ಸನೋಫಿ ಇಂಡಿಯಾಕ್ಕೆ ವಿಜಯ್ ಮಲ್ಯ ಗುಡ್ ಬೈ

Subscribe to Oneindia Kannada

ಮುಂಬೈ, ಮಾರ್ಚ್, 24: ಸಾಕಷ್ಟು ಸಾಲ ಮಾಡಿಕೊಂಡು ವಿದೇಶಕ್ಕೆ ಹಾರಿರುವ ವಿಜಯ್ ಮಲ್ಯರ ರಾಜೀನಾಮೆ ಪರ್ವ ಮುಂದುವರಿದಿದೆ. ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಪ್ರಮುಖ ಔಷಧ ಸಂಸ್ಥೆ ಸನೋಫಿ ಇಂಡಿಯಾದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ.

33 ವರ್ಷಗಳ ಬಳಿಕ ಸನೋಫಿ ಇಂಡಿಯಾ ಲಿಮಿಟೆಡ್ (ಎಸ್​ಐಎಲ್) ಅಧ್ಯಕ್ಷ ಸ್ಥಾನದಿಂದ ಸಾಲಗಾರ ವಿಜಯ್ ಮಲ್ಯ ಕೆಳಗಿಳಿದಿದ್ದಾರೆ. ಕಂಪನಿಯ ಮುಂಬರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ದೇಶಕರಾಗಿ ಪುನರಾಯ್ಕೆ ಕೋರದೇ ಇರುವ ಬಗೆಗಿನ ತಮ್ಮ ನಿರ್ಧಾರವನ್ನು ಮಲ್ಯ ತಿಳಿಸಿದ್ದಾರೆ ಎನ್ನಲಾಗಿದೆ.['ನಾನು ದಂಡ ಕಟ್ಬೇಕಿದ್ರೆ ಮಲ್ಯ ಸಾಲ ಪಾವತಿಯಾಗ್ಬೇಕ್!']

vujay mallya

ವಿಜಯ್ ಮಲ್ಯ 1973ರಲ್ಲಿ ಮೊತ್ತ ಮೊದಲ ಬಾರಿಗೆ ಸನೋಫಿ ಇಂಡಿಯಾ ನಿರ್ದೇಶಕರಾಗಿ ಸೇರ್ಪಡೆಯಾಗಿದ್ದರು. ಹೊಚೆಸ್ಟ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಕಂಪನಿ ಕೆಲಸ ಮಾಡುತ್ತಿತ್ತು. ಬಳಿಕ 1983ರ ಡಿಸೆಂಬರ್​ನಿಂದ ಮಲ್ಯ ಅವರು ಕಂಪನಿಯ ಅಧ್ಯಕ್ಷರಾಗಿ ನಿಯೋಜನೆಗೊಂಡಿದ್ದರು.[ಟಿಪ್ಪು ಖಡ್ಗ ತಂದ ಮಲ್ಯರ ಗತಕಾಲದ ವೈಭವ ಹೇಗಿತ್ತು?]

ಮಲ್ಯ ಕೆಲ ದಿನಗಳ ಹಿಂದೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಿರ್ದೇಶಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕಿದೆ. ಮಲ್ಯ ಎಸ್ ಬಿಎಂ ಸೇರಿದಂತೆ 17 ಬ್ಯಾಂಕುಗಳಿಗೆ ಸುಮಾರು 9000 ಸಾವಿರ ಕೋಟಿ ರು. ಮರುಪಾವತಿ ಮಾಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Beleaguered business tycoon Vijay Mallya has decided to step down as the chairman of pharma major Sanofi India, nearly 33 years after he assumed the post, the company said in a statement here. Mallya conveyed his decision not to seek re-election as a director at the company's ensuing Annual General Meeting, said the Sanofi statement issued late Wednesday.
Please Wait while comments are loading...