'ಇನ್ಫಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದಿದ್ದು ವಿಷಾದದ ನಿರ್ಧಾರ'

Posted By:
Subscribe to Oneindia Kannada

ನವದೆಹಲಿ, ಜುಲೈ 17 : ಇನ್ಫೋಸಿಸ್ ನ ಅಧ್ಯಕ್ಷ ಸ್ಥಾನದಿಂದ 2014ರಲ್ಲಿ ಕೆಳಗೆ ಇಳಿಯುವಾಗ ಸಹ ಸಂಸ್ಥಾಪಕರ ಮಾತು ಕೇಳಬೇಕಾಗಿತ್ತು. ಅದು ನನ್ನ ಜೀವನದಲ್ಲಿ ಅತಿ ದೊಡ್ಡ ವಿಷಾದದ ನಿರ್ಧಾರ ಎಂದು ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ.

ಸಿಇಒ ವಿಶಾಲ್ ಸಿಕ್ಕಾ ನೇತೃತ್ವದಲ್ಲಿ ಇನ್ಫೋಸಿಸ್ ನ ಕಾರ್ಪೊರೇಟ್ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ನಾರಾಯಣ ಮೂರ್ತಿ, ಆದರೂ ಪ್ರತಿ ದಿನ ಇನ್ಫೋಸಿಸ್ ಕ್ಯಾಂಪ್ ನ ಪ್ರತಿ ದಿನ ಹೋಗಬೇಕು ಅಂತನ್ನಿಸುವುದಿಲ್ಲ ಎಂದಿದಿದ್ದಾರೆ.

ಇನ್ಫಿ ಸಿಒಒ ವೇತನ ಹೆಚ್ಚಳ ಪ್ರಮಾಣಕ್ಕೆ ನಾರಾಯಣ ಮೂರ್ತಿ ಅಸಮಾಧಾನ

ವೈಯಕ್ತಿಕ ಹಾಗೂ ಔದ್ಯೋಗಿಕ ಜೀವನದಲ್ಲೇ ಇನ್ಫೋಸಿಸ್ ನ ಅಧ್ಯಕ್ಷ ಸ್ಥಾನ ತ್ಯಜಿಸಿದ್ದು ತುಂಬ ವಿಷಾದಕರವಾದ ನಿರ್ಧಾರ ಎಂದು ನಾರಾಯಣಮೂರ್ತಿ ಹೇಳಿಕೊಂಡಿದ್ದು, ಆ ಸಂದರ್ಭದಲ್ಲಿ ಸಂಸ್ಥಾಪಕ ಸಹೋದ್ಯೋಗಿಗಳು ಇನ್ಫೋಸಿಸ್ ನಲ್ಲಿ ಇನ್ನಷ್ಟು ಮುಂದುವರಿಯುವಂತೆ ತಿಳಿಸಿದ್ದರು ಎಂದಿದ್ದಾರೆ.

NR Narayana Murthy

"ನಾನು ತುಂಬಾ ಭಾವನಾತ್ಮಕ ವ್ಯಕ್ತಿ. ನನ್ನ ಬಹಳ ನಿರ್ಧಾರಗಳು ಸಿದ್ಧಾಂತಗಳ ಆಧಾರದಲ್ಲಿ ತೆಗೆದುಕೊಂಡಂಥವು. ನಾನು ಅವರ ಮಾತನ್ನು ಕೇಳಬೇಕಾಗಿತ್ತು" ಎಂದು ಸಿಎನ್ ಬಿಸಿ ಟಿವಿ18ಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.

Geetha Mahadev Prasad

ನಾಸ್ಡಾಕ್ ನಲ್ಲಿ ಇನ್ ಫೋಸಿಸ್ ಷೇರುಗಳು ಲಿಸ್ಟಿಂಗ್ ಆಗಿದ್ದು ನನ್ನ್ ಜೀವನದಲ್ಲೇ ಅತಿ ದೊಡ್ಡ ಯಶಸ್ಸು ಎಂದು ಅವರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
I regret quitting as chairman of Infosys in 2014 and should have listened to other co-founders and stayed on, said by N R Narayana Murthy on Monday.
Please Wait while comments are loading...