ಹೊಸ ಆರ್ಥಿಕ ವರ್ಷಾರಂಭ, ಏನೇನು ದುಬಾರಿಯಾಗಲಿದೆ?
ಹೊಸ ಆರ್ಥಿಕ ವರ್ಷಾರಂಭ ಸ್ವಾಗತಿಸಲು ಬೆಲೆ ಏರಿಕೆ ಸಿದ್ಧವಾಗಿದೆ. ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಎನ್ ಡಿಎ ಸರ್ಕಾರ ಹೊರ ತಂದಿರುವ ಆರ್ಥಿಕ ನೀತಿ, ಸೇವಾತೆರಿಗೆ, ಮುಂಬರುವ ಜಿಎಸ್ ಟಿ ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ.
ಬೆಂಗಳೂರು, ಏಪ್ರಿಲ್ 01: ಹೊಸ ಆರ್ಥಿಕ ವರ್ಷಾರಂಭ ಸ್ವಾಗತಿಸಲು ಬೆಲೆ ಏರಿಕೆ ಸಿದ್ಧವಾಗಿದೆ. ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿರುವ ಎನ್ ಡಿಎ ಸರ್ಕಾರ ಹೊರ ತಂದಿರುವ ಆರ್ಥಿಕ ನೀತಿ, ಸೇವಾತೆರಿಗೆ, ಮುಂಬರುವ ಜಿಎಸ್ ಟಿ ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ. ಕೇಂದ್ರ ಬಜೆಟ್ 2017ನ ಘೋಷಣೆಗಳು ಇಂದಿನಿಂದ(ಏ.1) ಅನುಷ್ಠಾನಗೊಳ್ಳಲಿದೆ.
ಮೊಬೈಲ್ ಫೋನ್, ಸ್ಮಾಟ್ ಫೋನ್, ಕಾರು ಸೆಟ್ ಟಾಪ್ ಬಾಕ್ಸ್, ಸಿಗರೇಟು, ತಂಬಾಕು ಪದಾರ್ಥ, ಮಾರ್ಬಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ ತೆರಿಗೆ ಏರಿಸಲಾಗಿದೆ. ನಾರಿನ ಉತ್ಪನ್ನ, ಪೌಷ್ಟಿಕ ಆಹಾರ ಸೇರಿದಂತೆ ವಿವಿಧ ವಸ್ತುಗಳ ಮೇಲೆ ತೆರಿಗೆ ಕಡಿಮೆ ಮಾಡಲಾಗಿದೆ.[ಏಪ್ರಿಲ್ 01ರಿಂದ ದೇಶ ಬದಲಾಗುತ್ತಿದೆ, ಏನೆಲ್ಲ ವ್ಯವಸ್ಥೆ ಬದಲು?]
ಗ್ರಾಹಕರ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಸೇವಾ ತೆರಿಗೆ ದರ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಬಹುದು ಎಂಬ ನಿರೀಕ್ಷೆ ಇತ್ತು. ಸದ್ಯಕ್ಕಂತೂ ಗ್ರಾಹಕರು ಬೆಲೆ ಏರಿಕೆ ಅನುಭವಿಸಬೇಕು. ಜುಲೈ ತಿಂಗಳಿನಿಂದ ಜಿಎಸ್ ಟಿ ಜಾರಿಗೊಂಡ ಬಳಿಕ ಇನ್ನಷ್ಟು ಬೆಲೆ ಏರಿಕೆಯಾಗಲಿದೆ. ಇಂದಿನಿಂದ ಏನೇನು ದುಬಾರಿಯಾಗಲಿದೆ ಎಂಬುದರ ಸ್ಥೂಲ ಪರಿಚಯ ಮುಂದಿನ ಚಿತ್ರ ಸರಣಿಯಲ್ಲಿ ಓದಿರಿ...

ಹೊಸ ಆರ್ಥಿಕ ವರ್ಷಕ್ಕೆ ಬೆಲೆ ಏರಿಕೆ
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ನಲ್ಲಿ ಕಳೆದ ಬಾರಿ ಸೇವಾ ತೆರಿಗೆಯನ್ನು ಶೇ.12.36ರಿಂದ ಶೇ.14ಕ್ಕೆ ಏರಿಕೆ ಮಾಡಿದ್ದಾರೆ. ವರ್ಷಾಂತ್ಯಕ್ಕೆ ಈ ಪ್ರಮಾಣ ಶೇ 18ಕ್ಕೇರಿದರೂ ಅಚ್ಚರಿಪಡಬೇಕಾಗಿಲ್ಲ. ಕಸ್ಟಮ್ ಶುಲ್ಕ ಏರಿಕೆಯಾಗಿದೆ. ಜಿಎಸ್ ಟಿ ಮಸೂದೆ ಪಾಸ್ ಆದಮೇಲೆ ಶೇ 25ರ ತನಕ ತೆರಿಗೆ ಹೆಚ್ಚಳಕ್ಕೆ ಸಿದ್ದರಾಗಬೇಕಿದೆ

ಎಸಿ ರೆಸ್ಟೋರೆಂಟ್ ಬಿಲ್
ಎಲ್ಲಾ ಹವಾ ನಿಯಂತ್ರಿತ ರೆಸ್ಟೋರೆಂಟ್ ಗಳ ಮೇಲೆ ಸೇವಾ ತೆರಿಗೆ ಹೆಚ್ಚಳ ಮಾಡಲಾಗಿದೆ. ಸೇವಾ ತೆರಿಗೆ ಶೇ 12.36 ರಷ್ಟಿದೆ. ಬಿಲ್ ನ ಶೇ 30ರಷ್ಟಕ್ಕೆ ಅನ್ವಯವಾಗಲಿದೆ.ಉಪಾಹಾರ ಮಂದಿರಗಳನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸುವುದರಿಂದ ತಿನಿಸುಗಳ ಬೆಲೆಯಲ್ಲಿ ಶೇ.18 ಏರಿಕೆಯಾಗಲಿದೆ.

ಅಬಕಾರಿ ಸುಂಕ ಶೇ 18ಕ್ಕೆ
ಸಿಗರೇಟು ಹಾಗೂ ತಂಬಾಕು ಪದಾರ್ಥ, ಪಾನ್ ಮಸಾಲ ದರ ಏರಿಕೆ. ಶೇ 12ರಷ್ಟು ತೆರಿಗೆ.ತಂಬಾಕು ಪದಾರ್ಥಗಳು ಸಿಗರೇಟ್ ಮೇಲೆ ಅಬಕಾರಿ ಸುಂಕ ಶೇ 18ಕ್ಕೆ ಏರಿಸಲಾಗಿದೆ

SUV ಗಳನ್ನು ಟ್ಯಾಕ್ಸಿ ವಿನಾಯಿತಿ
SUV ಗಳ ತೆರಿಗೆ ಶೇ 27 ರಿಂದ 30ಕ್ಕೆ ಏರಿಕೆಯಾಗಿದೆ. ಆದರೆ, ಈ ತೆರಿಗೆ SUV ಗಳನ್ನು ಟ್ಯಾಕ್ಸಿಗಳಾಗಿ ಬಳಸಿದರೆ ಅನ್ವಯವಾಗುವುದಿಲ್ಲ.

ಹೈಬ್ರಿಡ್ ಆಮದು ವಾಹನ
800 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಇಂಜಿನ್ ವುಳ್ಳ ಮೋಟರ್ ಸೈಕಲ್ ಮೇಲಿನ ಅಬಕಾರಿ ಸುಂಕ ಶೇ 60-70 ರಷ್ಟು ಹೆಚ್ಚಿಸಲಾಗಿದೆ. ಇವುಗಳ ಆಮದು ಸುಂಕ ಕೂಡಾ ಹೆಚ್ಚಳ

ಚಿನ್ನದ ಆಮದು ಮಿತಿ ಏರಿಕೆ
50 ಸಾವಿರ ರು ವರೆಗಿನ ಆಮದು ಚಿನ್ನಕ್ಕೆ ಸುಂಕವಿಲ್ಲ (ಪುರುಷರಿಗೆ) ಮಹಿಳೆಯರಿಗೆ ಈ ಮಿತಿ 1 ಲಕ್ಷ ರು. ಚಿನ್ನದ ಆಮದು ಮಿತಿ ಏರಿಕೆ
* ಮುತ್ತು ರತ್ನಗಳ ಮೇಲೆ ತೆರಿಗೆ ಇಳಿಕೆ
* ಬೆಳ್ಳಿ ಬೆಲೆ ಏರಿಕೆ, ವಜ್ರದ ಬೆಲೆ ಮಾತ್ರ ಇಳಿಕೆ

