ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಸ್ತಿದಾರ ಮಲ್ಯರಿಂದ ಸಾಲ ವಸೂಲಿ ಕಷ್ಟ ಕಷ್ಟ

By Mahesh
|
Google Oneindia Kannada News

ಬೆಂಗಳೂರು, ಸೆ.2: ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಅತಿ ಹೆಚ್ಚು ಸಾಲ ಪಡೆದಿರುವ ಟಾಪ್ 50 ಕಂಪನಿಗಳ ಪೈಕಿ ವಿಜಯ್ ಮಲ್ಯ ಒಡೆತನದ ಕಂಪನಿಗಳು ಮುಂಚೂಣಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಅತಿ ಹೆಚ್ಚು ಸಾಲಗಾರ ಎಂಬ ಹಣೆಪಟ್ಟಿ ಯುಬಿ ಸಮೂಹ, ಕಿಂಗ್ ಫಿಷರ್ ಸಂಸ್ಥೆಯ ವಿಜಯ್ ಮಲ್ಯ ಅವರಿಗೆ ದಕ್ಕಿದ ಬೆನ್ನಲ್ಲೇ ಮದ್ಯದ ದೊರೆ ವಿಜಯಮಲ್ಯ ಅವರನ್ನ ಸುಸ್ತಿದಾರ (wilful defaulter) ಎಂದು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಆದರೆ, ಈ ರೀತಿ ಘೋಷಿಸುವುದು ಸರಿಯಲ್ಲ ಎಂದು ಕಿಂಗ್ ಫಿಷರ್ ಸಂಸ್ಥೆ ಪ್ರತಿಕ್ರಿಯಿಸಿದೆ. [ಸಾಲದ ವಿಷ್ಯದಲ್ಲೂ ಮಲ್ಯ ಇಸ್ ಕಿಂಗ್]

ಕಿಂಗ್ ಫಿಷರ್ ಸಂಸ್ಥೆಯ ಮೂವರು ನಿರ್ದೇಶಕರೂ ಸೇರಿ ವಿಜಯ್ ಮಲ್ಯ ಅವರನ್ನು ಸುಸ್ತಿದಾರ ಎಂದು ಪರಿಗಣಿಸಬಾರದು ಎಂದು ಸುಪ್ರೀಂಕೋರ್ಟಿಗೆ ಮೊರೆ ಹೊಕ್ಕಿದ್ದಾರೆ. ಅದರೆ, ಸುಸ್ತಿದಾರನೆಂದರೂ ಸರಿ ಸಾಲಗಾರ ಎಂದರೂ ಸರಿ ಮಲ್ಯರಿಗೆ ಮಾತ್ರ ಸಾಲ ಹಿಂತಿರುಗಿಸುವ ಉದ್ದೇಶ ಇದ್ದ ಹಾಗೇ ಕಾಣುವುದಿಲ್ಲ.

ಬ್ಯಾಂಕಿಂಗ್ ನಲ್ಲಿ ಸಾಕಷ್ಟು ಸುಧಾರಣೆ, ಉದಾರೀಕರಣ, ನಿಯಮಗಳ ಬದಲಾವಣೆಗಳ ನಡುವೆಯೂ ಬ್ಯಾಂಕಿನಿಂದ ಸಾಲ ಪಡೆದು ಹಿಂತಿರುಗಿಸದ ಕಾರ್ಪೊರೆಟ್ ಸಂಸ್ಥೆಗಳ ಸಂಖ್ಯೆ ಬೆಳೆಯುತ್ತಲೆ ಇದೆ. ಅದರಲ್ಲೂ ಮಲ್ಯರಂಥ ಚಾಣಕ್ಷ ಸಾಲಗಾರ ಇದ್ದರೆ ಮುಗಿದೇ ಹೋಯ್ತು

ಮಲ್ಯ ತಲೆ ಮೇಲೆ ಹೊತ್ತಿರುವ ಸಾಲ ಎಷ್ಟು?

ಮಲ್ಯ ತಲೆ ಮೇಲೆ ಹೊತ್ತಿರುವ ಸಾಲ ಎಷ್ಟು?

