ಕಿಂಗ್ಸ್ ಆಫ್ ಗುಡ್ ಟೈಮ್ಸ್ ವಿಜಯ್ ಮಲ್ಯ @60, ಚಿಯರ್ಸ್
ಬೆಂಗಳೂರು, ಡಿ.17: ಬಂಡ ಅಂದರೆ ಅಲ್ಲ ನಾನು ಬಹದ್ದೂರ್ ಎನ್ನುವ, ಸುಸ್ಥಿದಾರನಾದರೂ ಸುಸ್ತಾದಾಗ, ತಲೆ ಮೇಲೆ ಸಾವಿರಾರು ಕೋಟಿ ರು ಸಾಲವಿದ್ದರೂ ಸಕತ್ ಎಂಜಾಯ್ ಮಾಡುವ ಉದ್ಯಮಿ ವಿಜಯ್ ಮಲ್ಯರಿಗೆ ಈಗ ಷಷ್ಠಿಪೂರ್ತಿ ಸಮಾರಂಭದ ಸಂಭ್ರಮ.
ಮಲ್ಯ ಅವರು ಬಹಳ ಭಯಭಕ್ತಿಯಿಂದ ನಡೆದುಕೊಳ್ಳುವ ಇಷ್ಟ ದೇವತೆ ಸುಬ್ರಹ್ಮಣ್ಯ ಸ್ವಾಮಿಗೂ ಇಂದು ಷಷ್ಠಿ. ಮಲ್ಯ ಅವರು ಡಿ.18ರಿಂದ ಮೂರು ದಿನಗಳ ಕಾಲ ಹಾಡು, ಕುಣಿತ, ಮೋಜು ಮಸ್ತಿ, ಗುಂಡು ತುಂಡಿನ ಬರ್ಥ್ ಡೇ ಬ್ಯಾಷ್ ನಡೆಯಲಿದೆ.
ಮಲ್ಯ ಅವರ 60ನೇ ವರ್ಷದ ಹುಟ್ಟುಹಬ್ಬ ಸಮಾರಂಭ ಗೋವಾದಲ್ಲಿ ಆಯೋಜನೆಗೊಂಡಿದ್ದು, 500 ರಿಂದ 600 ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದ ಮೆನು ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.[ಖಾಲಿ ಕೈಯ ಕುಬೇರ ಮಲ್ಯ, ಈಗಲೂ ಯುಬಿ ಅಧಿಪತಿ]

ಗೋವಾದ ತಾಜ್ ವಿವಂತಾಗೆ ಹೊಂದಿಕೊಂಡಂತೆ ಇರುವ ವಿಲ್ಲಾದಲ್ಲಿ ಏನಿರುತ್ತೆ ಏನಿರಲ್ಲ, ಬರ್ಥ್ ಡೇ ನೆಪದಲ್ಲಿ ಏನೇನು ಡೀಲ್ ಮಾಡಿಕೊಳ್ಳುತ್ತಾರೋ ಮಲ್ಯ ಅವರಿಗೇ ಗೊತ್ತು. ಸದ್ಯಕ್ಕಂತೂ 17ಕ್ಕೂ ಅಧಿಕ ಬ್ಯಾಂಕುಗಳಿಂದ ಪಡೆದ ಸಾಲದ ಬಗ್ಗೆ ತಲೆಕೆಡಿಸಿಕೊಳ್ಳದ ಮಲ್ಯ ಅವರು ಜಾಲಿ ಮೂಡ್ ನಲ್ಲಿದ್ದಾರೆ. ಕಿಂಗ್ ಆಫ್ ಗುಡ್ ಟೈಮ್ಸ್ ಮಲ್ಯಗೊಂದು ವಿಷಸ್ ತಿಳಿಸಿ.












Click it and Unblock the Notifications