Whatsapp: ಕರೆಂಟ್ ಬಿಲ್, ವಾಟರ್ ಬಿಲ್ ವಾಟ್ಸಪ್ ಮೂಲಕವೇ ಕಟ್ಟಿ
ನವದೆಹಲಿ, ಫೆಬ್ರವರಿ 11: ದೇಶದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ವಾಟ್ಸಪ್ ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಾಟ್ಸಪ್ ಇನ್ನಷ್ಟು ಜನಸ್ನೇಹಿಯಾಗಲಿದ್ದು, ಕರೆಂಟ್ ಮತ್ತು ವಾಟರ್ ಬಿಲ್‌ಗಳನ್ನು ವಾಟ್ಸಪ್ ಮೂಲಕವೇ ಪಾವತಿ ಮಾಡುವ ಅವಕಾಶ ಶೀಘ್ರಲೇ ಲಭ್ಯವಾಗಲಿದೆ. ವಿಶ್ವವಾದ್ಯಂತ 3.5 ಬಿಲಿಯನ್ ಬಳಕೆದಾರರನ್ನು ವಾಟ್ಸಪ್ ಹೊಂದಿದೆ.
ಮೆಟಾ ಮಾಲೀಕತ್ವದ ಪ್ಲಾಟ್‌ಫಾರ್ಮ್ ವಾಟ್ಸಾಪ್ ಪೇಟಿಎಂ, ಗೂಗಲ್ ಪೇ ಮುಂತಾದ ಅಪ್ಲಿಕೇಶನ್‌ಗಳಿಗೆ ಪೈಪೋಟಿಯನ್ನು ನೀಡಲು ಮುಂದಾಗಿದೆ. ಆದ್ದರಿಂದ ವಾಟ್ಸಪ್ ಮೂಲಕ ನೇರವಾಗಿ ವಿದ್ಯುತ್ ಮತ್ತು ನೀರಿನ ಬಿಲ್ ಪಾವತಿಸಲು ಅವಕಾಶ ನೀಡಲು ವಾಟ್ಸಪ್ ಗಮನಹರಿಸಿದೆ.

ಈ ಕ್ರಮ ಹಲವಾರು ಜನರು ಅಪ್ಲಿಕೇಶನ್‌ಗಳನ್ನು ಬದಲಾಯಿಸುವ ಅಗತ್ಯವನ್ನು ಕಡಿಮೆ ಮಾಡಲಿದೆ. ಡಿಜಿಟಲ್ ಪಾವತಿಗಳನ್ನು ಸುಗಮಗೊಳಿಸಲಿದೆ. ಈಗಾಗಲೇ ಗೂಗಲ್ ಪೇ, ಫೋನ್‌ಪೇ, ಪೇಟಿಎಂ ಮೂಲಕ ವಿದ್ಯುತ್ ಮತ್ತು ನೀರಿನ ಬಿಲ್ ಕಟ್ಟುವ ಅವಕಾಶವಿದೆ.
ಪ್ರಾಯೋಗಿಕ ಪರೀಕ್ಷೆ ನಡೆದಿದೆ: ವಾಟ್ಸಪ್‌ನ ಆಂಡ್ರಾಯ್ಡ್ ಬೇಟಾ 2.25.3.15 ವರ್ಷನ್‌ನಲ್ಲಿ ಈಗಾಗಲೇ ಈ ಕುರಿತು ಫೀಚರ್ ಪರಿಚಯಿಸಲಾಗಿದೆ. ಇದನ್ನು ಪ್ರಾಯೋಗಿಕ ಪರೀಕ್ಷೆ ಮಾಡಲಾಗುತ್ತಿದೆ. ಪ್ರಾಯೋಗಿಕ ಪರೀಕ್ಷೆಗಳಲ್ಲಿ ಕಂಡು ಬರುವ ಸಮಸ್ಯೆಗಳನ್ನು ಪರಿಶೀಲಿಸಿ ಈ ಫೀಚರ್ ಅನ್ನು ಬಿಡುಗಡೆ ಮಾಡಲಾಗುತ್ತದೆ.
