ವಿಪ್ರೋದಿಂದ ಕರ್ನಾಟಕದಲ್ಲಿ ಟೆಕ್ ನೇಮಕಾತಿ ಹೆಚ್ಚಳ!
ಬೆಂಗಳೂರು, ಫೆ. 04: ಭಾರತದ ಪ್ರಮುಖ ಸಾಫ್ಟ್ ವೇರ್ ಕಂಪನಿ ವಿಪ್ರೋ ಪ್ರಸಕ್ತ ವರ್ಷ ಹೊಸ ನೇಮಕಾತಿ ಬಗ್ಗೆ ಘೋಷಣೆ ಹೊರಡಿಸಿದೆ. ಕರ್ನಾಟಕದಲ್ಲಿ ಸುಮಾರು 25,000 ಹೆಚ್ಚುವರಿ ಟೆಕ್ ಉದ್ಯೋಗ ಅವಕಾಶ ಕಲ್ಪಿಸುವ ಭರವಸೆಯನ್ನು ವಿಪ್ರೋ ಚೇರ್ಮನ್ ಅಜೀಂ ಪ್ರೇಮ್ ಜಿ ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿರುವ ಮೂರು ದಿನಗಳ(ಫೆಬ್ರವರಿ 3 ರಿಂದ 5) ಜಾಗತಿಕ ಹೂಡಿಕೆದಾರರ ಸಮಾವೇಶ- ಇನ್ವೆಸ್ಟ್ ಕರ್ನಾಟಕ 2016 ಸಮಾರಂಭದಲ್ಲಿ ಮಾತನಾಡುತ್ತಾ ಮಹಾದಾನಿ ಅಜೀಂ ಪ್ರೇಮ್ ಜಿ ಅವರು ಈ ಘೋಷಣೆ ಮಾಡಿದ್ದಾರೆ.[ಇನ್ವೆಸ್ಟ್ ಕರ್ನಾಟಕ 2016 : ಉದ್ಯಮಿಗಳು ಹೇಳಿದ್ದೇನು?]

ಕರ್ನಾಟಕದಲ್ಲಿ ವಿಪ್ರೋ ಸಂಸ್ಥೆಯ ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ಘಟಕಗಳಿದ್ದು, ಸುಮಾರು 55,000 ಉದ್ಯೋಗಿಗಳಿದ್ದಾರೆ.












Click it and Unblock the Notifications