Get Updates
Get notified of breaking news, exclusive insights, and must-see stories!

ಭಾರತದ ಕೋಟ್ಯಧಿಪತಿಗಳಿಗೆ ಈ ವರ್ಷ $21 ಬಿಲಿಯನ್ ನಷ್ಟ

ಹಾಂಕಾಂಗ್/ಸೋಲ್, ಡಿಸೆಂಬರ್ 24: ಈ ವರ್ಷ ಬಿಲಿಯನೇರ್‌ಗಳ ಪಾಲಿಗೆ ಕಹಿ ನೀಡಿದೆ. ಜಗತ್ತಿನ ಅತಿ ವೇಗದ ಬೆಳವಣಿಗೆಯ ಪ್ರದೇಶವಾದ ಏಷ್ಯಾ, 2018ರಲ್ಲಿ ಆರ್ಥಿಕ ಹಿನ್ನಡೆ ಅನುಭವಿಸಿದೆ, ಅದರಲ್ಲಿಯೂ 500 ಸದಸ್ಯರ ಬ್ಲೂಮ್‌ಬರ್ಗ್‌ ಬಿಲಿಯನೇರ್ ಸೂಚ್ಯಂಕದಲ್ಲಿ ಸ್ಥಾನ ಪಡೆದಿರುವ ಏಷ್ಯಾದ 128 ಮಂದಿ ಒಟ್ಟಾರೆ $137 ಬಿಲಿಯನ್ ಡಾಲರ್ ಹಣವನ್ನು ಕಳೆದುಕೊಂಡಿದ್ದಾರೆ.

2012ರಿಂದ ಇದೇ ಮೊದಲ ಬಾರಿಗೆ ಏಷ್ಯಾ ಪ್ರದೇಶದಲ್ಲಿ ಬಿಲಿಯನೇರ್‌ಗಳ ಸಂಪತ್ತು ಕುಸಿತ ಕಂಡಿರುವುದು.

ಭಾರತದ 23 ಅತಿ ಶ್ರೀಮಂತರು ಒಟ್ಟಾರೆ $21 ಬಿಲಿಯನ್ ಹಣವನ್ನು ಕಳೆದುಕೊಂಡಿದ್ದಾರೆ. ಜಗತ್ತಿನ ಅತಿ ದೊಡ್ಡ ಉಕ್ಕು ತಯಾರಕ ಲಕ್ಷ್ಮಿ ಮಿತ್ತಲ್ $5.6 ಬಿಲಿಯನ್ ಅಂದರೆ, 29%ರಷ್ಟು ಒಟ್ಟಾರೆ ಸಂಪತ್ತಿನ ಪ್ರಮಾಣವನ್ನು ಕಳೆದುಕೊಂಡಿದ್ದಾರೆ. ಜಗತ್ತಿನ ನಾಲ್ಕನೆಯ ಅತಿ ದೊಡ್ಡ ಜನರಿಕ್ ಔಷಧ ತಯಾರಕ ಸನ್ ಫಾರ್ಮ್ಯಾಸಿಟಿಕಲ್ ಕೈಗಾರಿಕೆಯ ಸಂಸ್ಥಾಪಕ ದಿಲೀಪ್ ಸಾಂಘ್ವಿ ಅವರ ಸಂಪತ್ತು $4.6 ಬಿಲಿಯನ್‌ನಷ್ಟು ಕರಗಿದೆ.

year end special India 23 billionaires lose $21 billion in 2018 bloomberg index

ಆದರೆ, ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಮ್ಮ ಸಂಪತ್ತಿಗೆ $4 ಬಿಲಿಯನ್ ಹೆಚ್ಚುವರಿಯಾಗಿ ಸೇರಿಸಿಕೊಂಡಿದ್ದಾರೆ. ಜಪಾನಿನ ಅತಿ ಸಿರಿವಂತ ತಡಾಷಿ ಯನೈ $6.3 ಬಿಲಿಯನ್ ಸಂಪತ್ತನ್ನು ವೃದ್ಧಿಸಿಕೊಂಡಿದ್ದಾರೆ.

2018ರಲ್ಲಿ ಚೀನಾದ ತಂತ್ರಜ್ಞಾನ ವಲಯ ಭಾರಿ ಹೊಡೆತ ತಿಂದಿದೆ. ಭಾರತ ಮತ್ತು ದಕ್ಷಿಣ ಕೊರಿಯಾಗಳು ಕೂಡ ಇದರಿಂದ ಹೊರತಾಗಿಲ್ಲ. ಏಷ್ಯಾದ ಸಿರಿವಂತರ ಸಮಸ್ಯೆಗಳನ್ನು ನಿಭಾಯಿಸಲು ಬ್ಯಾಂಕುಗಳು ಮತ್ತು ಹಣ ವ್ಯವಸ್ಥಾಪಕರು ನೆರವಿಗೆ ಧಾವಿಸಿದ್ದರೂ ಈ ಇಳಿಕೆ ಉಂಟಾಗಿದೆ.

ಬ್ಲೂಮ್‌ಬರ್ಗ್ ಶ್ರೇಣಿಯಲ್ಲಿ ಸ್ಥಾನ ಪಡೆದಿರುವ 40 ಚೀನೀಯರ ಪೈಕಿ ಮೂರನೇ ಎರಡರಷ್ಟು ಮಂದಿ ಸಂಪತ್ತಿನ ನಷ್ಟ ಅನುಭವಿಸಿದ್ದಾರೆ.

ಈ ನಡುವೆ ತಂತ್ರಜ್ಞಾನ, ಜೈವಿಕ ತಂತ್ರಾಂಶ, ಔಷಧ ಕ್ಷೇತ್ರಗಳಿಂದ ನೂತನ ಕೋಟ್ಯಧಿಪತಿಗಳು ಈ ಸೂಚ್ಯಂಕದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕನಿಷ್ಠ ಆರು ಕೋಟ್ಯಧಿಪತಿಗಳು ಈ ವರ್ಷ ಮೃತಪಟ್ಟಿದ್ದಾರೆ. ಅವರು $29 ಬಿಲಿಯನ್ ಸಂಪತ್ತು ಬಿಟ್ಟುಹೋಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+