ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ನಾಪ್ ಡೀಲ್ ಕಂಪನಿಯ 600 ಉದ್ಯೋಗಿಗಳು ಮನೆಗೆ!

ಕಳೆದ 12 ತಿಂಗಳಲ್ಲಿ ಆದ ನಷ್ಟವನ್ನು ಸರಿದೂಗಿಸಲು ಉದ್ಯೋಗಗಳನ್ನು ಕಡಿತಗೊಳಿಸುವ ತೀರ್ಮಾನ ಕೈಗೊಂಡಿರುವ ಸಂಸ್ಥೆ.

|
Google Oneindia Kannada News

ನವದೆಹಲಿ, ಫೆಬ್ರವರಿ 22: ವ್ಯವಹಾರದಲ್ಲಿ ಇಳಿಕೆ ಉಂಟಾಗಿರುವ ಕಾರಣದಿಂದಾಗಿ ಪ್ರಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆಯಾದ ಸ್ನಾಪ್ ಡೀಲ್ ತನ್ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಲ್ಲಿ ಸುಮಾರು 600 ಮಂದಿಯನ್ನ ಮನೆಗೆ ಕಳುಹಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಕೆಲ ದಿನಗಳ ಹಿಂದೆಯೇ ಈ ಸಂಸ್ಥೆ ತನ್ನ ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಎಂದು ವರದಿಯಾಗಿತ್ತು. ಆದರೆ, ಎಷ್ಟು ಸಂಖ್ಯೆಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆಂದು ಕಂಪನಿ ಹೇಳಿರಲಿಲ್ಲ. ಇದೀಗ, ಈ ನಷ್ಟವನ್ನು ಸರಿದೂಗಿಸಲಾಗಿದೆ.[ಸ್ನಾಪ್ ಡೀಲ್ ಸಂಸ್ಥೆಯಿಂದ ಶೇ 30ರಷ್ಟು ಉದ್ಯೋಗಿಗಳು ಹೊರಕ್ಕೆ]

Snapdeal to layoff 600 employees to cover the financial losses in past 12 months

ಕಳೆದ ಹನ್ನೆರಡು ತಿಂಗಳಲ್ಲಿ ಸಂಸ್ಥೆಗೆ ಉಂಟಾಗಿರುವ ನಷ್ಟವನ್ನು ಸರಿದೂಗಿಸುವ ಪ್ರಯತ್ನವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಈಗಾಗಲೇ ಕಂಪನಿಯ ಎಲ್ಲಾ ಉದ್ಯೋಗಿಗಳಿಗೂ ಇ-ಮೇಲ್ ಮುಖೇನ್ ಈ ನಿರ್ಧಾರವನ್ನು ತಿಳಿಸಲಾಗಿದೆ. ಅದರಲ್ಲಿ ಕಂಪನಿಗಾದ ನಷ್ಟ ಸರಿದೂಗುವವರೆಗೂ ಕಂಪನಿಯ ಸಂಸ್ಥಾಪಕರಾದ ಕುನಾಲ್ ಬಹಲ್ ಹಾಗೂ ರೋಹಿತ್ ಬನ್ಸಾಲ್ ಅವರು ವೇತನ ತಗೆದುಕೊಳ್ಳದಿರಲು ನಿರ್ಧರಿಸಿರುವುದಾಗಿ ಹೇಳಲಾಗಿದೆ.

ಇದಿಷ್ಟೇ ಅಲ್ಲ, ಕಂಪನಿಯ ಉನ್ನತ ಸ್ಥಾನಗಳಲ್ಲಿರುವ ಕೆಲವಾರು ಅಧಿಕಾರಿಗಳ ಸಂಬಳಕ್ಕೂ ಕತ್ತರಿ ಬೀಳಲಿದೆ. ಮುಂದಿನ ಎರಡು ವರ್ಷಗಳಲ್ಲಿ ಕಂಪನಿಯನ್ನು ಲಾಭದ ಕಡೆಗೆ ನಡೆಸಲು ಉದ್ದೇಶಿಸಲಾಗಿದ್ದು, ಈ ನಿಟ್ಟಿನಲ್ಲಿ ಕೆಲವಾರು ನೋವಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಕಂಪನಿ ಹೇಳಿದೆ.

English summary
Online marketplace Snapdeal has confirmed to layoff its 600 employees to cover the financial losses in last 12 months. Even it has mentioned that, the founders also not going to draw their salary until the company returns to its right track.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X