ಬ್ಯಾಂಕಿಂಗ್ ಕ್ಷೇತ್ರದ ಅಂದಾಜು ಪ್ರಕಾರ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಗೆ 8,000 ಕೋಟಿ ರೂ ಸಾಲ ನೀಡಲಾಗಿದೆ. ಇದಕ್ಕೆ ವಿಜಯ್ ಮಲ್ಯ ಅವರು ವೈಯಕ್ತಿಕ ಗ್ಯಾರಂಟಿ ಜತೆಗೆ ಕಂಪನಿ ಷೇರುಗಳು, ಯುಬಿ, ಯುನೈಟೆಡ್ ಸ್ಪಿರೀಟ್ಸ್ ಕಂಪನಿಯ ಷೇರುಗಳ ಖಾತ್ರಿ ನೀಡಿದ್ದರು.

ಮಾರುಕಟ್ಟೆಯಲ್ಲಿನ ಮಾತುಕತೆ ಪ್ರಕಾರ ಮಲ್ಯ ಅವರ ತಲೆ ಮೇಲೆ ಸರಿ ಸುಮಾರು 12,000 ಕೋಟಿ ರೂ ಸಾಲ ಇದೆಯಂತೆ.
ಬ್ಯಾಂಕಿನ ಸಾಲ ನಿಯಮ ಏನು ಹೇಳುತ್ತದೆ?

ಬ್ಯಾಂಕಿನ ಸಾಲ ನಿಯಮ ಏನು ಹೇಳುತ್ತದೆ?

ಸಾಲದ ಖಾತೆಯಲ್ಲಿ 91ನೇ ದಿವಾದರೂ ವಾಪಸಾತಿ ಬಾರದಿದ್ದರೆ ಸಾಲ ನೀಡಿದ ಕಂಪನಿಯ ಆಸ್ತಿಪಾಸ್ತಿ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು, ಗ್ಯಾರಂಟಿ ನೀಡಿದ ಇತರೆ ಕಂಪನಿ ಅಥವಾ ವ್ಯಕ್ತಿಯ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಬಹುದಾಗಿದೆ. ಸದ್ಯದ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಹರಾಜು ಹಾಕಬಹುದಾಗಿದೆ.

ಅಂದರೆ 2014ನೇ ಸಾಲಿನ ಆರ್ಥಿಕ ವರ್ಷ ಆರಂಭಕ್ಕೂ ಮುನ್ನ ಕೂಡಾ ವಿಜಯ್ ಮಲ್ಯ ಅವರ ಕಿಂಗ್ ವಿಮಾನ ಒಂದು ಪೈಸೆಯನ್ನೂ ಮರುಪಾವತಿ ಮಾಡಿಲ್ಲ. ಕೈಯಲ್ಲಿ ಮೊತ್ತ ಇಲ್ಲ ಎಂದು ಮಲ್ಯ ಕೈಯಾಡಿಸಿದ್ದಾರೆ. ಸುಸ್ತಿದಾರನೆಂದರೂ ಸರಿ ಸಾಲ ವಾಪಸ್ ಪಡೆಯುವುದು ಕಷ್ಟ ಕಷ್ಟ.

17 ಬ್ಯಾಂಕ್ ಗಳ ಸಾಲದ ಕಥೆ ಏನು?

17 ಬ್ಯಾಂಕ್ ಗಳ ಸಾಲದ ಕಥೆ ಏನು?

2015ರ ವೇಳೆಗೆ ಸಾಲ ಒಂದು ಹಂತ ಮುಟ್ಟಿರುತ್ತದೆ. ಅಲ್ಲಿಗೆ ಮಲ್ಯ ಅವರ ಸಾಲ ವಾಪಸ್ ಪಡೆಯಲು ಮುಂದಾಗಿರುವ ಎಸ್ ಬಿಐ ಸೇರಿದಂತೆ 17 ಬ್ಯಾಂಕುಗಳ ಅಧ್ಯಕ್ಷರು, ಆಡಳಿತ ಮಂಡಳಿ ಬದಲಾಗಿರುತ್ತದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕೃಪಾ ಕಟಾಕ್ಷ ತೋರಿ ಸಾಲ ವಜಾ ಮಾಡಿದರೆ(ಯಾವ ಕಾರಣಕ್ಕೂ ಜನ ಒಪ್ಪಲ್ಲ ಬಿಡಿ) ಬ್ಯಾಂಕ್ ಗಳು ಒಂದಷ್ಟು ಹಣ ಕಾಣಬಹುದು. ಇಲ್ಲದಿದ್ದರೆ, ಮಲ್ಯ ಅವರಿಂದ ಹಣ ಹಿಂಪಡೆಯುವುದು ಕಷ್ಟ. ಇಷ್ಟಕ್ಕೂ ಮಲ್ಯ ಬಳಿ ದುಡ್ಡು ಇಲ್ವ?

