ಜೀ ಎಂಟರ್‌ಟೈನ್‌ಮೆಂಟ್ ಅಧ್ಯಕ್ಷರಾಗಿ ಪ್ರವರ್ತಕ ಸುಭಾಷ್ ಚಂದ್ರ ನೇಮಕ

ನವದೆಹಲಿ, ಆಗಸ್ಟ್‌ 18: ಮಾಧ್ಯಮ ಮತ್ತು ಮನರಂಜನಾ ಕಂಪನಿ ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ (Zeel) ಸಂಸ್ಥೆಯ ಅಧ್ಯಕ್ಷರಾಗಿ ಪ್ರವರ್ತಕ ಸುಭಾಷ್ ಚಂದ್ರ ನೇಮಕಗೊಂಡಿದ್ದಾರೆ.

ಕಾರ್ಯನಿರ್ವಾಹಕ ನಿರ್ದೇಶಕರಾಗಿ ರಾಜೀನಾಮೆ ನೀಡಿದ ನಂತರ ಪ್ರವರ್ತಕ ಸುಭಾಷ್ ಚಂದ್ರ ಅವರನ್ನು ಅಧ್ಯಕ್ಷ ಎಮಿರಿಟಸ್ ಆಗಿ ನೇಮಕ ಮಾಡಿದೆ. ಅವರ ನೇಮಕಾತಿ ಆಗಸ್ಟ್ 19, 2020 ರಿಂದ ಜಾರಿಗೆ ಬರಲಿದೆ. ಇದರರ್ಥ ಈ ಹಿಂದೆ ಅಧ್ಯಕ್ಷರಾಗಿದ್ದ ಚಂದ್ರ ಈಗ ಗೌರವಾನ್ವಿತ ಶೈಲಿಯಲ್ಲಿ ವ್ಯವಹಾರದೊಂದಿಗೆ ಸಂಬಂಧ ಹೊಂದಿದ್ದಾರೆ.

Zeel ಮಾಜಿ ಹಣಕಾಸು ಸೇವೆಗಳ ಕಾರ್ಯದರ್ಶಿ ಆರ್. ಗೋಪಾಲನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ಗೋಪಾಲನ್ 2019 ರ ನವೆಂಬರ್‌ನಿಂದ ಹೆಚ್ಚುವರಿ ನಿರ್ದೇಶಕರಾಗಿ (ಸ್ವತಂತ್ರ) ಸೇವೆ ಸಲ್ಲಿಸುತ್ತಿದ್ದಾರೆ.

Subhash Chandra Appointed Chairman Emeritus At Zee Entertainment

"ಚಂದ್ರ ಕಂಪನಿಯನ್ನು ಸ್ಥಾಪಿಸಿದ ಮತ್ತು ಅವರ ಸಾಟಿಯಿಲ್ಲದ ಕೊಡುಗೆಗಳನ್ನು ಗೌರವದ ಸಂಕೇತವಾಗಿ ಪರಿಗಣಿಸಿ, 2020 ರ ಆಗಸ್ಟ್ 19 ರಿಂದ ಜಾರಿಗೆ ಬರುವಂತೆ 'ಚೇರ್ಮನ್ ಎಮೆರಿಟಸ್' ಆಗಿ ಕಾರ್ಯನಿರ್ವಹಿಸುವಂತೆ ಮಂಡಳಿಯು ವಿನಂತಿಸಿತು ಮತ್ತು ಅದನ್ನು ಅವರು ಒಪ್ಪಿಕೊಂಡರು . ಈ ಸ್ಥಾನವು ಯಾವುದೇ ಸಂಭಾವನೆಯನ್ನು ಪಡೆಯುವುದಿಲ್ಲ. ಅಧ್ಯಕ್ಷರಾಗಿ ಎಮೆರಿಟಸ್, ಮಂಡಳಿ ಮತ್ತು ಕಂಪನಿಯ ಹಿರಿಯ ನಿರ್ವಹಣೆಗೆ ಚಂದ್ರ ಮಾರ್ಗದರ್ಶನ ನೀಡಲಿದ್ದಾರೆ'' ಎಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ಗೆ ಮಂಗಳವಾರ ಸಲ್ಲಿಸಿದ ಅರ್ಜಿಯಲ್ಲಿ Zeel ತಿಳಿಸಿದೆ.

ಹೊಸ ಅಧ್ಯಕ್ಷ ಗೋಪಾಲನ್ ಅವರು ದೇಶದ ಆರ್ಥಿಕ ಮತ್ತು ಹಣಕಾಸು ಆಡಳಿತದಲ್ಲಿ ವಾಣಿಜ್ಯ ಮತ್ತು ಹಣಕಾಸು ಸಚಿವಾಲಯ ಮತ್ತು ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳಲ್ಲಿ ದೀರ್ಘ ಅನುಭವವನ್ನು ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+