ಭರ್ಜರಿ ಏರಿಕೆ ಮೂಲಕ ಎದ್ದು ನಿಂತ ರುಪಾಯಿ, 70ಕ್ಕಿಂತ ಕೆಳಗಿಳಿದ ಡಾಲರ್

ಮುಂಬೈ, ನವೆಂಬರ್ 29: ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ ಗುರುವಾರ ಭರ್ಜರಿ ಜಿಗಿತ ಕಂಡಿದೆ. 74 ಪೈಸೆಯಷ್ಟು ಏರಿಕೆ ಆಗಿ, ಪ್ರತಿ ಡಾಲರ್ ಗೆ 70 ರುಪಾಯಿ ಹಂತದಿಂದ ಕೆಳಗೆ ಇಳಿದು, 69.88 ರುಪಾಯಿಯಲ್ಲಿ ವ್ಯವಹಾರ ನಡೆಸಿ, ಮೂರು ತಿಂಗಳಲ್ಲೇ ಅತಿ ಹೆಚ್ಚಿನ ಮಟ್ಟಕ್ಕೆ ರುಪಾಯಿ ತಲುಪಿದೆ.

ಅಂತರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ 70.15ಕ್ಕೆ ದಿನದ ವಹಿವಾಟನ್ನು ಆರಂಭಿಸಿದ ರುಪಾಯಿ, 69.88ಕ್ಕೆ ತಲುಪಿತು. ಕಳೆದ ಆಗಸ್ಟ್ 27ನೇ ತಾರೀಕು ರುಪಾಯಿ ಮೌಲ್ಯ ಈ ಮಟ್ಟದಲ್ಲಿ ಇತ್ತು. ಅಮೆರಿಕ ಡಾಲರ್ ಮೌಲ್ಯವು ಇತರೆ ಕರೆನ್ಸಿಗಳ ವಿರುದ್ಧ ಕೂಡ ಇಳಿಕೆ ದಾಖಲಿಸಿದೆ. ಅಮೆರಿಕದ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್, ಸದ್ಯಕ್ಕೆ ಕೇಂದ್ರ ಬ್ಯಾಂಕ್ ನ ಬಡ್ಡಿ ದರದಲ್ಲಿ ಯಾವುದೇ ಏರಿಕೆ ಮಾಡಲ್ಲ ಎಂಬ ಹೇಳಿಕೆ ನೀಡಿದ ಮೇಲೆ ನಡೆದ ಬೆಳವಣಿಗೆಯಿದು.

ವಿದೇಶಿ ಹೂಡಿಕೆ ಒಳಹರಿವು ಹೆಚ್ಚಳ ಆಗಿರುವುದು ಹಾಗೂ ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆ ಕಾರಣಕ್ಕೆ ರುಪಾಯಿ ಬಲಗೊಂಡಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ವಿದೇಶಿ ಪೋರ್ಟ್ ಫೋಲಿಯೋ ಹೂಡಿಕೆದಾರರು 961.26 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಬುಧವಾರ ಖರೀದಿಸಿದ್ದಾರೆ.

Rupee extends gains, below 70 per dollar mark

ಈ ಮಧ್ಯೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ವಹಿವಾಟು 0.14% ಕಡಿಮೆಗೆ ಅಂದರೆ ಪ್ರತಿ ಬ್ಯಾರೆಲ್ ಗೆ $ 58.68ಗೆ ನಡೆಯುತ್ತಿದೆ. ಇನ್ನು ಶುಕ್ರವಾರ ಭಾರತದ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ ದಾಖಲಾಗಿದೆ. ಸೆನ್ಸೆಕ್ಸ್ 453.46 ಅಂಶ ಹಾಗೂ ನಿಫ್ಟಿ ಸೂಚ್ಯಂಕವು 129.85 ಅಂಶ ಏರಿಕೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+