• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ವಯಾಗ್ರಕ್ಕೆ ಅಮೆರಿಕದಲ್ಲಿ ಮಣೆ, ಫಾರ್ಮಾ ಕಂಪೆನಿಗಳಿಗೆ ಲಾಟರಿ

|

2020ನೇ ಇಸವಿ ಬರುತ್ತಿದ್ದ ಹಾಗೆ ಭಾರತದ 'ಜಗದ್ವಿಖ್ಯಾತ' ವಯಾಗ್ರ ಮಾತ್ರೆಗಳ ಪಾಲಿಗೆ ಅಮೆರಿಕದ ಮಾರುಕಟ್ಟೆ ತೆರೆದುಕೊಳ್ಳುತ್ತದೆ. ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ನೆರವಾಗುವ, ನರದೌರ್ಬಲ್ಯದಿಂದ ಸಮಸ್ಯೆ ಎದುರಿಸುತ್ತಿರುವವರ ಪಾಲಿಗೆ ಭರವಸೆಯಂತೆ ಇರುವ ಈ ನೀಲಿ ಮಾತ್ರೆಯ ಪೇಟೆಂಟ್ ಅನ್ನು ಪಿಫೈಜರ್ ಇನ್ನೆರಡು ವರ್ಷಕ್ಕೆ ಕಳೆದುಕೊಳ್ಳುತ್ತದೆ.

ಆ ನಂತರ ಅಮೆರಿಕದ ಮಾರುಕಟ್ಟೆಯು ಭಾರತದ ಕಂಪೆನಿಗಳ ಪಾಲಿಗೆ ತೆರೆದುಕೊಳ್ಳುತ್ತದೆ. ಜಗತ್ತಿನಾದ್ಯಂತ ಇರುವ ಹದಿನೈದು ಕಂಪೆನಿಗಳಿಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು ವಯಾಗ್ರ ಮಾರುಕಟ್ಟೆಗೆ ಅನುಮತಿ ನೀಡುತ್ತದೆ ಎಂದು 'ದಿ ಪ್ರಿಂಟ್' ವರದಿ ಮಾಡಿದೆ.

ವಯಾಗ್ರಾ ಓವರ್ ಡೋಸ್, ಯುವಕ ಸಾವು

ಈಗ ಯಾವ ಹದಿನೈದು ಕಂಪೆನಿಗಳಿಗೆ ಅಮೆರಿಕದಲ್ಲಿ ಒಪ್ಪಿಗೆ ಸಿಕ್ಕಿದೆಯೋ ಅವುಗಳಲ್ಲಿ ಭಾರತದ್ದೇ ಏಳು ಕಂಪೆನಿಗಳಿವೆಯಂತೆ. ರುಬಿಕಾನ್ ರೀಸರ್ಚ್, ಹೆಟೆರೋ ಡ್ರಗ್ಸ್, ಮೆಕ್ ಲಾಯ್ಡ್ಸ್ ಫಾರ್ಮಾ, ಡಾ.ರೆಡ್ಡೀಸ್, ಅರಬಿಂದೊ ಫಾರ್ಮಾ, ಟೊರೆಂಟೊ ಫಾರ್ಮಾಸ್ಯುಟಿಕಲ್ಸ್ ಮತ್ತು ಅಜಂತಾ ಫಾರ್ಮಾಗೆ ಅನುಮತಿ ಸಿಕ್ಕಿಹೋಗಿದೆ.

ಇದೆಲ್ಲ ಸರಿ, ಭಾರತದ ಕಂಪೆನಿಗಳ ವಯಾಗ್ರವನ್ನು ಏಕೆ ಖರೀದಿ ಮಾಡ್ತಾರೆ? ಉಳಿದ ಕಂಪೆನಿಗಳು ಸಹ ಇವೆಯಲ್ಲ ಎಂಬ ಪ್ರಶ್ನೆ ಸಹಜ. ಈ ಮಾತ್ರೆಯ ಬೆಲೆ ಅಮೆರಿಕದಲ್ಲಿ 65 ಡಾಲರ್. ಅಂದರೆ ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ 4400 ರುಪಾಯಿ. ಕಳೆದ ವರ್ಷವಷ್ಟೇ ಪಿಫೈಜರ್ ಬಿಡುಗಡೆ ಮಾಡಿದ ಜೆನರಿಕ್ ಮಾದರಿ ಮಾತ್ರೆಗಳನ್ನು ಆ ಬೆಲೆಯ ಅರ್ಧಕ್ಕೆ ನಿಗದಿ ಮಾಡಿತ್ತು.

ತಜ್ಞರೇ ಅಭಿಪ್ರಾಯ ಪಡುವ ಹಾಗೆ, ಭಾರತದ ಕಂಪೆನಿಗಳು ನೀಡುವ ಬೆಲೆಗೆ ಇದು ಹೋಲಿಸಲು ಸಾಧ್ಯವೇ ಇಲ್ಲ. ಅದಾಗಲೇ ಭಾರತದ ದೇಸಿ ಮಾದರಿ ವಯಾಗ್ರವನ್ನು 32 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇಪ್ಪತ್ತು ವರ್ಷದ ಹಿಂದೆ ಅಮೆರಿಕದಲ್ಲಿ ವಯಾಗ್ರ ಬಿಡುಗಡೆ ಮಾಡಲಾಗಿತ್ತು. ಆಗ ಅದು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿತ್ತು.

ವಯಾಗ್ರಾ ನುಂಗಿದರೆ ಎಂದೂ ದಪ್ಪಗಾಗಲ್ಲ

ಇನ್ನೊಂದು ವಿಚಾರ ನೆನಪಿರಲಿ, ವಯಾಗ್ರ ಬಹಳ ಖ್ಯಾತಿ ಪಡೆದ ಮೇಲೆ ಶೇ ಎಂಬತ್ತರಷ್ಟು ಪ್ರಮಾಣದಲ್ಲಿ ಅದರ ನಕಲಿ ಉತ್ಪಾದನೆಗಳು ಆರಂಭವಾದವು. ಅದರಲ್ಲೂ ಆನ್ ಲೈನ್ ನಲ್ಲಿ ಮಾರಾಟ ಮಾಡುವುದರ ಬಗ್ಗೆ ಬಹಳ ಎಚ್ಚರಿಕೆ ಇರಬೇಕು. ಇಸ್ರೇಲ್, ಪೋಲೆಂಡ್, ಸೌದಿ ಅರೇಬಿಯಾದಲ್ಲಿ ವಯಾಗ್ರಕ್ಕೆ ಒಂದಕ್ಕೆ ಐದು ಬೆಲೆ ಕೊಟ್ಟು ಖರೀದಿಸುವವರಿದ್ದರು. ಪಿಫೈಜರ್ ಕಂಪೆನಿ ಪಾಲಿಗಂತೂ ಈ ಮಾರಾಟದಿಂದ ಅದೃಷ್ಟವೋ ಅದೃಷ್ಟ ಒಲಿಯಿತು.

ಮೊದಲಿಗೆ ಪಿಫೈಜರ್ ಕಂಪೆನಿಯವರು ಸೈಡೆನ್ ಫಿಲ್ ಮಾತ್ರೆ ಪ್ರಯೋಗ ಮಾಡಿದ್ದು ಎದೆಯ ಸೋಂಕಿಗೆ ಅಂತಲೇ. ಆದರೆ ಇದರಿಂದ ಆ ಸಮಸ್ಯೆಗೆ ಏನೂ ಪರಿಹಾರ ಸಿಗಲಿಲ್ಲ. ಅದರ ಬದಲಿಗೆ ಪುರುಷರಲ್ಲಿ ನಿಮಿರುವಿಕೆ ಹೆಚ್ಚಾಯಿತು. ಪ್ರಯೋಗದಲ್ಲಿ ಪಾಲ್ಗೊಂಡವರ ಲೈಂಗಿಕ ಜೀವನ ಚೆನ್ನಾಗಿ ಆಗಿದೆ ಅಂತ ಗೊತ್ತಾಗಿದ್ದರಿಂದ ಆ ಮಾತ್ರೆಯ ಬಳಕೆ ಹೀಗೆ ಆರಂಭವಾಯಿತು.

English summary
Come 2020, the US could be awash with numerous Indian copycat versions of Viagra, the iconic blue pill that cures erectile dysfunction, as Pfizer loses the patent of its drug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X