ಹೊಸ ವರ್ಷಕ್ಕೆ ಜೊಮ್ಯಾಟೊ ದಾಖಲೆ: ನಿಮಿಷಕ್ಕೆ 4,100 ಆರ್ಡರ್
ನವದೆಹಲಿ, ಜನವರಿ01: ಹೊಸ ವರ್ಷದ ದಿನದಂದು ಜೊಮ್ಯಾಟೊ ನಿಮಿಷಕ್ಕೆ 4,100 ಆರ್ಡರ್ ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಜನರು ಕರ್ಫ್ಯೂ ಮತ್ತು ಕೋವಿಡ್-19 ಕಾರಣದಿಂದಾಗಿ ಆನ್‌ಲೈನ್‌ನಲ್ಲೇ ಫುಡ್ ಆರ್ಡರ್ ಮಾಡಲು ಹೆಚ್ಚು ಮುಂದಾದರು.
ಜೊಮ್ಯಾಟೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ದೀಪಿಂದರ್ ಗೋಯಲ್ ಅವರ ಪ್ರಕಾರ ''ಆನ್‌ಲೈನ್ ಆಹಾರ ವಿತರಣಾ ವೇದಿಕೆಯು ಡಿಸೆಂಬರ್ 31, 2020 ರಂದು ತನ್ನ ಗರಿಷ್ಠ ವೇಗವನ್ನು ದಾಖಲಿಸಿದೆ. ನಿನ್ನೆ, ನಾವು ಕಳೆದ ಹೊಸ ವರ್ಷದ ಸಂಭ್ರಮಾಚರಣೆಗಿಂತ ಶೇಕಡಾ 60ರಷ್ಟು ಹೆಚ್ಚು ಆರ್ಡರ್ ಪಡೆದಿದ್ದೇವೆ. ನಿಮಿಷಕ್ಕೆ ಗರಿಷ್ಠ ಆದೇಶಗಳು (ಒಪಿಎಂ) ದರ 4,254'' ಎಂದು ಅವರು ಟ್ವೀಟ್ ಮಾಡಿದ್ದಾರೆ.
''ಆನ್‌ಲೈನ್ ಆರ್ಡರ್‌ನಲ್ಲಿ 20,000 ಬಿರಿಯಾನಿ, 16,000 ಪಿಜ್ಜಾಗಳು, ಅವರುಗಳಲ್ಲಿ ಶೇಕಡಾ 40ರಷ್ಟು ಹೆಚ್ಚುವರಿ ಚೀಸ್ ಪಿಜ್ಜಾಗಳು'' ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಜೊತೆಗೆ ಜೊಮ್ಯಾಟೊ ಅಪ್ಲಿಕೇಶನ್‌ನಲ್ಲಿನ ಆರ್ಡರ್ ವೇಗವು ಅದರ ಇತಿಹಾಸದಲ್ಲಿ ಇದುವರೆಗೂ ಕಂಡಿರದ ಅತಿ ಹೆಚ್ಚು ಆರ್ಡರ್ ಆಗಿದೆ ಎಂದು ಗೋಯಲ್ ಹೇಳಿದರು.












Click it and Unblock the Notifications