ವಿಜಯ್ ಮಲ್ಯ ಆಸ್ತಿ ಮೊತ್ತ ಎಷ್ಟು?

ವಿಜಯ್ ಮಲ್ಯ ಆಸ್ತಿ ಮೊತ್ತ ಎಷ್ಟು?

ಮಲ್ಯ ಅವರ ಹತ್ತಿರ ಈಗ ಇರುವ ಆಸ್ತಿ ಲೆಕ್ಕಾಚಾರ ಹಾಕಿದರೆ, 3,800 ರಿಂದ 4 ಸಾವಿರ ಕೋಟಿ ರು ತೂಗುತ್ತಾರೆ. ಸಾಲದ ಪ್ರಮಾಣದ ಅರ್ಧದಷ್ಟು ತೀರಿಸಬಹುದು. ಆದರೆ, ಮಲ್ಯರಿಗೆ ಸಾಲ ತೀರಿಸುವ ಮನಸ್ಸೇ ಇಲ್ಲ.

* UB groupನ ಮಾರುಕಟ್ಟೆ ಮೌಲ್ಯ 3,261 ಕೋಟಿ ರು (17.35 % ಮಲ್ಯ ಪಾಲುದಾರಿಕೆ)
* ಯುನೈಟೆಡ್ ಸ್ಪಿರೀಟ್ಸ್ ಮೌಲ್ಯ: 413 ಕೋಟಿ ರು (1.20 %)
* ಮಂಗಳೂರು ಕೆಮಿಕಲ್ಸ್ : 16 ಕೋಟಿ ರು (2.01%)
* ಯುಬಿ ಹೋಲ್ಡಿಂಗ್ಸ್ : 106 ಕೋಟಿ ರು (44.47%)
* ಮೆಕ್ ಡೊವೆಲ್ ಹೋಲ್ಡಿಂಗ್ಸ್ : 8 ಕೋಟಿ ರು (14.49%0
* ಯುಬಿ ಇಂಜಿನಿಯರಿಂಗ್: 0 (0.91%)
* ಕಿಂಗ್ ಫಿಷರ್ ಏರ್ ಲೈನ್ಸ್ : 20 ಕೋಟಿ ರು (8.49 %)
ಒಟ್ಟಾರೆ : 3824 ಕೋಟಿ ರು

ಮಲ್ಯರಿಗೆ ನೀಡಿರುವ ಸರಕಾರಿ ಬ್ಯಾಂಕುಗಳು

ಮಲ್ಯರಿಗೆ ನೀಡಿರುವ ಸರಕಾರಿ ಬ್ಯಾಂಕುಗಳು

State Bank of India, IDBI Bank, Punjab National Bank ಮತ್ತು Bank of Baroda, ICICI Bank ಮತ್ತು J&K Bank ಪ್ರಮುಖವಾದವು.

ಎಸ್ ಬಿಐ 1600 ಕೋಟಿ ರು.ಗೂ ಅಧಿಕ ಸಾಲ ನೀಡಿದ್ದರೆ, ಪಿಎನ್ ಬಿ ಹಾಗೂ ಐಡಿಬಿಐ 800 ಕೋಟಿ ರು, ಬಿಒಐ ಹಾಗೂ ಬಿಒಬಿ ಕ್ರಮವಾಗಿ 650 ಮತ್ತು 550 ಕೋಟಿ ರೂ. ಸಾಲಗಳನ್ನು ನೀಡಿವೆ