ವರದಿಗಳ ಪ್ರಕಾರ ಈ ಹೊಸ ಫೀಚರ್ ಮೂಲಕ ವಿದ್ಯುತ್, ನೀರು, ಮೊಬೈಲ್ ರೀಚಾರ್ಜ್, ಬಾಡಿಗೆ ಮತ್ತು ಇನ್ನಿತರ ಬಿಲ್ಲುಗಳನ್ನು ನೇರವಾಗಿ ಪಾವತಿಸಬಹುದು. ಇದು ಹಲವು ಅಪ್ಲಿಕೇಶನ್‌ಗಳ ಮೂಲಕ ಮನೆಯ ಖರ್ಚುಗಳನ್ನು ನಿರ್ವಹಣೆ ಮಾಡುವ ಜನರಿಗೆ ಇನ್ನಷ್ಟು ಅನುಕೂಲವನ್ನು ಒದಗಿಸುತ್ತದೆ.
ಈಗಾಗಲೇ ವಾಟ್ಸಪ್ ಹಣ ವರ್ಗಾವಣೆ ಮಾಡಲು ಯುಪಿಐ ಆಧಾರಿತ ಪಾವತಿ ವ್ಯವಸ್ಥೆಯಾದ ವಾಟ್ಸಪ್ ಪೇಯನ್ನು ಹೊಂದಿದೆ. ಈ ಫೀಚರ್‌ನೊಂದಿಗೆ ಬಿಲ್ ಪಾವತಿ ವ್ಯವಸ್ಥೆಯನ್ನು ಸೇರಿಸಿ ಬಿಲ್ ಪಾವತಿಯನ್ನು ಇನ್ನಷ್ಟು ಸರಳಗೊಳಿಸಲು ವಾಟ್ಸಪ್ ಮುಂದಾಗಿದೆ. 2020ರಲ್ಲಿ ಭಾರತದಲ್ಲಿ ವಾಟ್ಸಪ್ ಆರಂಭಿಸಿದ ವಾಟ್ಸಪ್ ಪೇ ವ್ಯವಸ್ಥೆಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಹ ಸಿಕ್ಕಿದೆ.
ಇತ್ತೀಚಿನ ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ವಾಟ್ಸಪ್‌ಗೆ ಯುಪಿಐ ಆಧಾರಿತ ಪಾವತಿ ಸೇವೆಯನ್ನು ಭಾರತದಲ್ಲಿ ಎಲ್ಲರಿಗೂ ವಿಸ್ತರಣೆ ಮಾಡಲು ಅನುಮತಿ ನೀಡಿದೆ. ಈ ಹಿಂದೆ 100 ಮಿಲಿಯನ್ ಬಳಕೆದಾರರಿಗೆ ಮಾತ್ರ ಈ ಸೇವೆ ಒದಗಿಸಬೇಕು ಎಂದು ವಾಟ್ಸಪ್‌ಗೆ ಷರತ್ತು ವಿಧಿಸಲಾಗಿತ್ತು.
ನವೆಂಬರ್ 2024ರ ಮಾಹಿತಿ ಪ್ರಕಾರ ಫೋನ್ ಪೇ ಶೇ 47.8, ಗೂಗಲ್ ಪೇ ಶೇ 3 ಮಾರುಕಟ್ಟೆಯನ್ನು ಹೊಂದಿವೆ. ಉಳಿದಂತೆ ನಂತರದ ಸ್ಥಾನದಲ್ಲಿ ಪೇಟಿಎಂ, ನವಿ, ಕ್ರೇಡ್ ಮತ್ತು ಅಮೇಜಾನ್ ಪೇ ಅಪ್ಲಿಕೇಶನ್‌ಗಳಿವೆ.
ಸದಾ ವಾಟ್ಸಪ್ ಬಳಕೆ ಮಾಡುವ, ವಿವಿಧ ಗ್ರೂಪ್‌ಗಳ ಮೂಲಕ ಸಂಪರ್ಕದಲ್ಲಿರುವ ಜನರಿಗೆ ವಾಟ್ಸಾಪ್ ಮೂಲಕವೇ ಬಿಲ್ ಪಾವತಿ ಮಾಡುವ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಜನರು ಎಲ್ಲಿಂದ ಬೇಕಾದರೂ ಬಿಲ್ ಪಾವತಿಸಬಹುದು.
-
Arecanut Price: ಶಿವಮೊಗ್ಗ ಮಾರುಕಟ್ಟೆಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾರ್ಚ್ 23ರ ದರಪಟ್ಟಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications