ವೋಡಾಫೋನ್ ಸಿಒಒ ಆಗಿ ನವೀನ್ ಛೋಪ್ರಾ ನೇಮಕ

ಮುಂಬೈ, ಫೆ. 9: ಜನಪ್ರಿಯ ವೋಡಾಫೋನ್ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಬದಲಾವಣೆ ಗಾಳಿ ಬೀಸಿದೆ. ನವೀನ್ ಛೋಪ್ರಾ ವಡಾಫೋನ್ ಇಂಡಿಯಾದ ನೂತನ ಸಿಒಒ ಆಗಿ ಏಪ್ರಿಲ್ 1 ರಿಂದ ಆಡಳಿತ ನಡೆಸಲಿದ್ದಾರೆ.

ಈ ಬಗ್ಗೆ ಸೋಮವಾರ ಅಧಿಕೃತ ಪ್ರಕಟಣೆ ನೀಡಿರುವ ಕಂಪನಿ, ಸದ್ಯ ಸಿಒಒ ಆಗಿರುವ ಸುನೀಲ್ ಸೂದ್ ಅವರ ಸ್ಥಾನಕ್ಕೆ ವೋಡಾಫೋನ್ ಬಿಸಿನಸ್ ಸರ್ವೀಸ್ ನಿರ್ದೇಶಕರಾಗಿರುವ ಛೋಪ್ರಾ ಬರಲಿದ್ದಾರೆ ಎಂದು ತಿಳಿಸಿದೆ.

mobile

2004 ರಲ್ಲಿ ವೋಡಾಫೋನ್ ಕಾರ್ಪೊರೇಟ್ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿ ಸೇರಿದ ಛೋಪ್ರಾ ಕಳೆದ ಹತ್ತು ವರ್ಷಗಳಲ್ಲಿ ಕಂಪನಿಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.

ಸುನೀಲ್ ಸೂದ್ ಅವರಿಗೆ ಕಂಪನಿಯ ಮುಖ್ಯಸ್ಥರ ಜವಾಬ್ದಾರಿ ನೀಡಲಿದ್ದು ಛೋಪ್ರಾ ಸಿಒಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಛೋಪ್ರಾ ಸ್ಥಾನಕ್ಕೆ ಯಾರು ನೇಮಕವಾದ್ದಾರೆ ಎಂಬುದನ್ನು ಕಂಪನಿ ಇನ್ನು ಬಹುರಂಗ ಮಾಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+