• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಡಿಮೆ ದರದ ಫೋನ್: ಭಾರತದಲ್ಲಿ ರೆಡ್‌ಮಿ 9A ಮೊಬೈಲ್ ಬಿಡುಗಡೆ

|

ನವದೆಹಲಿ, ಸೆಪ್ಟೆಂಬರ್ 02: ಶಿಯೋಮಿ ಫೋನ್ ಜೂನ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಪಾದಾರ್ಪಣೆ ಮಾಡಿದ ನಂತರ ರೆಡ್‌ಮಿ 9 ಎ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ರೆಡ್ಮಿ 9 ಸರಣಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಇದು ದೇಶದ ರೆಡ್ಮಿ 9 ಮತ್ತು ರೆಡ್ಮಿ 9 ಪ್ರೈಮ್ ಅನ್ನು ಒಳಗೊಂಡಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ರೆಡ್ಮಿ 9 ಎ ಆರಂಭಿಕ ಬಜೆಟ್ ಬೆಲೆಯಲ್ಲಿ ಲಭ್ಯವಿದೆ. ಆಕ್ಟಾ-ಕೋರ್ ಪ್ರೊಸೆಸರ್, ದೊಡ್ಡ ಬ್ಯಾಟರಿ ಮತ್ತು ವಿಸ್ತರಿಸಬಹುದಾದ ಸ್ಟೋರೇಜ್ ವೈಶಿಷ್ಟ್ಯಗಳನ್ನು ನೀಡುತ್ತದೆ. ರೆಡ್ಮಿ 9 ಎ ಸಿಂಗಲ್ ರಿಯರ್ ಕ್ಯಾಮೆರಾ ಮತ್ತು ಮುಂಭಾಗದ ಸಿಂಗಲ್ ಸೆಲ್ಫಿ ಶೂಟರ್ ಹೊಂದಿದೆ. ಮೂರು ಬಣ್ಣಗಳ ಆಯ್ಕೆಯನ್ನು ಫೋನ್ ಹೊಂದಿದೆ.

ಭಾರತದಲ್ಲಿ ರೆಡ್‌ಮಿ 9 ಪ್ರೈಂ ಮೊಬೈಲ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

ಭಾರತದಲ್ಲಿ ರೆಡ್‌ಮಿ 9 ಎ ಬೆಲೆಯನ್ನು ಎರಡು ರೂಪಾಂತದಲ್ಲಿ ನೋಡಬಹುದು. 2 ಜಿಬಿ + 32 ಜಿಬಿ ಮೊಬೈಲ್‌ಗೆ 6,799 ರೂಪಾಯಿ ಮತ್ತು ಜಿಬಿ + 32 ಜಿಬಿ ರೂಪಾಂತರಕ್ಕೆ 7,499 ರೂ. ಆಗಿದೆ.

ಇನ್ನು ಮಿಡ್ನೈಟ್ ಬ್ಲ್ಯಾಕ್, ನೇಚರ್ ಗ್ರೀನ್ ಮತ್ತು ಸೀ ಬ್ಲೂ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಮೊಬೈಲ್ ನೀಡಲಾಗುವುದು. ಇದು ಸೆಪ್ಟೆಂಬರ್ 4 ರಂದು ಮಧ್ಯಾಹ್ನ 12 ರಿಂದ (ಮಧ್ಯಾಹ್ನ) ಮಿ.ಕಾಮ್, ಅಮೆಜಾನ್, ಮಿ ಹೋಮ್ ಮೂಲಕ ಮಾರಾಟವಾಗಲಿದೆ. ಇದು ಶೀಘ್ರದಲ್ಲೇ ಆಫ್‌ಲೈನ್ ಚಿಲ್ಲರೆ ಪಾಲುದಾರರಿಗೂ ತಲುಪಲಿದೆ.

ರೆಡ್ಮಿ 9A ವಿಶೇಷತೆ:

ಡಿಸ್‌ಪ್ಲೇ: 6.53 ಇಂಚಿನ ಡಿಸ್‌ಪ್ಲೇ

ಪ್ರೊಸೆಸರ್: Mediatek Helio G25

RAM: 2GB

ಸ್ಟೋರೇಜ್: 32 GB

ಹಿಂಬದಿ ಕ್ಯಾಮರಾ: 13 ಮೆಗಾಪಿಕ್ಸೆಲ್

ಸೆಲ್ಫಿ ಕ್ಯಾಮರಾ: 5 ಮೆಗಾಪಿಕ್ಸೆಲ್

ಬ್ಯಾಟರಿ: 5000mAh

ಓಎಸ್: Android 10

English summary
Redmi 9A has been launched in India after the Xiaomi phone made its global debut back in June. It is another addition to the Redmi 9 series
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X