ಉಬರ್ ಸಿಇಒ ಸ್ಥಾನಕ್ಕೆ ಗುಡ್ ಬೈ ಹೇಳಿದ ಟ್ರಾವಿಸ್
ನ್ಯೂಯಾರ್ಕ್, ಜೂನ್ 21: ಆಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಉಬರ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ಟ್ರಾವಿಸ್ ಕಲನಿಕ್ ಅವರು ರಾಜೀನಾಮೆ ನೀಡಿದ್ದಾರೆ.
2009ರಲ್ಲಿ ಉಬರ್ ಸಂಸ್ಥೆ ಸ್ಥಾಪನೆಗೆ ಕಾರಣವಾಗಿದ್ದ ಟ್ರಾವಿಸ್ ಅವರು ಹುದ್ದೆಯಿಂದ ಕೆಳಗಿಳಿಯಲು ಬಂಡವಾಳ ಹೂಡಿಕೆದಾರರ ಪ್ರತಿಭಟನೆ, ಒತ್ತಡವೇ ಕಾರಣ ಎನ್ನಲಾಗಿದೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ವಾಣಿಜ್ಯ ಸಲಹಾ ಮಂಡಳಿಯಿಂದಲೂ ಹೊರನಡೆದಿದ್ದರು.

ಈಗ ಉಬರ್ ಸಂಸ್ಥೆಯಲ್ಲಿ ಸಿಇಒ, ಸಿಒಒ, ಸಿಎಫ್ಒ, ಸಿಎಂಒ ಸೇರಿದಂತೆ ಉನ್ನತ ಮಟ್ಟದಲ್ಲಿ ಯಾವುದೇ ಅಧಿಕಾರಿಗಳಿಲ್ಲ. ಸಾಲು ಸಾಲು ಉನ್ನತ ಅಧಿಕಾರಿಗಳ ನಿರ್ಗಮನದಿಂದ ಉಬರ್ ಬಳಲುತ್ತಿದೆ.












Click it and Unblock the Notifications