ಆರೋಪಿ ನೀರವ್ ಮೋದಿ ಪರಾರಿಯಾಗಿದ್ದು ಎಲ್ಲಿಗೆ?
ಬೆಂಗಳೂರು, ಫೆಬ್ರವರಿ 18: ಪಂಜಾಬ್ ನ್ಯಾಷನಲ್ ಬ್ಯಾಂಕ್‍ನ (ಪಿಎನ್‍ಬಿ) ಬಹು ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ನೀರವ್ ಮೋದಿ ಅವರು ನಾಪತ್ತೆಯಾಗಿರುವುದು ಎಲ್ಲಿಗೆ? ಸ್ವಿಟ್ಜರ್ಲೆಂಡ್ ಗಾ ಅಥವಾ ಯುಎಸ್ಎಗಾ ಎಂಬ ಪ್ರಶ್ನೆ ಎದ್ದಿದೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇಡಿ) ತನಿಖೆ ತೀವ್ರಗೊಳಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 280 ಕೋಟಿ ರೂ.ಗಳ ಅವ್ಯವಹಾರ ಮಾಡಿರುವ ನೀರವ್ ಮೋದಿ ಅವರ ಮನೆ, ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ 5 ಸಾವಿರಕ್ಕೂ ಕೋಟಿ ರುಗೂ ಅಧಿಕ ಆಭರಣಗಳನ್ನು ವಶಪಡಿಸಿಕೊಂಡಿದ್ದರು.

ಕೋಟ್ಯಧಿಪತಿ ಆಭರಣ ವಿನ್ಯಾಸಕ ನೀರವ್ ಮೋದಿ ಹಾಗೂ ಅವರ ಪ್ರತಿಷ್ಠಿತ ಆಭರಣ ಸಂಸ್ಥೆಗಳ ವಿರುದ್ಧ ವಂಚನೆ ಮತ್ತು ಅವ್ಯವಹಾರಗಳ ಸಂಬಂಧ ಕೇಂದ್ರೀಯ ತನಿಖಾ ದಳ-ಸಿಬಿಐಗೆ ಪಿಎನ್ ಬಿ ಎರಡು ದೂರುಗಳನ್ನು ನೀಡಿತ್ತು.
ಮನಿ ಲಾಂಡ್ರಿಂಗ್ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ಎಫ್ ಐಆರ್ ಹಾಕಿತ್ತು. ಇದಕ್ಕೂ ಮುನ್ನವೇ ನೀರವ್ ಮೋದಿ ಅವರು ನಾಪತ್ತೆಯಾಗಿದ್ದರು.












Click it and Unblock the Notifications