ಬೆಂಗಳೂರಿನ ಯುವ ಪೀಳಿಗೆಯ ಆಯ್ಕೆ: ಫೇಸ್ಬುಕ್? ವಾಟ್ಸಪ್?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 29: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನ ಐಟಿ ವಿಜ್ ಕ್ವಿಜ್ ಅಂಗವಾಗಿ ಯುವ ಜನಾಂಗ ಯಾವ ಸಾಮಾಜಿಕ ಜಾಲವನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ನಡೆಸಿದೆ.

ಟಿಸಿಎಸ್ ಯುವ ಸಮೀಕ್ಷೆ ದೇಶದ ಒಂದು ಬೃಹತ್ ಸಮೀಕ್ಷೆಯಾಗಿದ್ದು 12-18 ವರ್ಷದ ಮಕ್ಕಳ ಡಿಜಿಟಲ್ ಹವ್ಯಾಸವನ್ನು ಸೆರೆ ಹಿಡಿಯುತ್ತದೆ. ಜೆಡ್ ತಲೆಮಾರು (ಜೆನ್ ಜೆಡ್) 1995ರ ನಂತರ ಜನಿಸಿದ ಸಮೂಹವಾಗಿದ್ದು-ಈಗಿನ ಯುವ ಸಮೂಹ. ಟಿಸಿಎಸ್ ವಿದ್ಯಾರ್ಥಿಗಳೊಂದಿಗೆ 15 ನಗರಗಳಲ್ಲಿ ಈ ಸಮೀಕ್ಷೆಯನ್ನು ಟಿಸಿಎಸ್ ಐಟಿ ವಿಜ್ ಕ್ವಿಜ್ ಭಾಗವಾಗಿ ನಡೆಸುತ್ತಿದೆ. [2015ರ 10 ಅತಿಕೆಟ್ಟ ಕೆಲಸಗಳು; ನಿಮ್ಮ ವೃತ್ತಿ ಯಾವುದು?]

1995ರಿಂದ ನಂತರ ಜನಿಸಿದ ಯುವ ಜನಾಂಗದ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ತಂತ್ರಜ್ಞಾನ ಆಧಾರಿತ ತಂತ್ರಾಂಶ ಬಳಕೆಗೆ ಈ ಸಮೀಕ್ಷೆ ಕೈಗನ್ನಡಿಯಾಗಲಿದೆ. ಬೆಂಗಳೂರಿನ ಸಮೀಕ್ಷೆಯ ಫಲಿತಾಂಶ ಮುಂದಿದೆ. [ಮೊಬೈಲ್ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಎಷ್ಟು?]

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆ ಸುಮಾರು 3,44,000ಕ್ಕೂ ಅಧಿಕ ಉದ್ಯೋಗಿಗಳನ್ನು ಸುಮಾರು 46 ದೇಶಗಳಲ್ಲಿ ಹೊಂದಿದೆ. ಯುಎಸ್ 15.5 ಬಿಲಿಯನ್ ಡಾಲರ್ ಗೂ ಅಧಿಕ ಆದಾಯ ಹೊಂದಿದೆ. (ಮಾರ್ಚ್ 31, 2015ರಂತೆ) ಹೆಚ್ಚಿನ ಮಾಹಿತಿಗೆ www.tcs.com ಗೆ ಭೇಟಿ ಕೊಡಿ.

ಸ್ಮಾರ್ಟ್ ಫೋನ್ ಬಳಕೆ ಹೇಗಿದೆ

ಸ್ಮಾರ್ಟ್ ಫೋನ್ ಬಳಕೆ ಹೇಗಿದೆ

ಸ್ಮಾರ್ಟ್ ಫೋನ್ ಬೆಂಗಳೂರಿನ ಯುವಕರು ಹೊಂದಿರುವ ಅತ್ಯಂತ ಸಾಮಾನ್ಯ ಎಲೆಕ್ಟ್ರಾನಿಕ್ ಗ್ಯಾಜೆಟ್(ಶೇ.83). ಆದಾಗ್ಯೂ ಡೆಸ್ಕ್ ಟಾಪ್/ಮನೆಯ ಪಿಸಿ ಮತ್ತು ಲ್ಯಾಪ್ ಟಾಪ್ ಗಳು ಇಂಟರ್ನೆಟ್ ಬಳಸುವ ಜನಪ್ರಿಯ ಮಾದರಿಗಳಾಗಿವೆ (ಶೇ.47). ನಂತರದ್ದು ಸ್ಮಾರ್ಟ್ ಫೋನ್ ಗಳು (ಶೇ.36)

ವಾಟ್ಸಪ್ಸ್ ನಲ್ಲಿ ಏನಾಗುತ್ತಿದೆ? ಫೇಸ್‍ಬುಕ್ ನಲ್ಲಿ ಚೆಕಿನ್?

