ಕನ್ನಡ ಶುಭಾಶಯ ವಿನಿಮಯಕ್ಕೊಂದು App

Posted By:
Subscribe to Oneindia Kannada

ಬೆಂಗಳೂರು, ಡಿ.3: ಅಂತರ್ಜಾಲದಲ್ಲಿ ಸ್ಥಳೀಯ ಭಾಷೆ ಬಳಕೆ ಹೆಚ್ಚಳದಿಂದ ಮಾತ್ರ ಉಳಿಗಾಲ ಸಾಧ್ಯ ಎಂಬ ಅರಿವು ಬೆಳೆಸಿಕೊಂಡಿರುವ ಸ್ಟಾರ್ ಅಪ್ ಕಂಪನಿ ಅಂತರ್ಜಾಲ್ ಇನ್ನೋವೇಷನ್ ಪ್ರೈ ಲಿ. ತನ್ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕನ್ನಡದ ಗಾದೆ, ಸರ್ವಜ್ಞನ ವಚನಗಳ ಜೊತೆಗೆ ಈಗ ಶುಭಾಶಯ ವಿನಿಯಮಕ್ಕೊಂದು ಅಪ್ಲಿಕೇಷನ್ ಸಿದ್ಧಪಡಿಸಿದ್ದಾರೆ.

ಸಂದರ್ಭ ಯಾವುದೇ ಇರಲಿ ನಿಮ್ಮ ನೆಚ್ಚಿನ ವ್ಯಕ್ತಿಗಳಿಗೆ ನಿಮ್ಮದೇ ಭಾಷೆಯಲ್ಲಿ ಶುಭಾಶಯ ತಿಳಿಸಿ, ಇಷ್ಟವಾದ ಸಂದೇಶ, ಚಿನ್ಹೆ, ವಿನ್ಯಾಸಗಳಿಂದ ಕೂಡಿದ ವೈಯಕ್ತಿಕ ಗ್ರೀಟಿಂಗ್ ಕಾರ್ಡ್ ರಚಿಸಿ ತಕ್ಷಣವೇ ನಿಮ್ಮ ಮೊಬೈಲ್ ನಿಂದ ಕಳಿಸಲು ಈ ಅಪ್ಲಿಕೇಷನ್ ನೆರವಾಗುತ್ತದೆ.

Antarjaal is a startup with a focus on mobile and internet applications

ಇಮೇಲ್, ಎಂಎಂಎಸ್, ಫೇಸ್ಬುಕ್, ಟ್ವಿಟ್ಟರ್ ಮೂಲಕ ಈ ಕಾರ್ಡನ್ನು ಹಂಚಿಕೊಳ್ಳಬಹುದು. ಭಾಷೆಯ ಮೇಲಿನ ಪ್ರೇಮ, ಮಾತೃಭಾಷೆಯ ಬಳಕೆ ಹೆಚ್ಚಳ ಮಾಡಲು ಬಯಸುವ ವ್ಯಕ್ತಿಗಳಿಗೆ ಈ ಅಪ್ಲಿಕೇಷನ್ ಹೇಳಿ ಮಾಡಿಸಿದಂತಿದೆ. [ಎಸ್ಸೆಂಎಸ್ ಬಳಕೆಗೆ ಸರ್ಕಾರದಿಂದ ತಂತ್ರಾಂಶ]

ದಿನನಿತ್ಯದ ಬಳಕೆಯಲ್ಲಿ ಕನ್ನಡ ಭಾಷೆ ಹೆಚ್ಚೆಚ್ಚು ಬಳಸುವಂತೆ ಮಾಡಲು ತಂತ್ರಜ್ಞಾನ ನೆರವು ಬೇಕಾಗುತ್ತದೆ. ಸದ್ಯಕ್ಕೆ ಮೊಬೈಲ್ ಅಪ್ಲಿಕೇಷನ್ ಆಂಡ್ರಾಯ್ಡ್ ಫೋನ್ ಹಾಗೂ ಐಫೋನ್ ಗಳಲ್ಲಿ ಲಭ್ಯವಿದೆ. ಐಫೋನ್ ಗಳಲ್ಲಿ ಬಳಸಲು 60 ರು ಬೆಲೆ ತೆರಬೇಕಾಗುತ್ತದೆ ಎಂದು ಅಂತರ್ಜಾಲ್ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ಶ್ರೀಕಾಂತ್ ಶಾಸ್ತ್ರಿ ಹೇಳಿದ್ದಾರೆ. [ಕನ್ನಡ ಪದಬಂಧ ಅಪ್ಲಿಕೇಷನ್]

ಕನ್ನಡ ಗಾದೆಗಳ ಆಪ್ ಆಂಡ್ರಾಯ್ಡ್ ನಲ್ಲಿ ನಿಮ್ಮ ಮೊಬೈಲಿನಲ್ಲಿ ಇಳಿಸಿಕೊಳ್ಳಲು 50 ರು ನೀಡಬೇಕು. ಹಾಗೆ ಸರ್ವಜ್ಞನ ವಚನಗಳುಳ್ಳ ಅಪ್ಲಿಕೇಷನ್ ಗೆ 110 ರು ನಿಗದಿ ಪಡಿಸಲಾಗಿದೆ. ಕನ್ನಡ ಅಕ್ಷರಗಳು, ಶಾಪಿಂಗ್ ಲಿಸ್ಟ್ ಅಪ್ಲಿಕೇಷನ್ ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. [ಆಂಡ್ರಾಯ್ಡ್ ಮಾರುಕಟ್ಟೆಗೆ 'ಪದ' ಎಂಟ್ರಿ]

ಕನ್ನಡ ಜೊತೆಗೆ ತಮಿಳು, ತೆಲುಗು, ಮಲಯಾಳಂ ಅಲ್ಲದೆ ಇಟಲಿ, ಪೋಲ್ಯಾಂಡ್, ಜರ್ಮನಿ, ರಷ್ಯಾ ಸೇರಿದಂತೆ ಅನೇಕ ದೇಶಗಳ ಭಾಷೆಗಳಲ್ಲಿನ ಗಾದೆಗಳ ಸಂಗ್ರಹ ಇಲ್ಲಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಅಂತರ್ಜಾಲ್ ಸಂಸ್ಥೆ ವೆಬ್ ತಾಣ ವೀಕ್ಷಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Antarjaal is a startup with a focus on mobile and internet applications has released a app to send greeting in Kannada. With increased smartphone and internet penetration, the demand for more local language content is expected to rise dramatically. Antarjaal Innovations will create products to cater to this need across different categories like lifestyle, languages and productivity.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