ಆರ್ ಬಿಐನ ನೂತನ ಗವರ್ನರ್ ಆಗಿ ಊರ್ಜಿತ್ ಪಟೇಲ್

ನವದೆಹಲಿ, ಆಗಸ್ಟ್ 21: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಗವರ್ನರ್ ಆಗಿ ಊರ್ಜಿತ್ ಪಟೇಲ್ ಆಯ್ಕೆಯಾಗಿದ್ದಾರೆ. ಹಾಲಿ ಗವರ್ನರ್ ರಘುರಾಮ್ ರಾಜನ್ ಅವರ ಅಧಿಕಾರಾವಧಿ ಮುಗಿದಿದ್ದು, ಹೊಸ ಗವರ್ನರ್ ಸೆಪ್ಟೆಂಬರ್ 04ರಿಂದ ಅಧಿಕಾರ ಸ್ವೀಕರಿಸಲಿದ್ದಾರೆ.

52 ವರ್ಷ ವಯಸ್ಸಿನ ಪಟೇಲ್ ಅವರು ಆರ್ ಬಿಐ ಡೆಪ್ಯುಟಿ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಬಡ್ತಿ ಸಿಕ್ಕಿದೆ. ಆರ್ ಬಿಐ ಗವರ್ನರ್ ಅವಧಿ ಮೂರು ವರ್ಷದ್ದಾಗಿದೆ. [ನೂತನ ಗವರ್ನರ್: ರೇಸ್ ನಲ್ಲಿರುವ 6 ಪ್ರಮುಖರು]

Urjit Patel appointed as next RBI Governor

ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಎಂ ಫಿಲ್ ಹಾಗೂ ಯೇಲ್ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದಿರುವ ಊರ್ಜಿತ್ ಪಟೇಲ್ ಅವರು ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ನಲ್ಲೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಆರ್ ಬಿಐ ಡೆಪ್ಯುಟಿ ಗವರ್ನರ್ ಆಗುವುದಕ್ಕೂ ಮುನ್ನ ಪಟೇಲ್ ಅವರು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನ ಇಂಧನ ಹಾಗೂ ಮೂಲಸೌಕರ್ಯ ವಿಭಾಗ ಸಲಹೆಗಾರರಾಗಿದ್ದರು. [2ನೇ ಅವಧಿಗೆ ಮುಂದುವರಿಯದಿರಲು ರಘುರಾಮ್ ರಾಜನ್ ನಿರ್ಧಾರ]

2016ರ ಸೆಪ್ಟೆಂಬರ್ 4ರಂದು ಗವರ್ನರ್ ಆಗಿ ರಾಜನ್ ಅಧಿಕಾರದ ಅವಧಿ ಮುಗಿಯಲಿದೆ. ನನ್ನ ಅವಧಿ ಮುಗಿದ ನಂತರ ನನಗೆ ಅಚ್ಚುಮೆಚ್ಚಿನ ಶೈಕ್ಷಣಿಕ ಕ್ಷೇತ್ರಕ್ಕೆ ಮರಳುತ್ತೇನೆ. ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಮುಂದುವರಿಯಲಿದ್ದೇನೆಂದು ತನ್ನ ಸಹೋದ್ಯೋಗಿಗಳಿಗೆ ಬರೆದಿರುವ ವಿದಾಯ ಪತ್ರದ ಮೂಲಕ ತಿಳಿಸಿದ್ದರು.

ಆರ್ ಬಿಐ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ಅಲ್ಲದೆ, ಆರ್ ಬಿಐನ ಅರುಂಧತಿ ಭಟ್ಟಾಚಾರ್ಯ, ಅರ್ಥಶಾಸ್ತ್ರಜ್ಞ ಸುಬೀರ್ ವಿತ್ತಲ್, ಅರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ನಿತಿ ಆಯೋಗದ ಉಪ ಮುಖ್ಯಸ್ಥರಾಗಿರುವ ಅರವಿಂದ್ ಪಂಗಾರಿಯಾ, ವಿಶ್ವಬ್ಯಾಂಕಿನ ಸಲಹೆಗಾರ ಕೌಶಿಕ್ ಬಸು ಅವರ ಹೆಸರು ಕೇಳಿಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+