ನೌಕರರಿಗೆ ದೀಪಾವಳಿ ಬೋನಸ್ 400 ಫ್ಲ್ಯಾಟ್, 1,260 ಕಾರು

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಸೂರತ್, ಅಕ್ಟೋಬರ್ 28: ಕೋಟ್ಯಧಿಪತಿ, ವಜ್ರದ ಉದ್ಯಮಿ ಸಾವ್ಜಿ ಧೋಲಾಕಿಯಾ ದೀಪಾವಳಿ ಬೋನಸ್ ಆಗಿ ತಮ್ಮ ನೌಕರರಿಗೆ ನೀಡಿರುವುದು 400 ಫ್ಲ್ಯಾಟ್ ಹಾಗೂ 1,260 ಕಾರು. ಹರೇ ಕೃಷ್ಣ ಎಕ್ಸ್ ಪೋರ್ಟ್ಸ್ ಧೋಲಾಕಿಯಾ ಅವರು ನಡೆಸುತ್ತಿರುವ ಕಂಪನಿ. ಈ ವರ್ಷ ನೌಕರಿಗೆ ದೀಪಾವಳಿ ಬೋನಸ್ ನೀಡಲು ಅವರು ಖರ್ಚು ಮಾಡಿರುವುದು 51 ಕೋಟಿ ರುಪಾಯಿ.

ಈ ವರ್ಷ ಕಂಪನಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. 1,716 ನೌಕರರಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕಾರಣಕ್ಕೆ 'ಬೆಸ್ಟ್ ಪರ್ಫಾಮರ್ಸ್' ಎಂದು ಗುರುತಿಸಿ, ಬೋನಸ್ ನೀಡಲಾಗಿದೆ. ಕಳೆದ ಮಂಗಳವಾರ ನಡೆದ ನೌಕರರ ಸಭೆಯಲ್ಲಿ ಈ ತೀರ್ಮಾನ ಘೋಷಿಸಲಾಗಿದೆ. 2011ರಿಂದಲೂ ದೀಪಾವಳಿ ಸಂದರ್ಭದಲ್ಲಿ ಹರೇ ಕೃಷ್ಣ ಎಕ್ಸ್ ಪೋರ್ಟ್ಸ್ ಈ ರೀತಿ ನೌಕರರಿಗೆ ಬೋನಸ್ ನೀಡುತ್ತಾ ಬಂದಿದೆ.[ಮೋದಿ ಸರಕಾರದಿಂದ ಯೋಧರಿಗೆ ಭರ್ಜರಿ ದೀಪಾವಳಿ ಬೋನಸ್]

Surat diamond merchant gifts 400 flats, 1,260 cars as bonus

ಕಳೆದ ವರ್ಷ ಕಂಪನಿಯು ನೌಕರರಿಗೆ 200 ಫ್ಲ್ಯಾಟ್ ಹಾಗೂ 491 ಕಾರು ನೀಡಿತ್ತು. ಅದರ ಹಿಂದಿನ ವರ್ಷ ಪರ್ಫಾಮೆನ್ಸ್ ಇನ್ಸೆಂಟಿವ್ಸ್ ಎಂದು 50 ಕೋಟಿ ನೀಡಲಾಗಿತ್ತು ಎಂದು ಧೋಲಾಕಿಯಾ ಹೇಳಿದ್ದಾರೆ. ಧೋಲಾಕಿಯಾ ಅವರು ಮೂಲತಃ ಅಮ್ರೇಲಿ ಜಿಲ್ಲೆಯ ದುಧಲ ಹಳ್ಳಿಯವರು. ಅವರ ಸಂಬಂಧಿಯಿಂದ ಸಾಲ ಪಡೆದು, ವಜ್ರದ ವ್ಯವಹಾರ ಆರಂಭಿಸಿದ್ದರು.[ಕೇಂದ್ರ ನೌಕರರಿಗೆ ಬೋನಸ್ ಘೋಷಿಸಿದ ಅರುಣ್ ಜೇಟ್ಲಿ]

ಇಂಥ ದೊಡ್ಡ ಮೊತ್ತದ ಆಸ್ತಿ ಸಲೀಸಾಗಿ ಆಗಿರುವುದಲ್ಲ. ತಮ್ಮ ಮಗ 'ದ್ರವ್ಯ' ಸ್ವಂತ ಕಾಲಿನ ಮೇಲೆ ನಿಲ್ಲುವುದನ್ನು ಕಲಿಯಲಿ, ಬದುಕಿನ ನಿರ್ಧಾರ ಸ್ವತಂತ್ರವಾಗಿ ತೆಗೆದುಕೊಳ್ಳುವುದು ರೂಢಿಯಾಗಲಿ ಎಂಬ ಕಾರಣಕ್ಕೆ ಮೂರು ಜೊತೆ ಬಟ್ಟೆ ಹಾಗೂ ಏಳು ಸಾವಿರ ರುಪಾಯಿ ಹಣ ಕೊಟ್ಟು ಕೊಚ್ಚಿಗೆ ಕಳುಹಿಸಿದ್ದರು ಧೋಲಾಕಿಯಾ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Savji Dholakia, a Surat based diamond merchant has gifted 400 flats and 1,260 cars as Diwali bonuses to his employees.
Please Wait while comments are loading...