ವಿಪ್ರೋ ಉದ್ಯೋಗಿಗಳಿಗೆ ಸಂಬಳ ಏರಿಕೆ, ಭತ್ಯೆ ಹೆಚ್ಚಳ
ಬೆಂಗಳೂರು, ಜೂನ್ 10: ಬೆಂಗಳೂರು ಮೂಲದ ಸಾಫ್ಟ್ ವೇರ್ ರಫ್ತು ಸಂಸ್ಥೆ ವಿಪ್ರೋ ತನ್ನ ಉದ್ಯೋಗಿಗಳ ಸಂಬಳ, ಭತ್ಯೆ ಹೆಚ್ಚಳ ಮಾಡಿದೆ. ಜೂನ್ 01ರಿಂದ ಅನ್ವಯವಾಗುವಂತೆ ಹೆಚ್ಚಳ ಅನ್ವಯವಾಗಲಿದೆ.
ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಹಾಗೂ ಆನ್ ಸೈಟ್ ಅದರಲ್ಲೂ ಯುಎಸ್ ಹಾಗೂ ಯುರೋಪಿನಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸಿಂಗಲ್ ಡಿಜಿಟ್ ಹೆಚ್ಚಳ ಸಿಕ್ಕಿದೆ.
ಡಿಜಿಟಲ್ ತಂತ್ರಜ್ಞಾನ, ಮಷಿನ್ ಲರ್ನಿಂಗ್, ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಹೆಚ್ಚಿನ ಭತ್ಯೆ ಸಿಗಲಿದೆ. ಎಂಟ್ರಿ ಲೆವಲ್ ನಿಂದ 5 ವರ್ಷ ತನಕದ ಅನುಭವವುಳ್ಳವರಿಗೆ ಶೇ 6ರಿಂದ 8ರಷ್ಟು ಸಂಬಳ ಹೆಚ್ಚಾಲ ಸಿಗಲಿದೆ.

ಒಟ್ಟಾರೆ, ಆನ್ ಸೈಟ್ ಹಾಗೂ ಭಾರತದಲ್ಲಿನ ಉದ್ಯೋಗಿಗಳ ಭವಿಷ್ಯದ ಬಗ್ಗೆ, ಮುಂಬರುವ ತಂತ್ರಜ್ಞಾನದ ಬಗ್ಗೆ ಕಲಿಯುವಿಕೆ ಅನುಭವವುಳ್ಳವರಿಗೆ ಹೆಚ್ಚಿನ ಭತ್ಯೆ ಸಿಗುತ್ತಿದೆ ಎಂದು ವಿಪ್ರೋ ವಕ್ತಾರರು ಹೇಳಿದ್ದಾರೆ.
ಮಾರ್ಚ್ 31, 2019ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ವಿಪ್ರೋದ ಡಾಲರ್ ವಾರ್ಷಿಕ ಆದಾಯ 2.2 ಬಿಲಿಯನ್ ಡಾಲರ್ ನಂತೆ ಶೇ 9ರಷ್ಟು ಹೆಚ್ಚಳವಾಗಿತ್ತು.
4ನೇ ತ್ರೈಮಾಸಿಕದಲ್ಲಿ 359.1 ಮಿಲಿಯನ್ ಡಾಲರ್ ನಿವ್ವಳ ಆದಾಯ ಗಳಿಸಿತ್ತು. ಮಾರ್ಚ್ 31ರ ಎಣಿಕೆಯಂತೆ ವಿಪ್ರೋದಲ್ಲಿ 1.47 ಲಕ್ಷ ಉದ್ಯೋಗಿಗಳಿದ್ದು, 1 ರಿಂದ 5 ವರ್ಷ ಅನುಭವವುಳ್ಳವರೇ ಅಧಿಕ ಸಂಖ್ಯೆಯಲ್ಲಿದ್ದಾರೆ.












Click it and Unblock the Notifications