ಎಸ್ಬಿಐ ಯೊನೊ ಬಳಸಿ ಆನ್‌ಲೈನ್ ಖಾತೆ ಮರು ಆರಂಭ
ನವದೆಹಲಿ, ಜೂನ್ 12: ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಜನಪ್ರಿಯ ಸೌಲಭ್ಯವನ್ನು ಪುನರ್ ಆರಂಭಿಸಿದೆ. ಆಧಾರ್ ಮೂಲದ ತ್ವರಿತ ಡಿಜಿಟಲ್ ಉಳಿತಾಯ ಖಾತೆ ಸೌಲಭ್ಯವನ್ನು ಯೊನೊ ಪ್ಲಾಟ್‌ಫಾರ್ಮ್ ಬಳಸಿ ಆನ್‌ಲೈನ್ ಖಾತೆ ತೆರೆಯಬಹುದು. ಇನ್ಸ್ಟಾ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ಕಾಗದ ರಹಿತ ಸೇವೆಯಾಗಿದ್ದು ಶುಕ್ರವಾರದಿಂದ ಮರು ಪ್ರಾರಂಭಗೊಂಡಿದೆ.
Recommended Video
ಕೇವಲ PAN ಮತ್ತು ಆಧಾರ್ ಸಂಖ್ಯೆಯೊಂದಿಗೆ ಸಂಪೂರ್ಣ ಕಾಗದರಹಿತ ಮತ್ತು ತ್ವರಿತ ಡಿಜಿಟಲ್ ಉಳಿತಾಯ ಖಾತೆಯನ್ನು ಆರಂಭಿಸಬಹುದಾಗಿದೆ. ಬ್ಯಾಂಕ್ ಶಾಖೆಗೆ ಭೇಟಿ ನೀಡದೆ, ಸುಲಭವಾಗಿ ವ್ಯವಹಾರ ಇದರಿಂದ ಸಾಧ್ಯವಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.
ಇನ್ಸ್ಟಾ ಉಳಿತಾಯ ಬ್ಯಾಂಕ್ ಖಾತೆಗಳ ಎಲ್ಲಾ ಹೊಸ ಖಾತೆದಾರರಿಗೆ ಬ್ಯಾಂಕ್ ಮೂಲ ವೈಯಕ್ತಿಕಗೊಳಿಸಿದ RPay ಎಟಿಎಂ-ಕಮ್-ಡೆಬಿಟ್ ಕಾರ್ಡ್ ನೀಡುತ್ತದೆ. ಖಾತೆ ತೆರೆಯಲು, ಗ್ರಾಹಕರು ಯೋನೊ App ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಖಾತೆಗೆ ಲಾಗಿನ್ ಆಗಿ, ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನಮೂದಿಸಬೇಕು,

ಎಸ್‌ಎಂಎಸ್ ಎಚ್ಚರಿಕೆಗಳು ಮತ್ತು ಎಸ್‌ಬಿಐನ ಮಿಸ್ಡ್ ಕಾಲ್ ಸೇವೆಯೊಂದಿಗೆ ಖಾತೆದಾರರಿಗೆ ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ. ಒಂದು ವರ್ಷದ ಅವಧಿಯೊಳಗೆ ಗ್ರಾಹಕರು ತಮ್ಮ ಹತ್ತಿರದ ಎಸ್‌ಬಿಐ ಶಾಖೆಗೆ ಭೇಟಿ ನೀಡಿ ಪೂರ್ಣ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಪೂರ್ಣಪ್ರಮಾಣದಲ್ಲಿ ಅಪ್ಡೇಟ್ ಮಾಡಬಹುದು.












Click it and Unblock the Notifications