ್ಟರಹುಂಡಿ ಸೇರಿದಂತೆ ಹತ್ತಾರು ಗ್ರಾಮಗಳ 151 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಸಿಗಲಿದ್ದು, ಕೃಷಿಕರು ವ್ಯವಸಾಯ ಮಾಡಬಹುದಲ್ಲದೆ, ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ.

ಸೋರಿಕೆಯಾಗುತ್ತಿರುವ ನೀರು

ಸೋರಿಕೆಯಾಗುತ್ತಿರುವ ನೀರು

ಕೆಲವು ತಿಂಗಳ ಹಿಂದೆ ಸುಮಾರು 40ಲಕ್ಷ ರೂ ಖರ್ಚು ಮಾಡಿ ಕೆರೆಯ ಹೂಳು ಎತ್ತಲಾಗಿದೆ. ಆದರೆ ಕೆರೆಯ ಏರಿಯನ್ನು ದುರಸ್ತಿ ಮಾಡದ ಕಾರಣದಿಂದಾಗಿ ನೀರು ಸೋರಿಕೆಯಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ವಹಿಸುವುದು ಅತ್ಯಗತ್ಯ

ವಹಿಸುವುದು ಅತ್ಯಗತ್ಯ

ಮಳೆ ಬಿದ್ದರೆ ಬರಗಿ ಕೆರೆಗೆ ಹೊಂಗಹಳ್ಳಿ ಹಾಗೂ ಕಡಸು ಉತ್ಪಾದನಾ ಕೇಂದ್ರದ ನಾಗಯ್ಯನಕಟ್ಟೆ ಪ್ರದೇಶದಿಂದ ಹೆಚ್ಚಿನ ನೀರು ಹರಿದುಬರುತ್ತಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಬಂದರೆ ಕೆರೆ ತುಂಬಿ ಕೋಡಿ ಬಿದ್ದರೆ ಅಚ್ಚರಿಯೇನಲ್ಲ. ಅದಕ್ಕೂ ಮುನ್ನ ಕೆರೆಯತ್ತ ಗಮನಹರಿಸಿ ಸೋರಿಕೆಯಾಗುತ್ತಿರುವ ನೀರನ್ನು ತಡೆಗಟ್ಟಿ ಕೆರೆಯ ಏರಿ ಒಡೆಯದಂತೆ ನೋಡಿಕೊಳ್ಳುವ ಅಗತ್ಯವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Yes, rain gave immense pleasure to many districts in Karnataka including Charamarajanagara district. But it creates problems too. Many lakes are damaging after heavey water flow in the lake due to rain.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