ವಾಟ್ಸಪ್ಸ್ ನಲ್ಲಿ ಏನಾಗುತ್ತಿದೆ? ಫೇಸ್‍ಬುಕ್ ನಲ್ಲಿ ಚೆಕಿನ್?

ವಾಟ್ಸಪ್ ಅತ್ಯಂತ ಜನಪ್ರಿಯ ಮೆಸೇಜಿಂಗ್ ವೇದಿಕೆ. ಶೇ.66ರಷ್ಟು ಜೆನ್ ಜೆಡ್‍ಗಳು ಇದನ್ನು ಬಳಸುತ್ತಿದ್ದಾರೆ. ಟೆಕ್ಟ್ಸ್ ಮೆಸೇಜ್ ಗಳಿಗೆ ನಂತರದ ಸ್ಥಾನ(ಶೇ.12).

ಬಳಕೆಯಲ್ಲಿ ಫೇಸ್‍ಬುಕ್ (ಶೇ.83ರಷ್ಟು ಬಳಕೆ) ಮುಂಚೂಣಿಯಲ್ಲಿದ್ದು, ಗೂಗಲ್ ಪ್ಲ ಸ್ ಗೆ (ಶೇ.69) ನಂತರದ ಸ್ಥಾನ. ಹುಡುಗಿಯರಿಗೆ ಹೋಲಿಸದರೆ ಹುಡುಗರು ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯ.

ಬೆಂಗಳೂರಿನಲ್ಲಿ ನೀಲಿ ಹಕ್ಕಿಯ ರೆಕ್ಕೆಗಳು

ಬೆಂಗಳೂರಿನಲ್ಲಿ ನೀಲಿ ಹಕ್ಕಿಯ ರೆಕ್ಕೆಗಳು

ಬೆಂಗಳೂರಿನಲ್ಲಿ ಟ್ವಿಟ್ಟರ್(ಶೇ.41) ಬಹುಜನಪ್ರಿಯ. ಹೆಚ್ಚಿನ ಪ್ರಮಾಣದ ಹುಡುಗರು(ಶೆ.54) ಹುಡುಗಿಯರಿಗಿಂತ(ಶೇ.43) ಟ್ವಿಟರ್‍ನಲ್ಲಿ ಸೆಲೆಬ್ರೆಟಿಗಳನ್ನು ಫಾಲೊ ಮಾಡುತ್ತಾರೆ.

ಜೆನ್ ಜೆಡ್ ಗಳು ಆನ್‍ಲೈನ್ ನಲ್ಲಿ ಸಿಗೋಣ ಎನ್ನುತ್ತಾರೆ

ಜೆನ್ ಜೆಡ್ ಗಳು ಆನ್‍ಲೈನ್ ನಲ್ಲಿ ಸಿಗೋಣ ಎನ್ನುತ್ತಾರೆ

ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಶೇ.71ರಷ್ಟು ಮಂದಿ ಪ್ರತಿನಿತ್ಯ ಆನ್‍ಲೈನ್ ನಲ್ಲಿ ಕನಿಷ್ಟ 1 ಗಂಟೆ ಕಳೆಯುವುದಾಗಿ ಹೇಳಿದ್ದಾರೆ. ಶೇ.36ರಷ್ಟು ಮಂದಿ ಅವರು ಯಾವುದೇ ಸಂದೇಶ ಸ್ವೀಕರಿಸಿದ 30 ನಿಮಿಷಗಳೊಳಗೆ ಪ್ರತಿಕ್ರಿಯಿಸುತ್ತಾರೆ. ಶೇ.46ರಷ್ಟು ಪ್ರತಿಕ್ರಿಯೆದಾರರ ಆನ್‍ಲೈನ್ ಚಟುವಟಿಕೆ ಪಾಲಕರಿಂದ ನಿಯಂತ್ರಣಗೊಳ್ಳುತ್ತದೆ. ಶೇ.45ರಷ್ಟು ಮಂದಿಯ ಖಾತೆಯ ಆಕ್ಸಿಸ್ ಅವರ ಪಾಲಕರ ಬಳಿಯಿದೆ.

ಯಾವುದೇ ಸಮಯದಲ್ಲಿ, ಜಾಗದಲ್ಲಿ ಕಲಿಕೆ

ಯಾವುದೇ ಸಮಯದಲ್ಲಿ, ಜಾಗದಲ್ಲಿ ಕಲಿಕೆ

ಆಸಕ್ತಿದಾಯಕ ಅಂಶವೆಂಬಂತೆ ಬೆಂಗಳೂರಿನ ಯುವಕರು ಸಂಸ್ಥೆಯ ಕಲಿಯುವ ಪರಿಸರದಿಂದ ವಿರಾಮ ಪಡೆದಿದ್ದು ಆನ್‍ಲೈನ್ ಕಲಿಕೆ ವೇದಿಕೆಯತ್ತ ಹೆಜ್ಜೆ ಹಾಕಿದ್ದಾರೆ. ಶೇ.18ರಷ್ಟು ಪ್ರತಿಕ್ರಿಯೆದಾರರು ಕಲಿಕೆಗೆ ವಿಡಿಯೊ ಚಾಟ್ ಬಳಸುತ್ತಾರೆ ಮತ್ತು ಶೇ.25ರಷ್ಟು ಮಂದಿ ಶಾಲೆಯ ಅಸೈನ್‍ಮೆಂಟ್‍ಗಾಗಿ ಆನ್‍ಲೈನ್ ಗೆ ಹೋಗುತ್ತಾರೆ.

ಸಾಂಪ್ರದಾಯಿಕ ಮಾಧ್ಯಮಗಳು ಈಗಲೂ ಕಿಂಗ್

ಸಾಂಪ್ರದಾಯಿಕ ಮಾಧ್ಯಮಗಳು ಈಗಲೂ ಕಿಂಗ್

ಸುದ್ದಿಗಾಗಿ ಟಿವಿ ಮತ್ತು ದಿನಪತ್ರಿಕೆಗಳನ್ನು (ಶೇ.79ರಷ್ಟು) ಬಳಸುತ್ತಿದ್ದಾರೆ. ನಂತರ ಲಿಂಕ್ ಗಳು, ಫೇಸ್‍ಬುಕ್ ತಾಣದಲ್ಲಿನ ಕೊಂಡಿಗಳ(ಶೇ.42) ಮೇಲೆ ಕ್ಲಿಕ್.

ಟ್ವೀಟ್ ಬೇಡ ಎನ್ನುವ ಬೆಂಗಳೂರು: ಫೋನ್ ಕರೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ಹೋಲಿಸಿದರೆ ಮುಖಾಮುಖಿ ಭೇಟಿ ಈಗಲೂ ಸ್ನೇಹಿತರ(ಶೇ.40) ನಡುವಿನ ಪರಿಣಾಮಕಾರಿ ಸಂವಹನ ವಿಧಾನವಾಗಿದೆ.

ಬಹುಮುಖಿ ಶಾಪಿಂಗ್

ಬಹುಮುಖಿ ಶಾಪಿಂಗ್

* ಶೇ.93ರಷ್ಟು ಪ್ರತಿಕ್ರಿಯೆದಾರರು ಆನ್‍ಲೈನ್ ನಿಂದ ಶಾಪ್ ಮಾಡುತ್ತಾರೆ. ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ (ಶೇ.60) ಅತ್ಯಂತ ಜನಪ್ರಿಯ ಖರೀದಿ ಸರಕಾಗಿದ್ದು ನಂತರ ಪುಸ್ತಕ (ಶೇ.56) ಮತ್ತು ಸಿನಿಮಾ/ಕಾರ್ಯಕ್ರಮ ಟಿಕೆಟ್ ಗಳು (ಶೇ.48)
* ಆಸಕ್ತಿದಾಯಕವಾಗಿ ಹೆಚ್ಚಿನ ಹುಡುಗಿಯರು(ಶೇ.54) ಹುಡುಗರಿಗಿಂತ(ಶೇ.49) ವೃತ್ತಿಪರ ಕೋರ್ಸ್ ಗಳತ್ತ ಒಲವು ಹೊಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The TCS Youth Survey is one of the largest surveys in the country that captures the Digital habits of children between the age group of 12-18 years. Generation Z (Gen Z) is defined as the group born after 1995 – the current youth generation. TCS has been conducting the TCS Youth Survey with students across 15 cities, as part of the TCS IT Wiz Quiz. Below are some of the technology-related survey results from Bangalore.
Please Wait while comments are loading...