ಹೆಚ್ಚಳವಾಗಲಿದೆ ಸರ್ಕಾರಿ ನೌಕರರ ಟೇಕ್ ಹೋಮ್ ಸ್ಯಾಲರಿ

ನವದೆಹಲಿ, ಏ. 6: ಸರ್ಕಾರಿ ನೌಕರರು ಪ್ರತಿ ತಿಂಗಳು ಪಡೆಯುತ್ತಿದ್ದ ವೇತನದಲ್ಲಿ ದೊಡ್ಡ ಪ್ರಮಾಣದ ಏರಿಕೆಯಾಗಲಿದೆ. ಅಂದ ಮಾತ್ರಕ್ಕೆ ಸರ್ಕಾರ ಅವರ ವೇತನ ಏರಿಕೆ ಮಾಡಿಲ್ಲ. ಆದರೆ ಇಷ್ಟು ದಿನ ಇದ್ದ ಕಡ್ಡಾಯ ಆರೋಗ್ಯ ವಿಮೆಯನ್ನು ಐಚ್ಚಿಕವಾಗಿರಿಸುರುವುದು ವೇತನ ಏರಿಕೆಗೆ ಕಾರಣವಾಗಲಿದೆ.

ಬಜೆಟ್ ನಲ್ಲಿ ಆರೋಗ್ಯ ವಿಮೆಯನ್ನು ಅಗತ್ಯವಿದ್ದವರು ಮಾತ್ರ ಮಾಡಿಸಿಕೊಳ್ಳಬಹುದು ಇದು ಕಡ್ಡಾಯವಲ್ಲ ಎಂದು ಹೇಳಲಾಗಿರುವುದರಿಂದ ಲಕ್ಷಾಂತರ ಜನರ ಟೇಕ್ ಹೋಮ್ ಸ್ಯಾಲರಿ ಹೆಚ್ಚಾಗಲಿದೆ.[ಏನು ಸಾಧನೆ ಮಾಡಿದ್ದಾರಂತ ಇವರಿಗೆ ಸ್ಯಾಲರಿ ಹೈಕು?]

money

ಈ ಬಗ್ಗೆ ಎಂಪ್ಲಾಯ್ಸ್ ಸ್ಟೇಟ್ ಇನ್ಶೂರೆನ್ಸ್ ಕಾರ್ಪೋರೇಶನ್ ನೊಂದಿಗೆ ಮಾತುಕತೆ ನಡೆಸಿರುವ ಸರ್ಕಾರ ನಿರ್ದೇಶನ ನೀಡಿದೆ. ನೌಕರರಿಗೆ ಒತ್ತಾಯದ ವಿಮೆ ಮಾಡಿಸುವಂತಿಲ್ಲ. ವಿಮೆ ಅವರ ಇಚ್ಛೆಗೆ ಬಿಟ್ಟಿದ್ದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ನಲ್ಲೇ ತಿಳಿಸಿದ್ದಾರೆ.

ನೌಕರರಿಗೆ ಆರೋಗ್ಯ ವಿಮೆ ಬೇಕೋ? ಅಥವಾ ಬೇಡವೋ? ಎಂದು ಆಯ್ಕೆ ನೀಡಲಾಗುತ್ತದೆ. ಬೇಕಾದವರು ಸಮಗ್ರ ದಾಖಲೆ ನೀಡಿ ಮಾಡಿಸಿಕೊಳ್ಳಬಹುದು. ಆರೋಗ್ಯ ವಿಮೆ ಬಗ್ಗೆ ತೃಪ್ತಿ ಇಲ್ಲದವರು ಹೊರಗೆ ಉಳಿಯಬಹುದು ಎಂದು ಜೇಟ್ಲಿ ಸ್ಷಷ್ಟನೆ ನೀಡಿದ್ದಾರೆ.[ಪಿಎಫ್ ಹೊಸ ನಿಮಯ : ಟೇಕ್ ಹೋಮ್ ಸಂಬಳಕ್ಕೆ ಕುತ್ತು !]

ಗ್ರಾಸ್ ಸ್ಯಾಲರಿ 15 ಸಾವಿರಕ್ಕಿಂತ ಒಳಗಿದ್ದವರು ಇಎಸ್ ಐ ಸೌಲಭ್ಯಕ್ಕೆ ಒಳಪಡುತ್ತಿದ್ದರು. ನೌಕರರು ಶೇ. 4.75ನ್ನು ಆರೋಗ್ಯ ವಿಮೆಗಾಗಿ ನೀಡುತ್ತಿದ್ದರು. ಈ ಸೌಲಭ್ಯದ ಅಡಿ ದೇಶದ ಇಎಸ್ ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.[ಈಗ ನೋಡ್ತಿರೋದು ಟೇಕ್ ಹೋಮ್ ಸ್ಯಾಲರಿ!]

ಸರ್ಕಾರ ಆರೋಗ್ಯ ವಿಮೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ಈ ಬಗ್ಗೆ ಅಧಿಕೃತ ದಾಖಲೆಗಳು ಕೈ ಸೇರಿದ ಮೇಲೆ ಅದರಂತೆ ನಡೆದುಕೊಳ್ಳಲಾಗುವುದು ಎಂದು ಇಎಸ್ಐಸಿ ಬೋರ್ಡ್ ನ ಸದಸ್ಯರೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+