ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ಉದ್ದಿಮೆಗಳ ಮೇಲೆ ಪರಿಣಾಮ ಬೀರಿದ ಏಕ-ಬಳಕೆ ಪ್ಲಾಸ್ಟಿಕ್ ನಿಷೇಧ

|
Google Oneindia Kannada News

ನವದೆಹಲಿ, ಜುಲೈ 4 : ಕೆಲವು ಏಕ-ಬಳಕೆಯ ಪ್ಲಾಸ್ಟಿಕ್ (ಎಸ್‌ಯುಪಿ) ವಸ್ತುಗಳನ್ನು ನಿಷೇಧಿಸುವ ಭಾರತ ಸರ್ಕಾರದ ಕ್ರಮವು ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ (ಎಫ್‌ಎಂಸಿಜಿ) ವಿಭಾಗದ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೋಟಾಕ್ ಇನ್‌ಸ್ಟಿಟ್ಯೂಷನಲ್ ಇಕ್ವಿಟೀಸ್‌ನ ವಿಶ್ಲೇಷಕರು ತಿಳಿಸಿದ್ದಾರೆ.

ಜುಲೈ 1 ರಿಂದ ಜಾರಿಗೆ ಬರುವಂತೆ ದೇಶಾದ್ಯಂತ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಆಮದು, ವಿತರಣೆ ಮತ್ತು ಮಾರಾಟವನ್ನು ಕೇಂದ್ರವು ನಿಷೇಧಿಸಿದೆ.

ಪಟ್ಟಿಯಲ್ಲಿರುವ ವಸ್ತುಗಳು ಪ್ಲಾಸ್ಟಿಕ್ ಸ್ಟಿಕ್‌ಗಳೊಂದಿಗೆ ಇಯರ್ ಬಡ್‌, ಬಲೂನ್‌ಗಳಿಗೆ ಪ್ಲಾಸ್ಟಿಕ್ ಸ್ಟಿಕ್‌ಗಳು, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್‌, ಐಸ್‌ಕ್ರೀಮ್ ಸ್ಟಿಕ್‌, ಪಾಲಿಸ್ಟೈರೀನ್ ಅಲಂಕಾರ, ಪ್ಲಾಸ್ಟಿಕ್ ಪ್ಲೇಟ್‌, ಕಪ್‌ಗಳು, ಗ್ಲಾಸ್‌, ಕಟ್ಲರಿಗಳಾದ ಫೋರ್ಕ್‌, ಚಮಚ, ಚಾಕು, ಸ್ಟ್ರಾಗಳು ಸೇರಿದಂತೆ ಹಲವು ವಸ್ತುಗಳನ್ನು ನಿಷೇಧಿಸಲಾಗಿದೆ.

Single Use Plastic Ban May Effefcts On Fast Moving Consumer Goods Category

ಪಟ್ಟಿ ಮಾಡಲಾದ ಪ್ಯಾಕ್ ಮಾಡಲಾದ ಗ್ರಾಹಕ ಸರಕುಗಳ ತಯಾರಕರಿಗೆ, ಅಂತಹ ಉತ್ಪನ್ನಗಳಿಗೆ ಹೊಂದಿಕೊಂಡಂತೆ ಹೆಚ್ಚಾಗಿ ಸ್ಟ್ರಾಗಳು ಇತ್ಯಾದಿ ವಸ್ತುಗಳನ್ನು ಒಳಗೊಂಡಿರುತ್ತದೆ.

ಕೊಟಕ್ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್‌ನ ವಿಶ್ಲೇಷಕರು ಮಧ್ಯಮಾವಧಿಯಲ್ಲಿ ಸ್ಯಾಚೆಟ್‌ಗಳು, ಪೌಚ್‌ಗಳು, ಹೊದಿಕೆಗಳು ಮತ್ತು ಲ್ಯಾಮಿನೇಟೆಡ್ ಟ್ಯೂಬ್‌ಗಳಂತಹ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳಿಗೆ ನಿಷೇಧದದಿಂದ ಬದಲೀ ವಸ್ತುಗಳ ಮೇಲಿನ ಅವಲಂಬನೆಯಿಂದ ಉತ್ಪಾದನಾ ವೆಚ್ಚ ಅಧಿಕಾವಗಲಿದ್ದು, ಲಾಭದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಅನಿವಾರ್ಯವಾಗಿ ಕಂಪನಿಗಳು ಬೆಲೆ ಹೆಚ್ಚಳದಂತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Single Use Plastic Ban May Effefcts On Fast Moving Consumer Goods Category


ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ದ್ವಿಗುಣ

ಈ ನಿಷೇಧಿತ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳಿಗೆ ಬಳಸುವ ಪ್ಲಾಸ್ಟಿಕ್‌ಗಳ ಪಾಲು ಶೇಕಡ 2 ಅಥವಾ 3 ಕ್ಕಿಂತ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.

2020ನೇ ವರ್ಷದಲ್ಲಿ 3.5 ಮಿಲಿಯನ್ ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಮಾಡಿದ್ದ ಭಾರತವು ಐದನೇ ಅತಿ ಹೆಚ್ಚು ದೇಶ ಎನಿಸಿಕೊಂಡಿತ್ತು. ತಲಾವಾರು ಆಧಾರದ ಮೇಲೆ, ಭಾರತದ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯು 2016-20ರ ವೇಳೆಗಿಂತ ದ್ವಿಗುಣಗೊಂಡಿದೆ.

"ಪ್ರಸ್ತುತ ನಿಷೇಧವು ಕಡಿಮೆ ಉಪಯುಕ್ತತೆ ಮತ್ತು ಹೆಚ್ಚಿನ ಕಸದ ಸಾಮರ್ಥ್ಯವನ್ನು ಹೊಂದಿರುವ ವಸ್ತುಗಳನ್ನು ಒಳಗೊಂಡಿದೆ. ಇವುಗಳನ್ನು ದೊಡ್ಡ ಗ್ರಾಹಕ ಕಂಪನಿಗಳು ವ್ಯಾಪಕವಾಗಿ ಬಳಸುವುದಿಲ್ಲ, ಆದ್ದರಿಂದ ಸದ್ಯಕ್ಕೆ ಸೀಮಿತ ಪರಿಣಾಮ ಬೀರುತ್ತದೆ. ನಿಷೇಧಿತ ವಸ್ತುಗಳ ಪೈಕಿ, ಜ್ಯೂಸ್ ಮತ್ತು ಪಾನೀಯಗಳ ಕಡಿಮೆ ಮೌಲ್ಯದ ಪ್ಯಾಕ್‌ಗಳೊಂದಿಗೆ ಬಳಸಲಾಗುವ ಪ್ಲಾಸ್ಟಿಕ್ ಸ್ಟ್ರಾಗಳು ಆಮದು ಮಾಡಿಕೊಂಡಂತೆ ಪೇಪರ್ ಸ್ಟ್ರಾಗಳು ಪ್ರತಿ ಯೂನಿಟ್‌ಗೆ 0.25-0.30 ರು.ಗಳಿಂದ 1-1.25 ರು.ಗಳಿಗೆ ಏರಿಕೆಯಾಗಬಹುದು" ಎಂದು ವಿಶ್ಲೇಷಕರು ಹೇಳಿದರು.

ಸಿಗರೇಟ್ ಕಂಪನಿಗಳು ಈಗಾಗಲೇ ಜೈವಿಕ ವಿಘಟನೀಯ ಪ್ಲಾಸ್ಟಿಕ್ ಹೊದಿಕೆಗಳನ್ನು ಬಳಸುತ್ತಿದ್ದು ಅವುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

Recommended Video

Ind vs Eng ಕ್ರೀಡಾಂಗಣದಲ್ಲಿ ಏನಿದು ಆತಂಕಕಾರಿ ಸುದ್ದಿ | *Cricket | OneIndia Kannada

English summary
The Centre banned manufacturing, imports, distribution and sale of single-use plastic items across the country, effective 1 July. Single-use plastic items will have minimal impact on the financials of listed entities in the fast moving consumer goods (FMCG) category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X