• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಷೇರುಪೇಟೆ: ಸೆನ್ಸೆಕ್ಸ್ 764 ಪಾಯಿಂಟ್ಸ್ ಕುಸಿತ, 14,400 ಪಾಯಿಂಟ್ಸ್‌ಗಿಂತ ಕೆಳಗಿಳಿದ ನಿಫ್ಟಿ

|

ನವದೆಹಲಿ, ಜನವರಿ 22: ಭಾರೀ ವೇಗದಲ್ಲಿ ಮುನ್ನುಗ್ಗುತ್ತಿದ್ದ ಭಾರತೀಯ ಷೇರುಪೇಟೆ ಶುಕ್ರವಾರ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 764 ಪಾಯಿಂಟ್ಸ್‌ ಕುಸಿತ ಕಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 14,400 ಪಾಯಿಂಟ್ಸ್‌ಗಿಂತ ಕೆಳಗಿಳಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 746.22 ಪಾಯಿಂಟ್ಸ್‌ ಅಥವಾ ಶೇಕಡಾ 1.50ರಷ್ಟು ಇಳಿಕೆಗೊಂಡು 48,878.54 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 218.50 ಪಾಯಿಂಟ್ಸ್‌ ಅಥವಾ ಶೇಕಡಾ 1.50ರಷ್ಟು ಕುಸಿದು 14,371.90 ಪಾಯಿಂಟ್ಸ್‌ಗೆ ಮುಟ್ಟಿದೆ.

50 ಸಾವಿರ ಪಾಯಿಂಟ್ ದಾಟಿದ ಸೂಚ್ಯಂಕ, ಹೂಡಿಕೆದಾರರು ಸಂತಸ50 ಸಾವಿರ ಪಾಯಿಂಟ್ ದಾಟಿದ ಸೂಚ್ಯಂಕ, ಹೂಡಿಕೆದಾರರು ಸಂತಸ

ಇಂದು ನಿಫ್ಟಿಯಲ್ಲಿ 960 ಷೇರುಗಳು ಏರಿಕೆಗೊಂಡರೆ, 1961 ಷೇರುಗಳು ಕುಸಿತ ಕಂಡಿವೆ ಮತ್ತು 132 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಆಕ್ಸಿಸ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಎಸ್‌ಬಿಐ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದ ಷೇರುಗಳಾಗಿದ್ದು, ಬಜಾಜ್ ಆಟೋ, ಹೀರೋ ಮೊಟೊಕಾರ್ಪ್, ಈಚರ್ ಮೋಟಾರ್ಸ್, ಎಚ್‌ಯುಎಲ್ ಮತ್ತು ಟಿಸಿಎಸ್ ಲಾಭಗಳಿಸಿವೆ.

ನಿಫ್ಟಿ ಬ್ಯಾಂಕ್, ಮೆಟಲ್ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ತಲಾ 3 ಪ್ರತಿಶತದಷ್ಟು ಕುಸಿದಿದ್ದರೆ, ಇಂಧನ, ಫಾರ್ಮಾ ಮತ್ತು ಇನ್ಫ್ರಾ ವಲಯಗಳು ತಲಾ ಶೇಕಡಾ 1ರಷ್ಟು ಕುಸಿದವು. ಆದಾಗ್ಯೂ, ಆಟೋಮೊಬೈಲ್ ಸೂಚ್ಯಂಕವು ಶೇಕಡಾ 1 ಕ್ಕಿಂತ ಹೆಚ್ಚಾಗಿದೆ.

ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಲಾಭದ ಬುಕ್ಕಿಂಗ್ ಮಧ್ಯೆ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 72.97 ರಷ್ಟಿದೆ. ಇದು ಹಿಂದಿನ 72.99 ರ ಸಮೀಪಕ್ಕೆ ಹೋಲಿಸಿದರೆ ಪ್ರತಿ ಡಾಲರ್‌ಗೆ 73.03 ಕ್ಕೆ ಸ್ವಲ್ಪ ಕಡಿಮೆಯಾಗಿದೆ.

English summary
Sensex was down 746.22 points or 1.50% at 48,878.54, and the Nifty was down 218.50 points or 1.50% at 14,371.90.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X