ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ 2ನೇ ಅತಿ ವೇಗದ ಬೆಳವಣಿಗೆಯ ರಿಟೇಲರ್ ರಿಲಯನ್ಸ್

|
Google Oneindia Kannada News

ನವದೆಹಲಿ, ಮೇ 10: ಕೋಟ್ಯಧಿಪತಿ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ರಿಟೇಲ್ ಲಿಮಿಟೆಡ್ ಡೆಲೊಯ್ಟ್‌ನ ಜಾಗತಿಕ ರಿಟೇಲ್ ಸಂಸ್ಥೆಗಳ 2021ರ ಜಗತ್ತಿನ ಅತಿ ವೇಗದ ಬೆಳವಣಿಗೆಯ ರಿಟೇಲರ್‌ಗಳ ಪಟ್ಟಿಯಲ್ಲಿ ಎರಡನೆಯ ಸ್ಥಾನ ಪಡೆದಿದೆ. ಆದರೆ, ಕಳೆದ ವರ್ಷಕ್ಕಿಂತ ಅದು ಒಂದು ಸ್ಥಾನ ಇಳಿಕೆಯಾಗಿದೆ.

ಗ್ಲೋಬಲ್ ಪವರ್ಸ್ ಆಫ್ ರಿಟೇಲಿಂಗ್‌ನಲ್ಲಿ ಈ ಹಿಂದೆ 56ನೇ ಸ್ಥಾನ ಪಡೆದಿದ್ದ ಸಂಸ್ಥೆ, ಈ ಬಾರಿ 53ನೇ ಸ್ಥಾನಕ್ಕೆ ಏರಿದೆ. ಪ್ರಮುಖ 250 ರಿಟೇಲರ್‌ಗಳ ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ಸಂಸ್ಥೆ ರಿಲಯನ್ಸ್ ರಿಟೇಲ್. ಗ್ಲೋಬಲ್ ಪವರ್ಸ್ ಆಫ್ ರಿಟೇಲಿಂಗ್ ಮತ್ತು ವರ್ಲ್ಡ್ಸ್ ಫಾಸ್ಟೆಸ್ಟ್ ರಿಟೇಲರ್‌ಗಳ ಪಟ್ಟಿಯಲ್ಲಿ ಸತತ 4ನೇ ಬಾರಿ ರಿಲಯನ್ಸ್ ರಿಟೇಲ್ ಕಾಣಿಸಿಕೊಂಡಿದೆ.

'ಕಳೆದ ವರ್ಷ ಅತಿವೇಗದ ಬೆಳವಣಿಗೆಯ 50 ಕಂಪೆನಿಗಳಲ್ಲಿ ಮೊದಲ ಸ್ಥಾನದಲ್ಲಿದ್ದ ರಿಲಯನ್ಸ್ ರಿಟೇಲ್, ಈ ಬಾರಿ ಎರಡನೆಯ ಸ್ಥಾನದಲ್ಲಿದೆ. ಕಂಪೆನಿಯು ವರ್ಷದಿಂದ ವರ್ಷಕ್ಕೆ ಶೇ 41.8ರಷ್ಟು ಬೆಳವಣಿಗೆ ಕಂಡಿದೆ. ಇಲೆಕ್ಟ್ರಾನಿಕ್ಸ್, ಫ್ಯಾಷನ್, ಲೈಫ್‌ಸ್ಟೈಲ್ ಮತ್ತು ದಿನಸಿ ಚಿಲ್ಲರೆ ಸರಪಳಿಯಲ್ಲಿನ ತನ್ನ ಮಳಿಗೆಗಳ ಸಂಖ್ಯೆಯನ್ನು ಶೇ 13.1ರಷ್ಟು ಹೆಚ್ಚಿಸಿಕೊಂಡಿದೆ. 2020-21ನೇ ಹಣಕಾಸು ವರ್ಷದ ಅಂತ್ಯದ ವೇಳೆಗೆ 7,000ಕ್ಕೂ ಅಧಿಕ ಪಟ್ಟಣ ಹಾಗೂ ನಗರಗಳಲ್ಲಿ 11,784 ಮಳಿಗೆಗಳನ್ನು ಹೊಂದಿದೆ' ಎಂದು ಡೆಲೊಯ್ಟ್ ತಿಳಿಸಿದೆ.

Reliance Retail 2nd fastest growing retailer in world

'ವಾಟ್ಸಾಪ್ ಬಳಸಿಕೊಂಡು ಜಿಯೋ ಮಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿನ ರಿಲಯನ್ಸ್ ರಿಟೇಲ್ ಡಿಜಿಟಲ್ ವಾಣಿಜ್ಯ ವ್ಯವಹಾರಗಳನ್ನು ವೃದ್ಧಿಸಲು ಮತ್ತು ವಾಟ್ಸಾಪ್‌ನಲ್ಲಿ ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಲು ಕಂಪೆನಿಯು ವಾಟ್ಸಾಪ್ ಜತೆ ಪಾಲುದಾರಿಗೆ ಹೊಂದುತ್ತಿದೆ' ಎಂದು ತಿಳಿಸಿದೆ.

English summary
Reliance Retail 2nd fastest growing retailer in world. The list is topped by US giant Walmart Inc, which retains its position as world's top retailer. Amazon.com Inc improved its position to rank second.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X