ಟ್ಯಾಕ್ಸಿ ಸರ್ವೀಸ್: ಟಾಟಾ-ಉಬರ್ ಪಾಲುದಾರಿಕೆಯಲ್ಲಿ 50 ಕಾರು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 22: ಉಬರ್ ಟೆಕ್ನಾಲಜೀಸ್ ಮತ್ತು ಟಾಟಾ ಗ್ರೂಪಿನ ಸಹಯೋಗ ಮುಂದುವರೆದಿದೆ. ಬೆಂಗಳೂರಿನಲ್ಲಿ ಟಾಟಾ ಮೋಟಾರ್ಸ್ ನ ಟಾಟಾ ಆಫರ್ ಯೋಜನೆ ಅಡಿಯಲ್ಲಿ ಉಬರ್ ನ ಚಾಲಕರಿಗೆ 50 ಕಾರುಗಳನ್ನು ಇತ್ತೀಚೆಗೆ ವಿತರಣೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಸಣ್ಣ ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶ ಈ ಟಾಟಾ ಆಫರ್ ನದ್ದಾಗಿದೆ. ಕೇವಲ 30,000 ರೂಪಾಯಿಗಳ ಡೌನ್ ಪೇಮೆಂಟ್ ನೊಂದಿಗೆ ಕಾರನ್ನು ಖರೀದಿಸುವ ಯೋಜನೆ ಇದಾಗಿದ್ದು, 7 ರಿಂದ 10 ದಿನಗಳೊಳಗೆ ಕಾರುಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.[ಟ್ಯಾಕ್ಸಿ ರದ್ದು ಮಾಡಿದರೂ ದಂಡ ಕಟ್ಟಬೇಕು!]

Tata Motors delivers 50 cars to Uber

ಟಾಟಾ ಮೋಟಾರ್ಸ್ ಬ ಪಿವಿಬಿಯು ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ನಕುಲ್ ಗುಪ್ತಾ ಅವರು ಮಾತನಾಡಿ, 'ಬೆಂಗಳೂರಿನಲ್ಲಿ ಚಾಲಕರಿಗೆ ಅತ್ಯಂತ ಸರಳವಾದ ರೀತಿಯಲ್ಲಿ ಉಬರ್ ಮೂಲಕ ವಾಹನಗಳನ್ನು ವಿತರಣೆ ಮಾಡುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ವಾಹನ ಖರೀದಿ ಸಂದರ್ಭದಲ್ಲಿ ಚಾಲಕರು ಎದುರಿಸುವ ಸಮಸ್ಯೆಗಳನ್ನು ಅತ್ಯಂತ ಸರಳ ರೀತಿಯಲ್ಲಿ ಪರಿಹಾರ ಮಾಡುತ್ತಿರುವ ಈ ಯೋಜನೆ ನಮ್ಮ ಈ ಪಾಲುದಾರಿಕೆಯ ಬದ್ಧತೆಯ ಪ್ರತೀಕವಾಗಿದೆ 'ಎಂದು ಹರ್ಷ ವ್ಯಕ್ತಪಡಿಸಿದರು.[ದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದ ಒಲಾ]

ಟಾಟಾ ಮೋಟಾರ್ಸ್ ನ ಇಂಧನಕ್ಷಮತೆ ಇರುವ ಕಾರುಗಳಾದ ಇಂಡಿಕಾ ಮತ್ತು ಇಂಡಿಗೋ ಕಾರುಗಳ ಖರೀದಿಗೆ ಈ ಯೋಜನೆ ಸೌಲಭ್ಯದೊರೆಯುತ್ತದೆ. ಇದಕ್ಕೆಟಾಟಾ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್ ಮತ್ತು ಟಾಟಾ ಮೋಟಾರ್ಸ್ ಫೈನಾನ್ಸ್ ನಿಂದ ಸಾಲ ಸೌಲಭ್ಯಇದೆ. ಈ ಮೂಲಕ ಉಬರ್ ಚಾಲಕರಿಗೆ 31 ಇಂಡಿಕಾ ಮತ್ತು 25 ಇಂಡಿಗೋ ಕಾರುಗಳನ್ನು ವಿತರಿಸಲಾಯಿತು.[ಓಲಾ ಲಕ್ಸ್ : ಐಷಾರಾಮಿ ಕಾರಲ್ಲಿ ಸುತ್ತಾಡಿ]

Tata Motors delivers 50 cars to Uber

ಈ ಕಾರುಗಳ ಖರೀದಿ ಮಾಡಿದ ಗ್ರಾಹಕರು ಉಚಿತವಾದ ಎಕ್ಸಸರೀಸ್, ಜಿಪಿಎಸ್, ಎಕ್ಷಟರ್ನಲ್ ವಾರೆಂಟಿ ಮತ್ತು ಈ ವರ್ಷಕ್ಕೆ ವಿಮೆಯನ್ನು ಉಚಿತವಾಗಿ ಪಡೆದಿದ್ದಾರೆ.

ಟಾಟಾ ಮೋಟಾರ್ಸ್ 2015 ರಲ್ಲಿ ಬೆಂಗಳೂರಿನಲ್ಲಿ 940 ಅಂಕಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನಕ್ಕೇರಿದೆ. ಉಬರ್ ನ ಡ್ರೈವರ್ ಪಾರ್ಟ್ನರ್ ಯೋನೆಯಡಿ ಟಾಟಾ ಮೋಟಾರ್ಸ್ ಬೆಂಗಳೂರಿನಲ್ಲಿರುವ ತನ್ನ 11 ವರ್ಕ್ ಶಾಪ್ ಗಳಲ್ಲಿ ಅತ್ಯುತ್ತಮ ಸೇವೆಗಳನ್ನು ನೀಡಲು ಬದ್ಧವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tata Motors delivered 50 cars to Uber Technologies. The company delivered cars under the ‘Tata Offer’ to drivers on the Uber platform in Bengaluru.
Please Wait while comments are loading...