ಹೊಸ ಮೈಲಿಗಲ್ಲು ಸಾಧಿಸಿದ ಭಾರತದ ನಂ.1 ಐಟಿ ಸಂಸ್ಥೆ
ಬೆಂಗಳೂರು, ಜುಲೈ 9: ಟಾಟಾ ಗ್ರೂಪ್ ಸಮೂಹದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಭಾರತದಲ್ಲಿ ನಂ.1 ಸಾಫ್ಟ್ ವೇರ್ ರಫ್ತು ಸಂಸ್ಥೆ ಅಲ್ಲದೆ ವಿಶ್ವದ ನಂ. 1 ಸಾಫ್ಟ್ ವೇರ್ ಸಂಸ್ಥೆ ಎಂಬ ಅಗ್ಗಳಿಕೆ ಹೊಂದಿದೆ. ಈಗ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಐಟಿ ಸಂಸ್ಥೆ ಎಂಬ ಹೊಸ ಸಾಧನೆ ಮಾಡಿದೆ.
2019ರ ಏಪ್ರಿಲ್ ನಲ್ಲಿ ಟಿಸಿಎಸ್ ಮೊದಲ ಬಾರಿಗೆ 100 ಬಿಲಿಯನ್ ಮಾರುಕಟ್ಟೆ ಮೌಲ್ಯ ಹೊಂದಿರುವ ಐಟಿ ಸಂಸ್ಥೆಗಳ ಸಾಲಿಗೆ ಸೇರ್ಪಡೆಗೊಂಡಿತ್ತು. ಇದರ ಬೆನ್ನಲ್ಲೇ ಹೆಚ್ಚು ಹೆಚ್ಚು ನೇಮಕಾತಿಯನ್ನು ಮಾಡಿಕೊಳ್ಳಲಾಗಿದೆ. ಕೊವಿಡ್ 19 ಸಂದರ್ಭದಲ್ಲಿ ಉದ್ಯೋಗ ಕಡಿತ ಮಾಡಿರಲಿಲ್ಲ. ಸಂಸ್ಥೆಯ ಅಟ್ರಿಷನ್ ದರ ಶೇ 12.1 ರಷ್ಟಿದೆ.
ಜೂನ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ದಾಖಲೆಯ 20, 409 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ಈ ಮೂಲಕ ಒಟ್ಟಾರೆ, ಉದ್ಯೋಗಿಗಳ ಸಂಖ್ಯೆ 5,00,000ಕ್ಕೇರಿದೆ. ಜೂನ್ ಅಂತ್ಯಕ್ಕೆ 509,058 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

''ಸಂಸ್ಥೆಯ ಅತ್ಯಂತ ವೈವಿಧ್ಯಮಯ ಮಾನವ ಸಂಪನ್ಮೂಲ ಹೊಂದಿದೆ. ಸುಮಾರು 155 ರಾಷ್ಟ್ರೀಯತೆ ಹೊಂದಿರುವವರಿದ್ದಾರೆ, ಶೇ 36.2ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ,'' ಎಂದು ಎಚ್ಆರ್ ಅಧಿಕಾರಿ ಮಿಲಿಂದ್ ಲಕ್ಕಡ್ ಹೇಳಿದ್ದಾರೆ.
''ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕೋವಿಡ್ ಸಾಂಕ್ರಾಮಿಕದ ದಾಳಿ ನಡುವೆಯೂ ಟಿಸಿಎಸ್ ನೇಮಕಾತಿ ಮುಂದುವರೆಸಿತ್ತು. ಸಿಬ್ಬಂದಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಯಿತು. ಶೇ 70ಕ್ಕೂ ಅಧಿಕ ಸಿಬ್ಬಂದಿ ಹಾಗೂ ಕುಟುಂಬಸ್ಥರಿಗೆ ಕೊರೊನಾ ಲಸಿಕೆ ನೀಡಲಾಗಿದೆ,'' ಎಂದರು.
Recommended Video
ಕಳೆದ ತ್ರೈಮಾಸಿಕದಲ್ಲಿ 45,111 ಕೋಟಿ ರು ಆದಾಯ ಗಳಿಕೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ 18.5 ರಷ್ಟು ಆದಾಯ ಗಳಿಕೆಯಾಗಿದೆ. ಲಾಭ ಶೇ 28.5ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ 8.1 ಬಿಲಿಯನ್ ಡಾಲರ್ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.












Click it and Unblock the Notifications