ಕಾಶ್ಮೀರಕ್ಕಾಗಿ ಅಂಬಾನಿಯಿಂದ ಸ್ಪೆಷಲ್ ಟಾಸ್ಕ್ ಫೋರ್ಸ್

ನವದೆಹಲಿ, ಆಗಸ್ಟ್ 12: ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆ ಮಾಡಲು ಉತ್ಸಾಹ ತೋರಿಸಿರುವ ಉದ್ಯಮಿ ಮುಕೇಶ್ ಅಂಬಾನಿ ಅವರು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ನಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ವಿಶೇಷ ಟಾಸ್ಕ್ ಫೋರ್ಸ್‌ಅನ್ನು ರಚಿಸುವುದಾಗಿ ತಿಳಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೋಮವಾರ ಮಾತನಾಡಿದ ಅಧ್ಯಕ್ಷ ಮುಕೇಶ್ ಅಂಬಾನಿ, ನೂತನವಾಗಿ ರಚನೆಯಾದ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ನಲ್ಲಿ ಹೂಡಿಕೆ ಸಂಬಂಧಿ ಚಟುವಟಿಕೆಗಳನ್ನು, ಪ್ರಕಟಣೆಗಳನ್ನು ಮಾಡಲು ಈ ಗುಂಪನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.

ಸೌದಿ ಅರಾಮ್ಕೋದಲ್ಲಿ ಆಯಿಲ್‌ನಿಂದ ರಾಸಾಯನಿಕ ಉದ್ಯಮದವರೆಗೆ $75 ಬಿಲಿಯನ್ ಷೇರು ಮಾರಾಟ ಹಾಗೂ ಜಿಯೋ ಫೈಬರ್ ಆರಂಭದ ಬಗ್ಗೆ ಪ್ರಕಟಿಸಿದ ಅವರು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳ ಅಭಿವೃದ್ಧಿಗೆ ಬೆಂಬಲ ನೀಡಲು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

Reliance Mukesh Ambani Special Task Force For Jammu And Kashmir Ladakh

'ಗೌರವಾನ್ವಿತ ಪ್ರಧಾನಿ ಅವರ ಮನವಿ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ನ ಎಲ್ಲ ಅಭಿವೃದ್ಧಿ ಅಗತ್ಯಗಳಲ್ಲಿ ಅಲ್ಲಿನ ಜನರ ಬೆಂಬಲಕ್ಕೆ ನಾವು ಬದ್ಧರಾಗಿದ್ದೇವೆ. ಇಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ರಿಲಯನ್ಸ್ ವಿಶೇಷ ಕಾರ್ಯಪಡೆಯನ್ನು ರಚಿಸಲಿದೆ' ಎಂದು ಹೇಳಿದ್ದಾರೆ.

ಸೌದಿ ಅರಾಮ್ಕೋ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಮುಕೇಶ್ ಅಂಬಾನಿ, ರಿಲಯನ್ಸ್‌ನ ರಿಫೈನಿಂಗ್ ಆಂಡ್ ಪೆಟ್ರೋಕೆಮಿಕಲ್ ಬಿಸಿನೆಸ್‌ ಆದ ಆಯಿಲ್ ಟು ಕೆಮಿಕಲ್‌ನ (ಓಟಿಸಿ) 75 ಬಿಲಿಯನ್ ಡಾಲರ್ ಮೊತ್ತದ ಶೇ 20ರಷ್ಟು ಷೇರುಗಳನ್ನು ಖರೀದಿಗೆ ಅವಕಾಶ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+