ಮದ್ಯದಂಗಡಿ ನಂಬಿಕೊಳ್ಳುವಂತಿಲ್ಲ

ಮದ್ಯದಂಗಡಿ ನಂಬಿಕೊಳ್ಳುವಂತಿಲ್ಲ

ಯುನೈಟೆಡ್ ಸ್ಪಿರೀಟ್ಸ್ ಹಾಗೂ ಡಿಯಾಜಿಯೋ ಸಂಸ್ಥೆ ಒಪ್ಪಂದ ಮತ್ತೆ ತೂಗೂಯ್ಯಾಲೆಯಲ್ಲಿದೆ. ಬಿಯರ್ ಮಾರುಕಟ್ಟೆ ದಿಗ್ಗಜ Heineken ಜೊತೆ ಕೈಜೋಡಿಸಿರುವುದರಿಂದ ಯುಬಿ ಉಳಿಸಿಕೊಳ್ಳಲು ಮಿಕ್ಕೆಲ್ಲ ಆಸ್ತಿ ಪಾಸ್ತಿ ಅಡ ಇಡಲು ಮಲ್ಯ ಸಿದ್ದರಿದ್ದಾರೆ ಎಂದಾಯಿತು.

ಕಿಂಗ್ ಫಿಷರ್ ಏರ್ ಲೈನ್ಸ್ ಕಂಪೆನಿಗೆ ವಿಮಾನ ಖರೀದಿಸಲು ಫ್ರಾನ್ಸ್ ಮೂಲದ ಬಿಎನ್ ಪಿ ಪಾರಿಬಾಸ್ ಕಂಪೆನಿ 200 ಕೋಟಿ ರೂ. ಸಾಲ ನೀಡಿತ್ತು. ಈ ಸಮಯದಲ್ಲಿ ಸಾಲಕ್ಕೆ ಯುಬಿ ಸಮೂಹ ಸಂಸ್ಥೆಯನ್ನು ಖಾತ್ರಿಯಾಗಿ ನೀಡಲಾಗಿತ್ತು. ಇದನ್ನು ಹಿಂತಿರುಗಿಸಿಲ್ಲ . ಹಾಗಾಗಿ ಮದ್ಯದಂಗಡಿ ಮುಚ್ಚಿ ಸಾಲ ವಾಪಸ್ ಮಾಡುವಂತೆ ಆಗ್ರಹ ಕೇಳಿ ಬಂದಿದೆ.
ಆಸ್ತಿ ಪಾಸ್ತಿ ಮಾರಿದರೂ ದುಡ್ಡು ಹುಟ್ಟಲ್ಲ

ಆಸ್ತಿ ಪಾಸ್ತಿ ಮಾರಿದರೂ ದುಡ್ಡು ಹುಟ್ಟಲ್ಲ

Sarfesi Act (Securitsation and reconstruction of financial assets and enforcement of security interest act)- 2002 ಕಾಯಿದೆ ಇದೆಯದರೂ ಮಲ್ಯ ಜಾಣತನದಿಂದ ಇದರ ವ್ಯಾಪ್ತಿಗೂ ನಿಲುಕದಂತೆ ಸಾಲ ಮಾಡಿದ್ದಾರೆ.

ಮಲ್ಯರ ಕಂಪನಿಗಳ ಮಾರುಕಟ್ಟೆ ಮೌಲ್ಯ 4 ಸಾವಿರ ಕೋಟಿ ರು ಇದ್ದರೂ ಬ್ಯಾಂಕುಗಳ ಕೈಗೆ ಸುಲಭಕ್ಕೆ ದಕ್ಕುತ್ತಿಲ್ಲ. ಮುಂಬೈನ ಕಿಂಗ್ ಫಿಷರ್ ವಿಲ್ಲಾ, ಕೇಪ್ ಟೌನ್ ನ ಬಂಗಲೆ(ಜಿಂಬಾಬ್ವೆ ಉದ್ಯಮಿಗೆ 40 ಕೋಟಿಗೆ ಸೇಲ್), ಕಿಂಗ್ ಫಿಷರ್ ಏರ್ ಲೈನ್ಸ್ 4ಕೋಟಿ ಷೇರುಗಳು,
ಫೋರ್ಸ್ ಇಂಡಿಯಾ ಎಫ್ 1 ಟೀಂ, ರೇಸಿಂಗ್ ಕುದುರೆಗಳ ಮಾರಾಟಕ್ಕೆ ಬ್ಯಾಂಕ್ ಗಳು ಆಗ್ರಹಿಸಿವೆ.

English summary
Vijay Mallya, who earlier was known as King of Good times, now got another name -- 'Wilful Defaulter'. State-run United Bank of India on Monday, Sept 1 became the first lender to declare debt-ridden Kingfisher Airlines and its promoter Vijay Mallya as wilful defaulters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X