ವಾಟ್ಸಪ್ ಗೆ ಕಾಸು ಕೊಡಬೇಕಾಗಿಲ್ಲ, ಮಜಾ ಮಾಡಿ

Posted By:
Subscribe to Oneindia Kannada

ನವದೆಹಲಿ, ಜ.20: ಅತಿ ವೇಗವಾಗಿ ಜನಪ್ರಿಯತೆ ಗಳಿಸಿರುವ ಚಾಟಿಂಗ್ ಅಪ್ಲಿಕೇಷನ್ ವಾಟ್ಸಪ್ ಬಳಸಲು ಇನ್ಮುಂದೆ ಯಾವುದೇ ಶುಲ್ಕ ತೆರಬೇಕಾಗಿಲ್ಲ. ವಾರ್ಷಿಕ ಚಂದಾ ಶುಲ್ಕವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ವಿಶ್ವದೆಲ್ಲೆಡೆ ಮುಕ್ತವಾಗಿ, ಉಚಿತವಾಗಿ ಅಪ್ಲಿಕೇಷನ್ ಬಳಸಿ ಸಂಭಾಷಿಸಬಹುದಾಗಿದೆ.

ಈ ಮುಂಚೆ ವಾರ್ಷಿಕ ಚಂದಾ ದರ 1 ಡಾಲರ್ ಪ್ರತಿ ವರ್ಷದಂತೆ ಶುಲ್ಕ ಕಟ್ಟಬೇಕಾಗಿತ್ತು. ಇದರಲ್ಲಿ ಯಾವುದೇ ಗುಪ್ತ ತೆರಿಗೆ ಅಥವಾ ಶುಲ್ಕ ಇಲ್ಲ ಎಂದು ವಾಟ್ಸಪ್ ಹೇಳಿದೆ. ಕೋಟ್ಯಂತರ ಮಂದಿ ಪ್ರತಿನಿತ ಬಳಸುವ ಇನ್ನಷ್ಟೂ ಮಂದಿಗೆ ವಿಸ್ತಾರಗೊಳ್ಳುವುದು ಖಚಿತವಾಗುತ್ತದೆ.[ಎಫ್ ಬಿ-ವಾಟ್ಸಪ್ ಖರೀದಿ ಹಿಂದಿರುವ ಉದ್ದೇಶವೇನು?]

ಕುತೂಹಲದ ವಿಷಯವೆಂದರೆ ಭಾರತದಲ್ಲಿ ಇದುವರೆವಿಗೂ ಚಂದಾದಾರರಿಗೆ ಶುಲ್ಕ ವಿಧಿಸಿರಲಿಲ್ಲ. 2014ರಲ್ಲಿ ಸುಮಾರು 19 ಬಿಲಿಯನ್ ಡಾಲರ್ ನೀಡಿ ವಾಟ್ಸಪ್ ಅಪ್ಲಿಕೇಷನ್ ಅನ್ನು ಫೇಸ್ ಬುಕ್ ಖರೀದಿಸಿತ್ತು.

Good news for WhatsApp users

ಮುಂದಿನ ಹಂತದಲ್ಲಿ ಅನೇಕ ಸಂಸ್ಥೆಗಳು, ಬ್ಯಾಂಕ್ ಗಳ ಜೊತೆಗೆ ವಾಟ್ಸಪ್ ಮೂಲಕವೇ ವ್ಯವಹರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಜಾಹೀರಾತಿನ ಕಿರಿಕಿರಿ ಕೂಡಾ ಇರುವುದಿಲ್ಲ.

2009ರಲ್ಲಿ ಉಕ್ರೇನಿನಿಂದ ವಲಸೆ ಬಂದ ಕಾಲೇಜು ತ್ಯಜಿಸಿದ ಜಾನ್ ಕೌಮ್ ಹಾಗೂ ಸ್ಟಾನ್ ಫೋರ್ಡ್ ಅಲುಮ್ನಿ ಬ್ರಿಯಾನ್ ಆಕ್ಷನ್ ವಾಟ್ಸಪ್ ಸ್ಥಾಪಕರು. ಇಬ್ಬರು ಯಾಹೂ ಸಂಸ್ಥೆಯಲ್ಲಿ ಸಹದ್ಯೋಗಿಗಳಾಗಿದ್ದರುಒಮ್ಮೆ ಫೇಸ್ ಬುಕ್ ಬಳಿ ಕೆಲಸ ಕೇಳಿಕೊಂಡು ಹೋಗಿ ಕೆಲಸ ಸಿಗದೇ ಆಚೆ ಹೋಗಿದ್ದ ಬ್ರಿಯಾನ್ ಅಕ್ಟಾನ್ ಅನ್ನುವ ಯುವಕ ಕೊನೆಗೆ WhatsApp ಅನ್ನುವ ಮೆಸೆಂಜರ್ ಕಂಡು ಹಿಡಿದ.

ಈಗ ಆ ಕಂಪನಿಯನ್ನು ಫೇಸ್ ಬುಕ್ 16 ಬಿಲಿಯನ್ ಡಾಲರ್ ಕೊಟ್ಟು ಖರೀದಿಸಿದೆ. ವಿಶ್ವದಲ್ಲಿ 45 ಕೋಟಿಗೂ ಹೆಚ್ಚು ಜನರು ವಾಟ್ಸಪ್ ಸೇವೆ ಬಳಸುತ್ತಿದ್ದಾರೆ. ಮೊಬೈಲ್ ಇಂಟರ್ನೆಟ್ ಮೆಸೇಜಿಂಗ್ ಸರ್ವಿಸ್ ಕ್ಷೇತ್ರದಲ್ಲಿ ವಾಟ್ಸಪ್ ಅಗ್ರಗಣ್ಯ ಸಂಸ್ಥೆ ಎನಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: WhatsApp goes free now!
English summary
WhatsApp is now a totally free app as it has stopped charging $1 per year subscription fee to go completely free for its users across the world.
Please Wait while comments are loading...