ಉಪಕರಣಗಳ ಆಮದು ಸುಂಕ ಏರಿಕೆ
ಸೆಟ್ ಟಾಪ್ ಬಾಕ್ಸ್ ಗಳ ಮೇಲಿನ ಆಮದು ಸುಂಕ ಶೇ 5 ರಿಂದ ಶೇ 10ಕ್ಕೇರಿಸಲಾಗಿದೆ. ಸದ್ಯ ಇರುವ ಬೆಲೆ 1,200-1,500 ಬದಲಾಗಲಿದ್ದು, ಕನಿಷ್ಠ 2,200 ರು ನೀಡಬೇಕಾಗುತ್ತದೆ.ಕಂಪ್ಯೂಟರ್ ಉಪಕರಣಗಳ ಆಮದು ಸುಂಕ ಏರಿಕೆ

ಸ್ಮಾರ್ಟ್ ಫೋನ್ ಮೇಲೆ ಸುಂಕ
2000 ರು ಗಿಂತ ಅಧಿಕ ಬೆಲೆಯ ಮೊಬೈಲ್ ಮೇಲೆ ಶೇ 6 ರಷ್ಟು ಅಧಿಕ ಅಬಕಾರಿ ಸುಂಕ (excise duty) ಹಾಕಲಾಗಿದೆ.
* ಸ್ಮಾರ್ಟ್ ಫೋನ್ ಮೇಲೆ ಶೇ 6 ರಷ್ಟು ಅಧಿಕ ಸುಂಕ
* ಪಿಸಿಬಿ ಮೇಲೆ ಶೇ 2ರಷ್ಟು ತೆರಿಗೆ

ಐಷಾರಾಮಿ ಹೋಟೆಲ್ ಊಟ
* ಕ್ಲಬ್ ಗಳಲ್ಲಿ ಊಟ, ನೋಟ, ಆಟ ಎಲ್ಲವೂ ಕೈ ಕಚ್ಚಲಿದೆ.
* ಕ್ಲಬ್, ಜಿಮ್ ಗಳಲ್ಲಿ ಸದಸ್ಯತ್ವ ದರ ಏರಿಕೆ.
* ಐಷಾರಾಮಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಉಳಿಯುವುದು, ಡಿನ್ನರ್, ಸಪ್ಪರ್ ಬೆಲೆ ಏರಿಕೆ, ಸೇವಾ ತೆರಿಗೆ ಹೆಚ್ಚಳ

ಎಲ್ಲಾ ವಿಮೆಗಳ ಪ್ರೀಮಿಯಂ
ಸಾಮಾನ್ಯ ವಿಮೆ ಏಪ್ರಿಲ್ 1, 2017ರಿಂದ ತುಟ್ಟಿಯಾಗಲಿದೆ. ಕಾರು, ಮೋಟಾರ್ ಸೈಕಲ್ ಮತ್ತು ಆರೋಗ್ಯ ವಿಮೆ ಪ್ರೀಮಿಯಂ ಹೆಚ್ಚಳವಾಗಲಿದೆ. ಏಜೆಂಟ್‍ಗಳಿಗೆ ಕಮಿಷನ್ ಪರಿಷ್ಕರಣೆಗೆ ಐಆರ್‍ಡಿಎಐ ಸಮ್ಮತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಬಂಗಲೆಯ ಮೇಲೆ ತೆರಿಗೆ ಹೆಚ್ಚಳ
2000 ಚ. ಅ ಗೂ ಅಧಿಕ ವಿಸ್ತೀರ್ಣದಲ್ಲಿ ನಿರ್ಮಾಣವಾದ ಐಷಾರಾಮಿ ಬಂಗಲೆಯ ಮೇಲೆ ತೆರಿಗೆ ಹೆಚ್ಚಳ 50ಲಕ್ಷ ಹಾಗೂ ಅದಕ್ಕಿಂತ ಅಧಿಕ ಮೌಲ್ಯದ ಆಸ್ತಿ ಮೇಲೆ ಶೇ 1 ರಷ್ಟು TDS ಕಟ್ ಆಗಲಿದೆ.

ಮಿಕ್ಕಂತೆ ಏನೆಲ್ಲ ಏರಿಕೆ
* ಗೋಡಂಬಿ ಮೇಲಿನ ಸುಂಕ ಶೇ 30 ರಿಂದ ಶೇ 45 ರಷ್ಟು ಏರಿಕೆ
* ಮಾರ್ಬಲ್ ಚದರಡಿಗೆ ಶೇ 65 ರಿಂದ 70 ರಷ್ಟು ದರದಲ್ಲಿ ಏರಿಕೆ
*ಸಿಎನ್ ಜಿ ಬಳಕೆ ಮೇಲೆ ಸುಂಕ ಹೆಚ್ಚಳ, ಆಟೋರಿಕ್ಷಾ, ಬಸ್ ದರ ವ್ಯತ್ಯಯ ಸಾಧ್ಯತೆ.












Click it and Unblock the Notifications