ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ದಾಳಿಗೆ ಆನೆಮರಿ ಬಲಿ
ಗುಂಡ್ಲುಪೇಟೆ, ಮಾರ್ಚ್ 7: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ದಾಳಿಗೆ ಮರಿಯಾನೆಯೊಂದು ಬಲಿಯಾದ ಘಟನೆ ಈಚೆಗೆ ನಡೆದಿದೆ. ಹುಲಿ ಯೋಜನೆಯ ಕುಂದಕೆರೆ ವಲಯಕ್ಕೆ ಸೇರಿದ ಲೊಕ್ಕೆರೆ ಬೀಟ್ ಬಳಿ ಸುಮಾರು 1 ವರ್ಷ 2 ತಿಂಗಳ ಆನೆಯ ಗಂಡು ಮರಿ ಹುಲಿ ದಾಳಿಗೆ ಬಲಿಯಾಗಿದೆ.
ಮಾರ್ಚ್ 6ರಂದು ಗಸ್ತು ನಡೆಸುತ್ತಿದ್ದ ಅರಣ್ಯ ಸಿಬ್ಬಂದಿಗೆ ಆನೆ ಮರಿಯ ಕಳೇಬರ ಪತ್ತೆಯಾಗಿದ್ದು, ಹತ್ತಿರ ಹೋಗಿ ನೋಡಿದಾಗ ಹುಲಿ ದಾಳಿಗೆ ಸಾವನ್ನಪ್ಪಿರುವುದು ಗೊತ್ತಾಗಿದೆ. ಕೂಡಲೇ ಅವರು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.[ಜಂಗಲ್ ಡೈರಿ: ಕಾರಣ ತಿಳಿಯದ ಕಾಡಿನ ಬೆಂಕಿಗೆ ಕಣ್ಮುಚ್ಚುತ್ತಿವೆ ಪ್ರಾಣಿ-ಪಕ್ಷಿ]

ಪಶುವೈದ್ಯರೊಂದಿಗೆ ಸ್ಥಳಕ್ಕೆ ತೆರಳಿದ ವಲಯಾರಣ್ಯಾಧಿಕಾರಿ ಶಿವಾನಂದ ಮಗ್ದುಂ, ಡಿಆರ್ ಎಫ್ ಓ ಶಬ್ಬೀರ್, ಗಾರ್ಡ್ ನವೀನ್ ಹಾಗೂ ಇತರರು ಭೇಟಿ ಮಾಡಿ ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ಮಾಡಿದರು. ಆನೆಯ ಕುತ್ತಿಗೆ ಭಾಗದಲ್ಲಿ ಹುಲಿಯು ಕಚ್ಚಿ ಮಾಂಸವನ್ನು ಕಿತ್ತು ತಿಂದ ಗುರುತುಗಳು ಕಂಡುಬಂದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications