• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ಜಿಯೋಫೈಬರ್ 30 ದಿನ ಉಚಿತ ಟ್ರಯಲ್ ಆಫರ್

|

ಬೆಂಗಳೂರು, ಆ. 31: ಪ್ರತಿ ಭಾರತೀಯ ಮನೆಯನ್ನೂ ಡಿಜಿಟಲ್ ಸಬಲೀಕರಣಗೊಳಿಸಲು ಜಿಯೋಫೈಬರ್ ತನ್ನ ಟ್ಯಾರಿಫ್ ಪ್ಲಾನ್‌ಗಳನ್ನು ಪರಿಷ್ಕರಿಸಿದೆ. ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕವು ಅತ್ಯಗತ್ಯವಾಗಿರುವ ಇಂದಿನ ಸವಾಲಿನ ಸಮಯದಲ್ಲಿ ಈ ಹೊಸ ಟ್ಯಾರಿಫ್ ಪ್ಲಾನ್‌ಗಳು ಅದನ್ನು ಎಲ್ಲರಿಗೂ ಎಟುಕುವಂತೆ ಮಾಡುತ್ತಿವೆ.

ಹೊಸ ಜಿಯೋಫೈಬರ್ ಪ್ಲಾನ್‌ಗಳು ನಿಜವಾದ ಅಪರಿಮಿತ ಅಂತರಜಾಲವನ್ನು ನೀಡಲಿದ್ದು, ಸಿಮೆಟ್ರಿಕ್ ಸ್ಪೀಡ್ (ಅಪ್‌ಲೋಡ್ ವೇಗ = ಡೌನ್‌ಲೋಡ್ ವೇಗ) ಹೊಂದಿರಲಿವೆ. ಪ್ಲಾನ್‌ಗಳು ತಿಂಗಳಿಗೆ ಕೇವಲ ರೂ. 399ರಿಂದ ಪ್ರಾರಂಭವಾಗಲಿದ್ದು, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಟಾಪ್ 12 ಪೇಯ್ಡ್ ಓಟಿಟಿ ಆಪ್‌ಗಳ ಚಂದಾದಾರಿಕೆಯನ್ನು ನೀಡಲಿವೆ.

ಫೈಬರ್ ಸೆಟ್ ಟಾಪ್ ಬಾಕ್ಸ್ ನಲ್ಲೂ ಜಿಯೋ ನ್ಯೂಸ್ ಆಪ್ ಲಭ್ಯ

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, "ಒಂದು ದಶಲಕ್ಷಕ್ಕೂ ಹೆಚ್ಚು ಸಂಪರ್ಕಿತ ಮನೆಗಳನ್ನು ಹೊಂದಿರುವ ಜಿಯೋಫೈಬರ್ ಈಗಾಗಲೇ ದೇಶದ ಅತಿದೊಡ್ಡ ಫೈಬರ್ ಪ್ರೊವೈಡರ್ ಆಗಿದೆಯಾದರೂ ಭಾರತ ಮತ್ತು ಭಾರತೀಯರಿಗಾಗಿ ನಮ್ಮ ದೂರದೃಷ್ಟಿ ಇನ್ನೂ ದೊಡ್ಡದಾಗಿದೆ. ನಾವು ಫೈಬರ್ ಅನ್ನು ಪ್ರತಿಯೊಂದು ಮನೆಗೂ ಕೊಂಡೊಯ್ಯಲು ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ಸಶಕ್ತರಾಗಿಸಲು ಬಯಸುತ್ತೇವೆ ಎಂದಿದ್ದಾರೆ.

ಭಾರತವನ್ನು ವಿಶ್ವದ ಬ್ರಾಡ್‌ಬ್ಯಾಂಡ್ ನಾಯಕತ್ವ

ಭಾರತವನ್ನು ವಿಶ್ವದ ಬ್ರಾಡ್‌ಬ್ಯಾಂಡ್ ನಾಯಕತ್ವ

''ಜಿಯೋದೊಂದಿಗೆ ಭಾರತವನ್ನು ಮೊಬೈಲ್ ಸಂಪರ್ಕದಲ್ಲಿ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ದೇಶವನ್ನಾಗಿ ಮಾಡಿದ ನಂತರ, 1,600ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಿಗೆ ಬ್ರಾಡ್‌ಬ್ಯಾಂಡ್ ಒದಗಿಸುವ ಮೂಲಕ ಜಿಯೋಫೈಬರ್ ಭಾರತವನ್ನು ಜಾಗತಿಕ ಬ್ರಾಡ್‌ಬ್ಯಾಂಡ್ ನಾಯಕತ್ವಕ್ಕೆ ಕೊಂಡೊಯ್ಯಲಿದೆ. ಭಾರತವನ್ನು ವಿಶ್ವದ ಬ್ರಾಡ್‌ಬ್ಯಾಂಡ್ ನಾಯಕತ್ವದ ಸ್ಥಾನಕ್ಕೆ ಕೊಂಡೊಯ್ಯಲು ಜಿಯೋ ಫೈಬರ್ ಚಳವಳಿಗೆ ಸೇರುವಂತೆ ನಾನು ಎಲ್ಲರನ್ನೂ ಕೋರುತ್ತೇನೆ'' ಎಂದು ಆಕಾಶ್ ಹೇಳಿದ್ದಾರೆ.

ಷರತ್ತುಗಳಿಲ್ಲದ 30-ದಿನಗಳ ಉಚಿತ ಟ್ರಯಲ್

ಷರತ್ತುಗಳಿಲ್ಲದ 30-ದಿನಗಳ ಉಚಿತ ಟ್ರಯಲ್

ಈ ಯೋಜನೆಯಡಿ ಗ್ರಾಹಕರು 150 ಎಂಬಿಪಿಎಸ್ ನಿಜವಾದ ಅಪರಿಮಿತ ಅಂತರಜಾಲ, ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಟಾಪ್ 10 ಪೇಯ್ಡ್ ಒಟಿಟಿ ಅಪ್ಲಿಕೇಶನ್‌‌ಗಳಿಗೆ ಪ್ರವೇಶಾವಕಾಶವಿರುವ 4ಕೆ ಸೆಟ್ ಟಾಪ್ ಬಾಕ್ಸ್ ಹಾಗೂ ಉಚಿತ ವಾಯ್ಸ್ ಕಾಲಿಂಗ್ ಸೌಲಭ್ಯಗಳೊಂದಿಗೆ ಜಿಯೋ ಫೈಬರ್ ಅನ್ನು 30 ದಿನಗಳವರೆಗೆ ಪ್ರಯತ್ನಿಸಬಹುದಾಗಿದೆ.

ಜಿಯೋ ಫೈಬರ್ ಹೊಚ್ಚ ಹೊಸ ಆಫರ್, WFHಗೆ ಅನುಕೂಲ

ಸೇವೆ ಇಷ್ಟವಾಗದಿದ್ದರೆ ಈ ಸೌಲಭ್ಯಗಳನ್ನು ಹಿಂದಿರುಗಿಸಬಹುದಾಗಿದ್ದು, ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ. 30-ದಿನಗಳ ಈ ಉಚಿತ ಟ್ರಯಲ್ ಎಲ್ಲ ಹೊಸ ಗ್ರಾಹಕರಿಗೂ ಅನ್ವಯವಾಗುತ್ತದೆ.

ಜಿಯೋಫೈಬರ್ ಉತ್ಪನ್ನ ವೈಶಿಷ್ಟ್ಯ

ಜಿಯೋಫೈಬರ್ ಉತ್ಪನ್ನ ವೈಶಿಷ್ಟ್ಯ

1. ಅತಿವೇಗದ ಅಂತರಜಾಲ: ಮನೆಯ ಎಲ್ಲ ಸದಸ್ಯರಿಗೂ ಶಿಕ್ಷಣ, ವೃತ್ತಿ, ಆರೋಗ್ಯ ಮತ್ತು ಶಾಪಿಂಗ್ ಅನುಭವಗಳನ್ನು ನೀಡುವ ಸಂಪೂರ್ಣ ವಿಶ್ವಾಸಾರ್ಹ ಅಂತರಜಾಲ ಮತ್ತು ವೈಫೈ.

