ವೋಡಾಫೋನ್ ಗೆ ಸಾವಿರಾರು ಕೋಟಿ ತೆರಿಗೆ ಉಳಿತಾಯ!
ಮುಂಬೈ, ಅ.09: ವೊಡಾಫೋನ್ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್, 2007ರಲ್ಲಿ ಹಚ್ ಎಸ್ಸಾರ್ ಸಂಸ್ಥೆ ಸ್ವಾಧೀನಪಡಿಸಿಕೊಂಡ ವಹಿವಾಟಿಗೆ ಸಂಬಂಧಿಸಿದಂತೆ ಕಟ್ಟಬೇಕಿದ್ದ ಸಾವಿರಾರು ಕೋಟಿ ರು ತೆರಿಗೆ ಮತ್ತು ದಂಡದಿಂದ ಮಾಫಿ ಸಿಕ್ಕಿದೆ. ಅದಾಯ ತೆರಿಗೆ ಇಲಾಖೆ ವಿರುದ್ಧದ 8,500 ಕೋಟಿ ರು ಮೊತ್ತ ಕೇಸ್ ವೊಡಾಫೋನ್ ಕಂಪನಿ ಗೆದ್ದುಕೊಂಡಿದೆ.
2007-08ರಲ್ಲಿ ವೋಡಾಫೋನ್ ಇಂಡಿಯಾ ಪ್ರೈ. ಲಿಮಿಟೆಡ್ ತನ್ನ ಕಾಲ್ ಸೆಂಟರ್ ವಹಿವಾಟನ್ನು ಹಚಿನ್ಸನ್ ಗೆ ವರ್ಗಾಯಿಸುವ ಸಂದರ್ಭದಲ್ಲಿ ಪಡೆದುಕೊಂಡ ತೆರಿಗೆ ವಿನಾಯಿತಿ ರದ್ದು ಪಡಿಸಬೇಕು, 3,700 ಕೋಟಿ ರು ತೆರಿಗೆ ಸೇರಿದಂತೆ 8,500 ಕೋಟಿ ರು ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಕೇಸು ದಾಖಲಿಸಿತ್ತು. [ವೋಡಾಫೋನ್ ಸಂಸ್ಥೆಗೆ 11,000 ಕೋಟಿ ತೆರಿಗೆ ಮಾಫಿ]

ಅದರೆ, ತೆರಿಗೆ ಮೊತ್ತ ಸ್ಥಳೀಯ ಸಂಸ್ಥೆಗೆ ಮಾತ್ರ ಅನ್ವಯಿಸುತ್ತದೆ ಮೂಲ ಸಂಸ್ಥೆ(ವೋಡಾಫೋನ್) ಗೆ ಅನ್ವಯಿಸುವುದಿಲ್ಲ ಎಂದು ಯುಕೆ ಮೂಲಕದ ವೋಡಾಫೋನ್ ವಾದಿಸಿತ್ತು.
ಈ ಹಿಂದೆ ಇದೇ ರೀತಿ ಪ್ರಕರಣದಲ್ಲಿ 11,000 ಕೋಟಿ ರು ಗಳಷ್ಟು ಆದಾಯ ತೆರಿಗೆ ಮತ್ತು ದಂಡ ಪಾವತಿಸಬೇಕಾದ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಸಾಗರೋತ್ತರ ವಹಿವಾಟಿನ ಮೇಲೆ ತೆರಿಗೆ ವಿಧಿಸುವ ಅಧಿಕಾರವು ದೇಶಿ ತೆರಿಗೆ ಪ್ರಾಧಿಕಾರಗಳಿಗೆ ಇಲ್ಲ ಎಂದು ನ್ಯಾ. ಎಸ್ ಎಚ್ ಕಪಾಡಿಯಾ ಅವರು ಬಾಂಬೆ ಹೈಕೋರ್ಟ್ ತೀರ್ಪನ್ನು ರದ್ದುಪಡಿಸಿದ್ದರು.
2007ರ ಮೇ ತಿಂಗಳಿನಲ್ಲಿ ನಡೆದ ಸ್ವಾಧೀನ ಪ್ರಕ್ರಿಯೆಯಲ್ಲಿ, ಬ್ರಿಟನ್ ಮೂಲದ ವೊಡಾಫೋನ್, ಹಚಿಸನ್ ಎಸ್ಸಾರ್ ಲಿಮಿಟೆಡ್‌ನ (ಎಚ್‌ಇಎಲ್) ಶೇ 67ರಷ್ಟು ಪಾಲನ್ನು ಹಾಂಕಾಂಗ್ ಮೂಲದ ಹಚಿಸನ್ ಗ್ರೂಪ್‌ನಿಂದ ಖರೀದಿಸಿತ್ತು.
ವೊಡಾಫೋನ್ ಸಂಸ್ಥೆಯು 1994ರಿಂದಲೇ ದೇಶದಲ್ಲಿ ಅಸ್ತಿತ್ವದಲ್ಲಿ ಇದೆ. ಸ್ವಾಧೀನ ಪ್ರಕ್ರಿಯೆಯು ಆದಾಯ ತೆರಿಗೆಗೆ ಒಳಪಡುವುದಿಲ್ಲ ಎಂದು ವಾದಿಸಿದ್ದ ಜಗತ್ತಿನ ಅತಿದೊಡ್ಡ ಟೆಲಿಕಾಂ ಸಂಸ್ಥೆ ವೊಡಾಫೋನ್ ಗೆ ಈ ಗೆಲುವು ಸಿಕ್ಕಿರುವುದರಿಂದ ಟೆಲಿಕಾಂ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶಗಳು ಹೆಚ್ಚಾಗಲಿದೆ. ಈ ಆದೇಶದಿಂದ ಐಬಿಎಂ, ರಾಯಲ್ ಡಚ್ ಶೆಲ್ ಹಾಗೂ ನೋಕಿಯಾದಂಥ ಬಹುರಾಷ್ಟ್ರೀಯ ಕಂಪನಿಗಳಿಗೆ ತೆರಿಗೆ ವಿನಾಯಿತಿ ಪಡೆಯಲು ರಹದಾರಿ ಸಿಕ್ಕಿದ್ದಂತಾಗುತ್ತದೆ.












Click it and Unblock the Notifications