ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಬಿಐನಿಂದ ಆನ್‌ಲೈನ್ ಕ್ರೆಡಿಟ್ ಕಾರ್ಡ್ ಬಿಡುಗಡೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್. 16: ಎಸ್ ಬಿಐ ಕಾರ್ಡ್ ಆಲ್ ಲೈನ್ ಕ್ರೆಡಿಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿದೆ. ಅಮೆಜಾನ್, ಬುಕ್ ಮೈ ಶೋ ಮತ್ತು ಕ್ಲೀಯರ್ ಟ್ರಿಪ್ ನ ಹೊಂದಾಣಿಕೆಯಲ್ಲಿ ಹೊಸ ಯೋಜನೆಯನ್ನು ಜಾರಿ ಮಾಡಿದೆ.

ನಾವು ಈ ಬಗೆಯ ಯೋಜನೆ ಜಾರಿ ಮಾಡಬೇಕು ಎಂದು ಬಹಳ ದಿನಗಳಿಂದ ಚಿಂತನೆ ನಡೆಸುತ್ತಿದ್ದೆವು. ಸಾಮಾನ್ಯ ಕಾರ್ಡ್ ಗೆ ಹೋಲಿಸಿದರೆ ನೀವು ಇಲ್ಲಿ ಹೆಚ್ಚಿನ ರೀವಾರ್ಡ್ ಪಾಯಿಂಟ್ಸ್ ಪಡೆದುಕೊಳ್ಳಬಹುದು ಎಂದು ಎಸ್ ಬಿಐ ಕಾರ್ಡ್ ನ ಸಿಇಒ ವಿಜಯ್ ಜೆಸುಜಾ ಹೇಳಿದರು.

SBI Card Launches Credit Card For Online Shopping

ಒಲಾ ಕ್ಯಾಬ್, ಲೆನ್ಸ್ ಕಾರ್ಟ್, ಪುಡ್ ಫಂಡಾ ಮತ್ತು ಪ್ಯಾಬ್ ಫರ್ನಿಷ್ ಜತೆಗೂ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಆನ್ ಲೈನ್ ಮೂಲಕ ಎರಡು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣದ ವ್ಯವಹಾರ ನಡೆಸಿದರೆ 4 ಸಾವಿರ ರು. ಮೌಲ್ಯದ ಗಿಫ್ಟ್ ಓಚರ್ ಗಳನ್ನು ಕುಳಿತಲ್ಲಿಯೇ ಪಡೆದುಕೊಳ್ಳಬಹುದು.

ಕಾರ್ಡ್ ಪಡೆದುಕೊಳ್ಳುವ ರೀತಿ
499 ರು. ಶುಲ್ಕವನ್ನು ನೀಡಿ ಗ್ರಾಹಕರು ಆನ್ ಲೈನ್ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬೇಕಾಗುತ್ತದೆ. ಕಾರ್ಡ್ ಪಡೆದುಕೊಂಡ ತಕ್ಷಣ ನಿಮಗೆ ಅಮೆಜಾನ್ ನಿಂದ 500 ರು. ಗಿಫ್ಟ್ ಓಚರ್ ದೊರೆಯುತ್ತದೆ.

ಸಿಂಪ್ಲಿ ಕ್ಲಿಕ್ ಎಸ್ ಬಿಐ ಕಾರ್ಡ್ ಎಂದು ಇದನ್ನು ಕರೆಯಲಾಗಿದ್ದು ಇಂಧನ ತುಂಬಿಸಿಕೊಂಡಲಾಗಲೂ ಈ ಕಾರ್ಡ್ ಬಳಕೆ ಮಾಡಿ ಕೊಡಲು ಕಂಪನಿ ಎಸ್ ಬಿಐ ಚಿಂತನೆ ನಡೆಸುತ್ತಿದೆ. ವಾರ್ಷಿಕವಾಗಿ ಒಂದು ಲಕ್ಷಕ್ಕಿಂತ ಹೆಚ್ಚಿನ ಹಣ ವೆಚ್ಚ ಮಾಡಿದರೆ ನಿರ್ದಿಷ್ಟ ಶುಲ್ಕ ಸಲ್ಲಿಕೆ ಮಾಡಬೇಕಗುತ್ತದೆ.

English summary
SBI Card today rolled out an online specific credit card --SimplyCLICK --in association with seven partners including Amazon India, BookMyShow and Cleartrip. "We wanted to launch a card with special benefit meant for online purchases. In this card, whatever the spending be, we will offer a five times more reward than in case of normal cards," Vijay Jasuja, CEO SBI Card told reporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X