2. ಮನರಂಜನೆ: ಆನ್-ಡಿಮ್ಯಾಂಡ್ ವೀಡಿಯೊಗಳು, ಲೈವ್ ಟಿವಿ, ಚಲನಚಿತ್ರಗಳು ಮತ್ತು ಇನ್ನೂ ಹೆಚ್ಚಿನವುಗಳ ಜೊತೆಗೆ ಮನರಂಜನೆಯ ಅನುಭವವು ಹೊಸ ರೂಪ ಪಡೆದುಕೊಳ್ಳುತ್ತದೆ. ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ + ಹಾಟ್‌ಸ್ಟಾರ್ ಮುಂತಾದ ಟಾಪ್ 12 ಪೇಯ್ಡ್ ಓಟಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶಾವಕಾಶ ಪಡೆಯಿರಿ. ಟಿವಿಯಲ್ಲಿ ಯೂಟ್ಯೂಬ್‌ನಿಂದ ಹಿಡಿದು ನಿಮ್ಮ ನೆಚ್ಚಿನ ಹಳೆಯ ಟಿವಿ ಕಾರ್ಯಕ್ರಮಗಳ ಬಿಂಜ್ ವಾಚಿಂಗ್‌ವರೆಗೆ ಎಲ್ಲವೂ ಒಂದೇ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ - ಜಿಯೋಟಿವಿ ಪ್ಲಸ್.

3. ಕಂಟೆಂಟ್‌ನ ಸುಲಭ ಅನ್ವೇಷಣೆ: ಜಿಯೋ ರಿಮೋಟ್‌ನಲ್ಲಿ ವಾಯ್ಸ್ ಸರ್ಚ್‌ನೊಂದಿಗೆ ಕಂಟೆಂಟ್‌ನ ಅತಿದೊಡ್ಡ ಗ್ರಂಥಾಲಯದಲ್ಲಿ ಹುಡುಕಾಟ ಸುಲಭವಾಗಿದೆ.

4. ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಿ: ಉಚಿತ ಎಚ್‌ಡಿ ವಾಯ್ಸ್ ಕಾಲಿಂಗ್ ಮೂಲಕ ನಿಮ್ಮ ಸ್ನೇಹಿತರು, ಕುಟುಂಬ ಅಥವಾ ಕೆಲಸದ ಸ್ಥಳದೊಂದಿಗೆ ಸಂಪರ್ಕ ಸಾಧಿಸಿ ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಯಾರೊಂದಿಗಾದರೂ ವೀಡಿಯೊ ಕರೆಗಳು ಮತ್ತು ಕಾನ್ಫರೆನ್ಸ್‌ಗಳನ್ನು ಮಾಡಿ.

ಜಿಯೋಮೀಟ್ ಮತ್ತು ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್

ಜಿಯೋಮೀಟ್ ಮತ್ತು ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್

5. ಮನೆಯಿಂದ ಕೆಲಸ: ಜಿಯೋಮೀಟ್ ಮತ್ತು ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ, ಯಾವುದೇ ಮಿತಿಗಳಿಲ್ಲದೆ ಮನೆಯಿಂದ ಕೆಲಸ ಮಾಡಿ

6. ಮನೆಯಲ್ಲಿ ಆರೋಗ್ಯ: ಜಿಯೋಮೀಟ್ ಮತ್ತು ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಸಂಪರ್ಕವು ವೈದ್ಯರನ್ನು ದೂರದಿಂದಲೇ ಸಂಪರ್ಕಿಸಲು ಮತ್ತು ಪ್ರಮುಖ ರೋಗನಿರ್ಣಯವನ್ನು ಮಾಡಲು ನಿಮಗೆ ನೆರವಾಗುತ್ತದೆ

7. ಮನೆಯಲ್ಲಿ ಶಿಕ್ಷಣ: ಜಿಯೋಮೀಟ್ ಆಪ್ ಮತ್ತು ವಿಶ್ವಾಸಾರ್ಹ ಬ್ರಾಡ್‌ಬ್ಯಾಂಡ್ ಸಂಪರ್ಕದೊಂದಿಗೆ ಮನೆಯಲ್ಲಿ ಕಲಿಯುವುದನ್ನು ಆನಂದಿಸಿ

8. ಮನೆಯಲ್ಲಿ ಆಟಗಳು: ಆನಂದದಾಯಕ ಗೇಮಿಂಗ್ ಅನುಭವಕ್ಕಾಗಿ ಆಸಕ್ತಿದಾಯಕ ಗೇಮಿಂಗ್ ಆಯ್ಕೆಗಳನ್ನು ಜಿಯೋಗೇಮ್ಸ್ ಒದಗಿಸುತ್ತದೆ.

English summary
Reliance Jio launches new JioFiber broadband truly unlimited plans starting from Rs 399 And New Free Trail offer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X