RBIನಲ್ಲಿ ರಾಕ್ ಸ್ಟಾರ್ ರಘುರಾಂ ರಾಜನ್ ಶಕೆ ಮುಕ್ತಾಯ: ಟಾಪ್ 10ಹೇಳಿಕೆಗಳು

Written By:
Subscribe to Oneindia Kannada

ನವದೆಹಲಿ, ಸೆ 5: ತನ್ನ ನೇರ ಮತ್ತು ದಿಟ್ಟ ಅಭಿಪ್ರಾಯಗಳಿಗೆ ಹೆಸರಾಗಿರುವ ರಿಸರ್ವ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ರಘುರಾಂ ರಾಜನ್ ಅವರಿಗೆ ಕಚೇರಿಯಲ್ಲಿ ಭಾನುವಾರ (ಸೆ 4) ಕೊನೆಯ ವರ್ಕಿಂಗ್ ಡೇ.

ಜಾಗತಿಕ ಆರ್ಥಿಕ ಮುಗ್ಗಟ್ಟಿನ ಮಧ್ಯೆ, ಮೂರು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿಕೊಂಡ ರಘುರಾಂ ರಾಜನ್, ದೇಶದ ಹಣದುಬ್ಬರದ ವಿಚಾರದಲ್ಲಿ ತೆಗೆದುಕೊಂಡ ಕೆಲವೊಂದು ಕಠಿಣ ನಿರ್ಧಾರಗಳು ವ್ಯಾಪಕ ಚರ್ಚೆಗೊಳಗಾಗಿದ್ದವು. (ಆರ್ಬಿಐ ಗವರ್ನರ್ ಆಗಿ ಊರ್ಜಿತ್ ಪಟೇಲ್)

ರಿಸರ್ವ್ ಬ್ಯಾಂಕಿನ್ ಇದುವರೆಗಿನ ಇತಿಹಾಸದಲ್ಲೇ ಅತ್ಯಂತ ಚರ್ಚಿತ ಗವರ್ನರ್ ಆಗಿರುವ ರಘುರಾಂ ರಾಜನ್ ಅವರನ್ನು ಬ್ಯಾಂಕಿನ ಸಹದ್ಯೋಗಿಗಳು, ಕಲರ್ ಫುಲ್ ಆಗಿ ಭಾನುವಾರ ಬೀಳ್ಕೊಟ್ಟಿದ್ದಾರೆ. ಆರ್ಬಿಐನ ನೂತನ ಗವರ್ನರ್ ಆಗಿ ಊರ್ಜಿತ್ ಪಟೇಲ್ ಅಧಿಕಾರ ಸ್ವೀಕರಿಸಲಿದ್ದಾರೆ.

'ಸುಸ್ವಾಗತಂ, ಕಭೀ ಅಲ್ವಿದಾ ನಕೆಹ್ನಾ' ಮುಂತಾದ ಬರಹಗಳನ್ನೊಳಗೊಂಡ ರಂಗೋಲಿಗಳು ರಿಸರ್ವ್ ಬ್ಯಾಂಕ್ ಕಚೇರಿಯಲ್ಲಿ ರಘುರಾಂ ರಾಜನ್ ಅವರನ್ನು ಸ್ವಾಗತಿಸುತ್ತಿದ್ದವು.

ತಮಿಳು ಮೂಲದ ರಘುರಾಂ ರಾಜನ್, ಮಧ್ಯಪ್ರದೇಶದ ಭೋಪಾಲ್ ನಲ್ಲಿ 03.02.1963ರಲ್ಲಿ ಜನಿಸಿದ್ದರು. ಚಿಕಾಗೋ ವಿಶ್ವ ವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ, ವಿಶ್ವ ಬ್ಯಾಂಕಿನಲ್ಲೂ ಕೆಲಸ ಮಾಡಿರುವ ರಘುರಾಂ ರಾಜನ್, ಸೆಪ್ಟಂಬರ್ 04, 2013ರಂದು ಆರ್ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದರು.

ನನ್ನ ಅವಧಿ ಮುಗಿದ ನಂತರ ನನಗೆ ಅಚ್ಚುಮೆಚ್ಚಿನ ಶೈಕ್ಷಣಿಕ ಕ್ಷೇತ್ರಕ್ಕೆ ಮರಳುತ್ತೇನೆ. ಅಮೆರಿಕಾದ ಚಿಕಾಗೋ ವಿವಿಯಲ್ಲಿ ಪ್ರೊಫೆಸರ್ ಆಗಿ ಮುಂದುವರಿಯಲಿದ್ದೇನೆಂದು ತನ್ನ ಸಹೋದ್ಯೋಗಿಗಳಿಗೆ ಬರೆದಿರುವ ವಿದಾಯ ಪತ್ರದ ಮೂಲಕ ರಘುರಾಂ ರಾಜನ್ ತಿಳಿಸಿದ್ದರು.

ಬ್ಯಾಂಕ್ ವಲಯದಲ್ಲಿ 'ರಾಕ್ ಸ್ಟಾರ್' ಎಂದೇ ಹೆಸರಾಗಿರುವ ರಘುರಾಂ ರಾಜನ್ ಅವರ ಟಾಪ್ ಟೆನ್ ಹೇಳಿಕೆಗಳು, ಸ್ಲೈಡಿನಲ್ಲಿ (ಮಾಹಿತಿ : ಟೈಮ್ಸ್ ಆಫ್ ಇಂಡಿಯಾ)

1. ನನ್ನ ಹೆಸರು ರಘುರಾಂ ರಾಜನ್

1. ನನ್ನ ಹೆಸರು ರಘುರಾಂ ರಾಜನ್

ನನ್ನ ಹೆಸರು ರಘುರಾಂ ರಾಜನ್ , ನಾನು ಏನು ಮಾಡಬೇಕೆಂದು ಇದ್ದೀನೋ, ಅದನ್ನೇ ಮಾಡೋದು.

2. ಹದ್ದುಗಳೂ ಅಲ್ಲ ಪಾರಿವಾಳವೂ ಅಲ್ಲ

2. ಹದ್ದುಗಳೂ ಅಲ್ಲ ಪಾರಿವಾಳವೂ ಅಲ್ಲ

ನಾವು ಹದ್ದುಗಳೂ ