ಚಾಮರಾಜನಗರ: 10 ಕುರಿ, 04 ಮೇಕೆ ಮರಿ ಸಾವು: ಪರಿಹಾರಕ್ಕೆ ಒತ್ತಾಯ
ಚಾಮರಾಜನಗರ, ಮೇ 10: ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 14 ಕುರಿಗಳು ಮೃತಪಟ್ಟಿವೆ. ಕುರಿಗಾಯಿಗಳು ಕಣ್ಣೀರು ಹಾಕಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ತಮ್ಮ ನೆರವಿಗೆ ಧಾರವಿಸುವಂತೆ ಆಗ್ರಹಿಸಿದ್ದಾರೆ.
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಇದೆ. ಈ ಪ್ರಕರಣದಲ್ಲಿ ಮೇಕೆ, ಕುರಿಗಳಿಗೆ ಇದೇ ಸೊಪ್ಪು ವಿಷವಾಗಿ ಪರಿಣಮಿಸಿದೆ. ಹೌದು, ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಮಹದೇವಮ್ಮ ಹಾಗೂ ದೇವಮ್ಮ ಎಂಬುವವರಿಗೆ ಸೇರಿದ ತಲಾ ಐದು ಸೇರಿದಂತೆ ಒಟ್ಟು 10 ಕುರಿಗಳು ಸಾವನ್ನಪ್ಪಿದೆ. ಮಾಲೀಕರು ಎಂದಿನಂತೆ ಮಲ್ಲಯ್ಯನಪುರ ಗುಡ್ಡದಲ್ಲಿ ಕುರಿಗಳನ್ನು ಮೇಯಿಸಿದ್ದಾರೆ. ಆದರೆ ವಿಷಕಾರಿ ಸೊಪ್ಪು ತಿಂದ 10 ಕುರಿಗಳು ಜಮೀನೊಂದರಲ್ಲಿ ಸಾವನ್ನಪ್ಪಿದೆ. ಇನ್ನು ಮೂರು ಕುರಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಪಶು ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.
ಕುರಿಗಾಯಿಗೆ ಪರಿಹಾರ ನೀಡಲು ಒತ್ತಾಯ
ಕುರಿ ಸಾಕಣಿಗೆ ಮಾಡುತ್ತಿದ್ದ ಮಾಲೀಕರು ಕಡು ಬಡವರಾಗಿದ್ದು, ಕುರಿಗಳನ್ನೆ ನಂಬಿ ಜೀವನ ನಡೆಸುತ್ತಿದ್ದರು. ಅವರು ಬದುಕಿಗೆ ಕುರಿಗಳೆ ಆಧಾರವಾಗಿದ್ದವು. ಇದೀಗ 10 ಕುರಿಗಳು ಏಕಾಎಕಿ ಸಾವನ್ನಪ್ಪಿರುವ ಕಾರಣ ಅಪಾರ ನಷ್ಟ ಉಂಟಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಈ ಕೂಡಲೇ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು. ಕಷ್ಟಕಾಲದಲ್ಲಿ ಕುರಿಗಾಯಿಗಳ ಸಂಕಷ್ಟಕ್ಕೆ ಬರಬೇಕು ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.
ಸಿಡಿಲು ಬಡಿತಕ್ಕೆ ನಾಲ್ಕು ಮೇಕೆ ಸಾವು
ಮಳೆಗಾಲವಾದ್ದರಿಂದ ಸಿಡಿಲು, ಗುಡುಗು ಹೆಚ್ಚಿರುತ್ತವೆ. ಇದು ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿ, ಪಕ್ಷಿಗಳಿಗೂ ಈ ಸಿಡಿಲುಗಳಿಂದ ಪ್ರಾಣ ಹಾನಿ ಸಂಭವ ಇರುತ್ತದೆ. ಇಂತದ್ದೆ ಪ್ರಕರಣದಲ್ಲಿ ಸಿಡಿಲ ಹೊಡೆತಕ್ಕೆ ನಾಲ್ಕು ಮೇಕೆಗಳು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸ ಮಾಲಂಗಿ ಗ್ರಾಮದಲ್ಲಿ ಜಗುರಿದೆ.

ಮೃತಪಟ್ಟ ನಾಲ್ಕು ಮೇಕೆಗಳು ಮಾಲಂಗಿ ಗ್ರಾಮದ ನಿವಾಸ ಕುಮಾರ ಎಂಬುವವರಿಗೆ ಸೇರಿದವು. ಶುಕ್ರವಾರ ಬೆಳಗ್ಗೆ ಎಂದಿನಂತೆ ಮನೆಯ ಮುಂಭಾಗದಲ್ಲಿ ಗೂಟಗಳಿಗೆ 8 ಆಡು ಮರಿಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ಈ ವೇಳೆ ಮಳೆಯ ವಾತಾವರಣ ನಿರ್ಮಾನವಾಗಿತ್ತು. ನೋಡ ನೋಡುತ್ತಿದ್ದಂತೆ ಆಡು ಮರಿಗಳ ಇದ್ದ ಜಾಗದಲ್ಲಿ ಸಿಡಿಲು ಬಡಿಯಿತು. ಒಮ್ಮೆ ನಾಲ್ಕು ಮರಿಗಳು ಮೃತಪಟ್ಟವು.
ಒಮ್ಮೆಲೆ ನಾಲ್ಕು ಆಡು ಮರಿಗಳನ್ನು ಕಳೆದುಕೊಂಡಿರುವ ಮಾಲೀಕ ಕುಮಾರ ಕಂಗಲಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು, ಪಶು ಇಲಾಖೆ ತಮಗೆ ಆರ್ಥಿಕ ನೆರವು ನೀಡಬೇಕು ಎಂದ ಅವರು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications