ಫ್ಯೂಚರ್- ರಿಲಯನ್ಸ್ ವ್ಯವಹಾರವನ್ನು ಸೆಬಿ ತಡೆಯುವಂತಿಲ್ಲ: ಹೈ ಕೋರ್ಟ್
ನವದೆಹಲಿ, ಡಿ. 21: ಕಂಪೆನಿ ಕಾಯ್ದೆಯ ಕಾನೂನು ನಿಯಮಗಳು ಮತ್ತು ಸೆಬಿ ನಿಬಂಧನೆಗಳಿಗೆ ಎಲ್ಲಿಯ ತನಕ ಫ್ಯೂಚರ್ ರೀಟೇಲ್ ಲಿಮಿಟೆಡ್ (FRL) ಸಲ್ಲಿಸಿದ ಯೋಜನೆ (ಸ್ಕೀಮ್) ಒಳಪಟ್ಟಿರುತ್ತದೋ ಅದನ್ನು ಸೆಬಿ ಮಂಜೂರು ಮಾಡಲೇಬೇಕು. ಅಮೆಜಾನ್ ಸಲ್ಲಿಸಿರುವ ಆಕ್ಷೇಪವು ಸೆಬಿಯನ್ನು ಸ್ಕೀಮ್‌ಗೆ ಮಂಜೂರು ಮಾಡುವುದರಿಂದ ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶದಲ್ಲಿ ಸೋಮವಾರ ತಿಳಿಸಿದೆ.
ಎಫ್ ಆರ್ ಎಲ್ ಮಂಡಳಿಯು ನಿರ್ಣಯ ತೆಗೆದುಕೊಂಡು, ಸ್ಕೀಮ್‌ಗೆ ಒಪ್ಪಿಕೊಂಡಿದೆ ಮತ್ತು ರಿಲಯನ್ಸ್ ಗೆ ವ್ಯವಹಾರ ಮಾರಾಟ ಮಾಡುವುದು ನ್ಯಾಯಬದ್ಧವಾಗಿದೆ ಮತ್ತು ಕಾನೂನು ನಿಯಮಾವಳಿಗೆ ಅನುಸಾರವಾಗಿದೆ- ಅಮೆಜಾನ್ ವಾದಿಸುತ್ತಿರುವಂತೆ ಕಾನೂನಿಗೆ ವಿರುದ್ಧವಾಗಿಲ್ಲ.
ಫ್ಯೂಚರ್ ಜೊತೆ ಡೀಲ್, ಮಧ್ಯಂತರ ಆದೇಶದ ಬಗ್ಗೆ RIL ಪ್ರತಿಕ್ರಿಯೆ
ಅಮೆಜಾಮನ್‌ನಿಂದ ಫೆಮಾ ಮತ್ತು ಎಫ್ ಡಿಐ ನಿಯಮಾವಳಿ ಉಲ್ಲಂಘನೆ ಆಗಿದೆ. ಷೇರುದಾರರ ಒಪ್ಪಂದವನ್ನು ಒಟ್ಟಾಗಿ ನೋಡಿದರೆ, ಎಫ್ ಆರ್ ಎಲ್ ಮೇಲೆ "ಹತೋಟಿ" ಸಾಧಿಸಿರುವುದು ತಿಳಿಯುತ್ತದೆ. ಸರ್ಕಾರದ ಅನುಮತಿ ಇಲ್ಲದೆ ಇದು ಫೆಮಾ ಮತ್ತು ಎಫ್ ಡಿಐ ನಿಯಮಾವಳಿಗೆ ವ್ಯತಿರಿಕ್ತವಾಗಿದೆ.

ಅಮೆಜಾಮನ್‌ನಿಂದ ಎಫ್ ಆರ್ ಎಲ್ ಹಾಗೂ ರಿಲಯನ್ಸ್ ವಿರುದ್ಧ ಸಿವಿಲ್ ತಪ್ಪಾಗಿದೆ. ಒಂದು ವೇಳೆ ಇದರಿಂದ ನಷ್ಟ ಏರ್ಪಟ್ಟಲ್ಲಿ ಆ ಎರಡೂ ಕಂಪೆನಿಗಳು ಅಮೆಜಾನ್ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಕಾನೂನು ಪ್ರಾಧಿಕಾರಗಳು- ಸೆಬಿಗೆ ಅರ್ಜಿ/ ಆಕ್ಷೇಪಣೆಗೆ ಕಾನೂನು ಅನ್ವಯ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
ಈ ಮೇಲ್ಕಂಡ ಆದೇಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಫ್ಯೂಚರ್ಸ್ ರೀಟೇಲ್ ಲಿಮಿಟೆಡ್ ನಿಂದ ಕಾನೂನು ನಿಯಮಗಳು ಹಾಗೂ ಕಂಪೆನಿ ಕಾಯ್ದೆ ಅನುಸಾರದಂತೆ ಸಲ್ಲಿಸಿರುವ ಯೋಜನೆಗೆ ಸೆಬಿ ಮಂಜೂರಾತಿ ಮಾಡಬೇಕಿದೆ. ಈ ಯೋಜನೆಗೆ ಅನುಮತಿ ನೀಡುವುದಕ್ಕೆ ಇನ್ನು ಮುಂದೆ ಅಮೆಜಾನ್ ಆಕ್ಷೇಪಣೆ ಪ್ರಸ್ತುತ ಅಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications