ಉದ್ಯೋಗಿಗಳಿಗೆ ಸ್ಥಳಾಂತರಕ್ಕಾಗಿ 15 ಲಕ್ಷ ರೂ. ಬೋನಸ್ ನೀಡಲು ಯೋಜಿಸಿರುವ ಐಟಿ ಕಂಪನಿ: ಆದರೆ ವೇತನವೂ ಕಡಿತ?

ವಾಷಿಂಗ್ಟನ್‌, ಸೆಪ್ಟೆಂಬರ್ 16: ಕೊರೊನಾವೈರಸ್ ಸಾಂಕ್ರಾಮಿಕ ರೋಗವು ಜನರ ಜೀವನಶೈಲಿ ಜೊತೆಗೆ ಕೆಲಸದ ವೈಖರಿಯನ್ನು ಬದಲಿಸಿಬಿಟ್ಟಿದೆ. ಜಗತ್ತಿನ ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿವೆ.

ಸದ್ಯಕ್ಕಂತು ಕೊರೊನಾವೈರಸ್ ಲಸಿಕೆ ಸಿಗುವುದು ದೂರದ ಮಾತಾಗಿದೆ. ಹೀಗಾಗಿ ಲಸಿಕೆ ಬಂದು, ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಲಭ್ಯವಾಗುವವರೆಗೂ ಅನೇಕ ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವುದನ್ನ ಖಾಯಂ ಮಾಡಿಬಿಡಬಹುದು.

ಹೀಗೆ ಅಮೆರಿಕಾದಲ್ಲಿ ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿಯು ಮುಂದುವರಿದಿದ್ದು, ಸ್ಯಾನ್ ಫ್ರಾನ್ಸಿಸ್ಕೋ, ನ್ಯೂಯಾರ್ಕ್ ಅಥವಾ ಸಿಯಾಟಲ್‌ನಿಂದ ಹೊರಹೋಗಲು ಆಯ್ಕೆ ಮಾಡಿಕೊಳ್ಳುವ ನೌಕರರಿಗೆ ಸ್ಟ್ರೈಪ್ ಇಂಕ್ ಕಂಪನಿಯು ಒಂದು ಬಾರಿ 20,000 ಅಮೆರಿಕನ್ ಡಾಲರ್ ಪಾವತಿಸಲು ಯೋಜಿಸಿದೆ. ಅಂದರೆ ಭಾರತದ ರೂಪಾಯಿಗಳಲ್ಲಿ ಸುಮಾರು 14.75 ಲಕ್ಷ ರೂಪಾಯಿ.

This It Company To Give Employees $20000 Bonus For Relocation

ಉದ್ಯೋಗಿಗಳು ಸ್ಥಳಾಂತರಗೊಳ್ಳುವ ಆಯ್ಕೆಯನ್ನು ತೆಗೆದುಕೊಂಡರೆ ಅವರಿಗೆ ಈ ಒಂದು ಬಾರಿಯ ಬೋನಸ್ ಜೊತೆಗೆ ಅವರ ಮೂಲ ವೇತನದಲ್ಲಿ ಶೇಕಡಾ 10ರಷ್ಟು ಕಡಿತಗೊಳಿಸುವ ಬಗ್ಗೆಯು ಕಂಪನಿ ಯೋಜಿಸಿದೆ ಎಂದು ಮಿಂಟ್ ವರದಿ ಮಾಡಿದೆ.

ಈ ವರ್ಷಾಂತ್ಯದ ಮೊದಲು ಸ್ಥಳಾಂತರಗೊಳ್ಳಲು ಆಯ್ಕೆ ಮಾಡುವ ಕಾರ್ಮಿಕರಿಗೆ ಈ ಪ್ರಸ್ತಾಪವು ಲಭ್ಯವಾಗುವಂತೆ ಮಾಡುತ್ತದೆ ಎನ್ನಲಾಗಿದೆ. ಈ ಕುರಿತು ತಿಳಿಸಿರುವ ವ್ಯಕ್ತಿಗಳು ಹೆಸರನ್ನು ತಿಳಿಸದೇ ಅನಾಮಧೇಯರಾಗಿರಲು ಕೇಳಿದರು. ಹೀಗಾಗಿ ತಮ್ಮ ಊರುಗಳಿಗೆ ಸ್ಥಳಾಂತರಗೊಳ್ಳಲು ಬಯಸುವ ನೌಕರರು ಬೋನಸ್ ಜೊತೆಗೆ ತಮ್ಮ ಮೂಲ ವೇತನವನ್ನು ತ್ಯಜಿಸಬೇಕಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+