ಚಾಮರಾಜನಗರ ದಸರಾ: ನಾನು ಇದೇ ಕಾಡಿನವನು, ಇಲ್ಲಿ ಪಿಡಿಒ ಆಗಿದ್ದೆ ಎಂದ ನಟ ನಾಗಭೂಷಣ್
ನಾನು ನಿಂ ಕಾಡಿನವನು, ಇಲ್ಲೇ ಪಿಡಿಒ ಆಗಿದ್ದೆ ಎಂದು ಟಗರುಪಲ್ಯ ಹೀರೋ ನಾಗಭೂಷಣ್ ಹೇಳಿದರು. ಚಾಮರಾಜನಗರದಲ್ಲಿ ಜಿಲ್ಲಾ ದಸರಾದ ಯುವ ದಸರಾ- ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಕೊಳ್ಳೇಗಾಲ ತಾಲೂಕಿನ ಟಗರಪುರ ನಮ್ಮೂರು, ಪಚ್ವಪ್ಪ ಹೋಟೆಲ್ ಲ್ಲಿ ದೋಸೆ ತಿಂದು, ನವೋದಯ ಶಾಲೆಗೆ ಹೋಗಲು ಬಸ್ ಗಾಗಿ ಕಾಯುತ್ತಿದ್ದೆ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.
2009-10 ರ ಬ್ಯಾಚ್‌ನ ಪಿಡಿಒ ಆಗಿದ್ದ ನಾಗಭೂಷಣ್ ತಮ್ಮ ಕೆಲಸವನ್ನು ನೆನೆದು ಆಗೆಲ್ಲಾ ಜಿಲ್ಲಾಧಿಕಾರಿ ಕಚೇರಿಯಿಂದ ಮೀಟಿಂಗ್‌ಗೆ ಫೋನ್ ಮಾಡುತ್ತಿದ್ದರು ಈಗ ಕಾರ್ಯಕ್ರಮಕ್ಕೆ ಕರೆಯುತ್ತಾರೆ, ಮೊದಲೆಲ್ಲಾ ಮೆಮೊ ಕೊಡುತ್ತಿದ್ದರು ಈಗ ಇನ್ವಿಟೇಷನ್ ಕೊಡುತ್ತಿದ್ದಾರೆ, ನಮ್ಮ ಜಿಲ್ಲೆ ಶ್ರೀಮಂತ ಜಿಲ್ಲೆ, ನೈಸರ್ಗಿಕವಾಗಿ ಸಂಪತ್ತಿರುವ ಜಿಲ್ಲೆ ಎಂದರು.

ಇವಾ ನಂ ಊರವಾ ಕಡ ಅಂದ್ರೆ ನನಗೆ ಖುಷಿ ಆಗುತ್ತದೆ, ನಮ್ಮ ಊರಿನ ಭಾಷೆಯನ್ನು ನಾವೇ ಮಾತನಾಡಬೇಕು- ನಾವೇ ಬೆಳೆಸಬೇಕು, ಅದೇ ರೀತಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ನಾವೇ ತೆಗೆದು ಹಾಕಬೇಕು. ಕೀಳರಿಮೆ ಬಿಟ್ಟು ಕೆಲಸ ಮಾಡಬೇಕು, ಶಿಕ್ಷಣವನ್ನೇ ಅಸ್ತ್ರ ಮಾಡಿಕೊಳ್ಳಬೇಕು ಎಂದು ಯುವಕರಿಗೆ ಸಲಹೆ ಕೊಟ್ಟರು.
ಚಾಮರಾಜನಗರ ರಾಯಭಾರಿಯಾಗಿದ್ದ ಅಪ್ಪು ಸರ್ ನೆನೆಸಿಕೊಳ್ಳುತ್ತೇನೆ, ಚಾಮರಾಜನಗರ ಅಂದರೆ ಅವರಿಗೆ ಬಹಳ ಪ್ರೀತಿ ಎಂದು ಪುನೀತ್ ನೆನೆದರು. ವಿದ್ಯಾಪತಿ ಚಿತ್ರ ಸದ್ಯದಲ್ಲೇ ಬಿಡಗಡೆಯಾಗಲಿದ್ದು ಈ ಚಿತ್ರದಲ್ಲಿ ನಿಮ್ಮನ್ನು ಚೆನ್ನಾಗಿ ನಗಿಸುತ್ತೇನೆ ಎಂದರು.












Click it and Unblock the Notifications