500 ರೂಪಾಯಿಯಿಂದ ಕೋಟ್ಯಾಧಿಶರಾಗುವುದು ಹೇಗೆ? ಇಲ್ಲಿದೆ ಮಾಹಿತಿ
ಈಗಿನ ಜನರಲ್ಲಿ ಹಣವನ್ನು ಉಳಿಸುವ ಯೋಚನೆ ಬರಲು ಆರಂಭಿಸಿದೆ. ಹೀಗಾಗಿ ಜನರು ಹಣ ಉಳಿಸಲು ಸರಿಯಾದ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಪೋಸ್ಟ್, ಬ್ಯಾಂಕ್‌ಗಳಲ್ಲಿ ಹಲವು ಜನಪ್ರೀಯ ಸ್ಮಾಲ್ ಇನ್ವೆಂಸ್ಟ್ ಮೆಂಟ್ ಸ್ಕೀಮ್‌ಗಳಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಈ ಸ್ಕೀಮ್‌ಗಳಲ್ಲಿ ಗ್ರಾಹಕ ಕಡಿಮೆ ಹಣವನ್ನು ಹೂಡಿ ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ.
ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ (SIP) ಹೂಡಿಕೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಇದರಲ್ಲಿ ಸಿಗುವ ಲಾಭ. ಈ ಸ್ಕೀಮ್‌ನಲ್ಲಿ ಗ್ರಾಹಕರಿಗೆ ಮೂರು ಆಯ್ಕೆಗಳನ್ನು ಕಂಪನಿಗಳು ನೀಡುತ್ತವೆ. ಅದರಲ್ಲಿ ಕಡಿಮೆ ರಿಸ್ಕ್, ಸಾಧಾರಣ ರಿಸ್ಕ್ ಹಾಗೈ ಹೈ ರಿಸ್ಕ್. ನಿಮ್ಮ ಹಣ ನಿಮಗೆ ಯಾವಗ ಕೈ ಸೇರಬೇಕು ಎನ್ನುವದರ ಮೇಲೆ ಈ ಮೇಲ್ಕಂಡ್ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಅನೇಕ ಕಂಪನಿಗಳು SIP ಮೇಲೆ ಶೇಕಡಾ 20 ಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡಿವೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ಕಡಿಮೆ ಸಮಯದಲ್ಲಿ ಮಿಲಿಯನೇರ್ ಆಗಬಹುದು.

SIP ಎಂದರೇನು?
ಇದು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ವಿಧಾನ. SIP ಮೂಲಕ ಹೂಡಿಕೆ ಮಾಡುವ ಮೂಲಕ, ಫಂಡ್ ಮ್ಯಾನೇಜರ್ ನಿಮ್ಮ ಹಣವನ್ನು ಹೆಚ್ಚು ಬಡ್ಡಿಯನ್ನು ಪಡೆಯುವ ರೀತಿಯಲ್ಲಿ ಹೂಡಿಕೆ ಮಾಡುತ್ತಾರೆ. ಈ ಮೊತ್ತವನ್ನು ವಿವಿಧ ವಲಯಗಳಲ್ಲಿ ಹೂಡಿಕೆ ಮಾಡಲಾಗುತ್ತದೆ, ಇದರಲ್ಲಿ ಷೇರು ಮಾರುಕಟ್ಟೆಯೂ ಸೇರಿದೆ. ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ ದೀರ್ಘಾವಧಿಯವರೆಗೆ ಹಣ ಹೂಡಲು ತಜ್ಞರು ಸಲಹೆ ನೀಡುತ್ತಾರೆ.
SIP ಮೂಲಕ ಪ್ರತಿ ತಿಂಗಳು 500 ರೂಪಾಯಿ ಹೂಡಿಕೆ ಮಾಡುವ ಮೂಲಕ ನೀವು ಸಹ ಕೋಟ್ಯಾಧಿಶರಾಗಬಹುದು. ಕೋಟ್ಯಾಧಿಶರಾಗಲು ನೀವು 30 ವರ್ಷ ಕಾಯಬೇಕು. ನೀವು ಈಗಿನಿಂದಲೇ ಹೂಡಿಕೆಯನ್ನು ಆರಂಭಿಸಿದ್ದೇ ಆದಲ್ಲಿ ಕೋಟಿಗಳಿಗೆ ಅಧಿಪತಿಗಳಾಗಳಬಹುದು. ತಿಂಗಳಿಗೆ 500 ರೂಪಾಯಿ ಹೂಡಿಕೆಯನ್ನು 360 ತಿಂಗಳು ಮಾಡಿದರೆ, ಇದು ಸಾಧ್ಯ. ನೀವು ಬಡ್ಡಿ ಹಣವನ್ನು ಅಲ್ಲಿಯೇ ಬಿಟ್ಟರೆ, ಅಸಲಿಗಿಂತಲೂ, ಬಡ್ಡಿಯ ಹಣವೇ ಹೆಚ್ಚಾಗುತ್ತದೆ.
ಎಸ್‌ಐಪಿ ಮಾಡುವಾಗ ಯೋಚನೆ ಮಾಡಿ ಮಾಡಬೇಕು. ನಿಮಗೆ ಅರಿವು ಇಲ್ಲದೆ ಇದ್ದರೆ ತಿಳಿದವರಿಂದ ಮಾಹಿತಿ ಪಡೆಯಿರಿ. ಪ್ರತಿ ತಿಂಗಳು 500 ರೂ ಹೂಡಿಕೆ ಮಾಡಿದರೆ, 30 ವರ್ಷಗಳಲ್ಲಿ ಉತ್ತಮ ಲಾಭ ಪಡೆಯಬಹುದು. ಮಾರುಕಟ್ಟೆಯಲ್ಲಿರುವ ಹಲವು ಕಂಪನಿಗಳು ಪ್ರತಿಷತ 20ರ ವರೆಗೆ ಬಡ್ಡಿಯನ್ನು ನೀಡುತ್ತವೆ.

ಫ್ರಾಂಕ್ಲಿನ್ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್
ಫ್ರಾಂಕ್ಲಿನ್ ಇಂಡಿಯಾ ಫ್ಲೆಕ್ಸಿ ಕ್ಯಾಪ್ ಫಂಡ್ ಕಂಪನಿಗೆ 30 ವರ್ಷದ ಇತಿಹಾಸ ಇದೆ. ಈ ಕಂಪನಿಯ ಟ್ರ್ಯಾಕ್ ರೆಕಾರ್ಡ್ ಸಹ ಉತ್ತಮವಾಗಿದೆ. ಇದು ಇಲ್ಲಿಯವರೆಗೆ 20.22 ರಷ್ಟು ವಾರ್ಷಿಕ ಆದಾಯವನ್ನು ನೀಡಿದೆ. ಈ ಕಂಪನಿಯಲ್ಲೂ ನೀವೆನಾದರೂ ಹಣ ಹೂಡಿದರೆ ಉತ್ತಮ ಲಾಭ ಗಳಿಸಬಹುದು.
ನಿಪ್ಪಾನ್ ಇಂಡಿಯಾ ಗ್ರೋತ್ ಫಂಡ್
ನಿಪ್ಪಾನ್ ಇಂಡಿಯಾ ಗ್ರೋತ್ ಫಂಡ್ 1995ರಲ್ಲಿ ಆರಂಭವಾಯಿತು. ಅಂದರೆ ಈ ಕಂಪನಿಗೆ ಈಗ 29 ವರ್ಷ. ಈ ಕಂಪನಿ 23.26 ರಷ್ಟು ವಾರ್ಷಿಕ ಆದಾಯವನ್ನು ನೀಡಿದೆ. ಆರಂಭದಲ್ಲಿ ಈ ಕಂಪನಿಯಲ್ಲಿ ನೀವೇನಾದರೂ 500 ರೂಪಾಯಿಗಳ ಎಸ್‌ಐಪಿಯನ್ನು ಮಾಡಿದ್ದರೆ, ಇಂದು ಅದರ ಮೊತ್ತ 2 ಕೋಟಿಯ ಆಸು ಪಾಸಿನಲ್ಲಿ ಇರುತ್ತಿತ್ತು.












Click it and Unblock the Notifications