ಜಸ್ಟ್ ಡಯಲ್‌ನ 41% ಪಾಲು ರಿಲಯನ್ಸ್ ರೀಟೇಲ್ ತೆಕ್ಕೆಗೆ

ಮುಂಬೈ, ಸೆಪ್ಟೆಂಬರ್ 02: ಸೆಬಿ ಸ್ವಾಧೀನ ನಿಯಮಾವಳಿಗಳಿಗೆ ಅನುಗುಣವಾಗಿ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ ಆರ್‌ ವಿ ಎಲ್), ಜಸ್ಟ್ ಡಯಲ್ ಲಿಮಿಟೆಡ್‌ನ (ಜಸ್ಟ್ ಡಯಲ್) ಏಕೈಕ ನಿಯಂತ್ರಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದು ಸೆಪ್ಟೆಂಬರ್ 1, 2021ರಿಂದ ಅನುಷ್ಠಾನಕ್ಕೆ ಬಂದಿದೆ. ಜಸ್ಟ್ ಡಯಲ್‌ನ ನಿಯಂತ್ರಣ ಷೇರುಗಳ ಖರೀದಿ ಬಗ್ಗೆ 2021ರ ಜುಲೈ 16ರಂದು ರಿಲಯನ್ಸ್ ಹೇಳಿಕೆ ನೀಡಿತ್ತು.

ಎ). ಜಸ್ಟ್ ಡಯಲ್‌ನ ಪ್ರತಿ 10 ರೂ ಮೌಲ್ಯದ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ 1,020 ರೂಪಾಯಿ ದರದಲ್ಲಿ ಒಟ್ಟು 1.31 ಕೋಟಿ ಈಕ್ವಿಟಿ ಷೇರುಗಳನ್ನು ಜುಲೈ 20, 2021ರಂದು ವಿ ಎಸ್ ಎಸ್ ಮಣಿ ಅವರಿಂದ ಬ್ಲಾಕ್ ವಿಂಡೋ ಸೌಲಭ್ಯದ ಮೂಲಕ ಷೇರು ವಿನಿಮಯದಲ್ಲಿ ಆರ್‌ಆರ್‌ವಿಎಲ್ ಖರೀದಿಸಿದೆ. ಜಸ್ಟ್ ಡಯಲ್‌ನ ಬಾಕಿ ಪಾವತಿಯ ಈಕ್ವಿಟಿ ಷೇರು ಬಂಡವಾಳದ ಆದ್ಯತಾನಂತರದ ಶೇ 15.63ರಷ್ಟನ್ನು ಈ ಖರೀದಿ ಒಳಗೊಂಡಿದೆ.

ಬಿ) ಸೆಪ್ಟೆಂಬರ್ 1, 2021ರಂದು, ಆದ್ಯತಾ ವಿಚಾರಗಳಿಗೆ ಅನುಗುಣವಾಗಿ, 10 ರೂಪಾಯಿಯ ಷೇರುಗಳನ್ನು ಪ್ರತಿ ಈಕ್ವಿಟಿ ಷೇರಿಗೆ 1022.25 ರೂಪಾಯಿ ದರದಲ್ಲಿ (ಪ್ರತಿ ಈಕ್ವಿಟಿ ಷೇರಿನ 1012.25 ರೂಪಾಯಿ ಪ್ರೀಮಿಯಂ ಸೇರಿದಂತೆ) 2.12 ಕೋಟಿ ಈಕ್ವಿಟಿ ಷೇರುಗಳನ್ನು ಜಸ್ಟ್ ಡಯಲ್ ಹಂಚಿಕೆ ಮಾಡಿದೆ. ಇದು ಆರ್‌ ಆರ್‌ ವಿ ಎಲ್‌ ಗೆ ಬಾಕಿ ಪಾವತಿಯ ಷೇರು ಬಂಡವಾಳದ ಆದ್ಯತಾನಂತರದ ಶೇ 25.35ರಷ್ಟನ್ನು ಪ್ರತಿನಿಧಿಸುತ್ತದೆ ಎಂದು ಷೇರುಪೇಟೆಗೆ ನೀಡಿದ ಪ್ರಕಟಣೆಯಲ್ಲಿ ರಿಲಯನ್ಸ್ ಸಂಸ್ಥೆ ಹೇಳಿದೆ.

Reliance Retail ventures acquires sole control of Just dial

ಆರ್‌ಆರ್‌ವಿಎಲ್ ಬಗ್ಗೆ:
ರಿಲಯನ್ಸ್ ಇಂಡಸ್ಟ್ರೀಸ್ ಗ್ರೂಪ್‌ನ ಅಂಗಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್ )ಯಾಗಿದೆ. ರಿಲಯನ್ಸ್ ರೀಟೇಲ್ ಭಾರತದ ಅತಿದೊಡ್ಡ ಮತ್ತು ಹೆಚ್ಚು ಲಾಭದಾಯಕ ರೀಟೇಲ್ ಕಂಪನಿ. ಡೆಲೋಯಿಟ್ ಗ್ಲೋಬಲ್ ಪವರ್ಸ್ ವಿಶ್ವದ ವೇಗವಾಗಿ ಬೆಳೆಯುತ್ತಿರುವ ರೀಟೇಲ್ ವ್ಯಾಪಾರಿಗಳಲ್ಲಿ ಒಂದಾಗಿದೆ. ರೀಟೇಲ್ ಮಾರಾಟ 2021 ಸೂಚ್ಯಂಕದಲ್ಲಿ 53 ನೇ ಸ್ಥಾನದಲ್ಲಿರುವ ಏಕೈಕ ಭಾರತೀಯ ಕಂಪನಿ ಇದಾಗಿದೆ.

ಜಸ್ಟ್ ಡಯಲ್ ಭಾರತದ ಪ್ರಮುಖ ಸ್ಥಳೀಯ ಸರ್ಚ್ ಇಂಜಿನ್ ವೇದಿಕೆಯಾಗಿದೆ. ಇದು ವೆಬ್‌ಸೈಟ್, ಆಪ್, ಟೆಲಿಫೋನ್, ಪಠ್ಯ, ಸಂಸ್ಥೆ, ಕಚೇರಿ ಹೀಗೆ ಬಹು ವೇದಿಕೆಗಳ ಮೂಲಕ ಭಾರತದಾದ್ಯಂತ ಸೇವೆಗಳನ್ನು ಒದಗಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+