ರಾಕೇಶ್ ಜುಂಜುನ್ವಾಲಾ ವಿಮಾನಯಾನ ಸಂಸ್ಥೆಗೆ ಕೇಂದ್ರದ ಒಪ್ಪಿಗೆ

ನವದೆಹಲಿ, ಅಕ್ಟೋಬರ್ 11; ಬಹುಕೋಟಿ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ವಿಮಾನಯಾನ ಸಂಸ್ಥೆಗೆ ಕೇಂದ್ರದ ಹಸಿರು ನಿಶಾನೆ ಸಿಕ್ಕಿದೆ. ಕಡಿಮೆ ಬೆಲೆಯಲ್ಲಿ ವಿಮಾನ ಸೇವೆಯನ್ನು ಒದಗಿಸುವ ಉದ್ದೇಶದಿಂದ ವಿಮಾನಯಾನ ಸಂಸ್ಥೆ ಆರಂಭಿಸಲಾಗುತ್ತಿದೆ.

ಸೋಮವಾರ ವಿಮಾನಯಾನ ಸಚಿವಾಲಯ ರಾಕೇಶ್ ಜುಂಜುನ್ವಾಲಾ ವಿಮಾನಯಾನ ಸಂಸ್ಥೆ ಆರಂಭಿಸಲು ಒಪ್ಪಿಗೆ ನೀಡಿದೆ. ಆಕಾಶ ಏರ್‌ಲೈನ್ಸ್ ಹೆಸರಿನಲ್ಲಿ ರಾಕೇಶ್ ಜುಂಜುನ್ವಾಲಾ ಸ್ಟಾರ್ಟ್ ಅಪ್ ಆರಂಭಿಸಲಿದ್ದು, ಮುಂದಿನ ವರ್ಷ ಸಂಸ್ಥೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ವಿಮಾನಯಾನ ಸಚಿವಾಲಯ ರಾಕೇಶ್ ಜುಂಜುನ್ವಾಲಾಗೆ ವಿಮಾನಯಾನ ಸಂಸ್ಥೆ ಆರಂಭಿಸಲು ಸೋಮವಾರ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿದೆ. ಈಗ ಅವರು ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪಡೆಯುವುದು ಬಾಕಿ ಇದೆ.

 Rakesh Jhunjhunwala AKASA Airline Gets NOC

ಕೆಲವು ದಿನಗಳ ಹಿಂದೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಕೇಶ್ ಜುಂಜುನ್ವಾಲಾ ವಿಮಾನಯಾನ ಸಂಸ್ಥೆ ಆರಂಭಿಸುವ ಕನಸು ಬಿಚ್ಚಿಟ್ಟಿದ್ದರು. ಹೊಸ ಸಂಸ್ಥೆ ಮುಂದಿನ 4 ವರ್ಷಗಳಲ್ಲಿ 70 ವಿಮಾನಗಳನ್ನು ಹೊಂದಲು ಉದ್ದೇಶಿಸಿದೆ.

ಹೊಸ ವಿಮಾನಯಾನ ಸಂಸ್ಥೆಯಲ್ಲಿ ಸುಮಾರು 260 ಕೋಟಿ ರೂ. ಹೂಡಿಕೆ ಮಾಡುವ ಉದ್ದೇಶವನ್ನು ರಾಕೇಶ್ ಜುಂಜುನ್ವಾಲಾ ಹೊಂದಿದ್ದಾರೆ. ಕೋವಿಡ್ ಪರಿಸ್ಥಿತಿ ಬಳಿಕ ವಿಮಾನಯಾನ ಕ್ಷೇತ್ರ ನಷ್ಟದಲ್ಲಿದೆ. ಇಂತಹ ಸಂದರ್ಭದಲ್ಲಿ ರಾಕೇಶ್ ಜುಂಜುನ್ವಾಲಾ ಮಾರುಕಟ್ಟೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಕೇಶ್ ಜುಂಜುನ್ವಾಲಾ ಭೇಟಿಯಾಗಿದ್ದರು. ಇಬ್ಬರ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಬ್ಬರು ನಾಯಕರ ಭೇಟಿಗಿಂತ ರಾಕೇಶ್ ಹಾಕಿದ್ದ ಶರ್ಟ್ ಬಗ್ಗೆ ಭಾರೀ ಚರ್ಚೆ ನಡೆದಿತ್ತು.

ಮೋದಿ ಭೇಟಿ ಸಂದರ್ಭದಲ್ಲಿ ರಾಕೇಶ್ ಜುಂಜುನ್ವಾಲಾ ಬಿಳಿ ಬಣ್ಣದ ಫುಲ್ ಶರ್ಟ್ ಧರಿಸಿದ್ದರು. ಆದರೆ ಶರ್ಟ್‌ಗೆ ಇಸ್ತ್ರಿ ಹಾಕಿಲ್ಲ ಎಂಬುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿತ್ತು. ಅಂದಹಾಗೆ ಜೆಟ್ ಏರ್ ವೇಸ್ ಮಾಜಿ ಸಿಇಒ ವಿನಯ್ ದುಬೆ ಆಕಾಶ ಏರ್‌ಲೈನ್ಸ್ ಸಿಇಒ ಆಗಿದ್ದಾರೆ.

"ಕೆಲವು ವಿಮಾನಯಾನ ಸಂಸ್ಥೆಗಳು ಚೇತರಿಸಿಕೊಳ್ಳದಿರಬಹುದು. ನನ್ನ ಪಾಲುದಾರರಾಗಿ ಅತ್ಯುತ್ತಮ ವಿಮಾನಯಾನದ ಜನರನ್ನು ನಾನು ಪಡೆದುಕೊಳ್ಳುತ್ತೇನೆ ಎಂಬ ಭರವಸೆ ನನಗಿದೆ" ಎಂದು ರಾಕೇಶ್ ಜುಂಜುನ್ವಾಲಾ ಕೆಲವು ದಿನಗಳ ಹಿಂದೆ ಹೇಳಿದ್ದರು.

ಆಕಾಶ ಏರ್‌ಲೈನ್ಸ್ ಹೆಸರಿನಲ್ಲಿ ರಾಕೇಶ್ ಜುಂಜುನ್ವಾಲಾ ಸ್ಟಾರ್ಟ್‌ ಅಪ್ ಆರಂಭಿಸಲಿದ್ದು ಶೇ 40ರಷ್ಟು ಷೇರುಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲಿದ್ದಾರೆ. ಮುಂದಿನ ವರ್ಷ ಆಕಾಶ ಏರ್‌ಲೈನ್ಸ್ ವಿಮಾನ ಹಾರಾಟವನ್ನು ಆರಂಭಿಸುವ ನಿರೀಕ್ಷೆ ಇದೆ.

ಬಹುಕೋಟಿ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ನಿವ್ವಳ ಆಸ್ತಿ ಸುಮಾರು 34,250 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಫೋರ್ಬ್ಸ್‌ ಪಟ್ಟಿ ಹೇಳಿದೆ.

ಅತಿ ದೊಡ್ಡ ಹೂಡಿಕೆದಾರ; ರಾಕೇಶ್ ಜುಂಜುನ್ವಾಲಾ ಭಾರತದ ಷೇರು ಮಾರುಕಟ್ಟೆಯ ಅತಿದೊಡ್ಡ ಹೂಡಿಕೆದಾರ. ಭಾರತದ ವಾರೆನ್ ಬಫೆಟ್ ಎಂದು ಇವರನ್ನು ಕರೆಯಲಾಗುತ್ತದೆ. ಚಾರ್ಟೆಡ್ ಅಕೌಂಟೆಂಟ್ ಸಹ ಆಗಿರುವ ರಾಕೇಶ್ ಜುಂಜುನ್ವಾಲಾ ಪತ್ನಿ ರೇಖಾ ಹೆಸರಿನಲ್ಲಿ ಹೂಡಿಕೆ ಮಾಡುತ್ತಾರೆ.

ಆರ್ಥಿಕ, ತಂತ್ರಜ್ಞಾನ, ರಿಟೇಲ್, ಫಾರ್ಮಾ ಕ್ಷೇತ್ರದಲ್ಲಿ ರಾಕೇಶ್ ಜುಂಜುನ್ವಾಲಾ ಹೆಚ್ಚಿನ ಹೂಡಿಕೆ ಮಾಡುತ್ತಾರೆ. ಷೇರು ಮಾರುಕಟ್ಟೆಯ ಇಂಚಿಂಚು ಮಾಹಿತಿ ತಿಳಿದಿರುವ ಇವರಹೂಡಿಕೆಗಳ ಮೌಲ್ಯ ಸುಮಾರು 24 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ.

ಕಳೆದ ಗುರುವಾರ ಟಾಟಾ ಮೋಟಾರ್ಸ್, ಟೈಟಾನ್ ಕಂಪನಿಗಳ ವಹಿವಾಟು ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಈ ಎರಡೂ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿದ್ದ ರಾಕೇಶ್ ಜುಂಜುನ್ವಾಲಾ ಒಂದೇ ದಿನದಲ್ಲಿ ಅಪಾರ ಲಾಭವನ್ನು ಗಳಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+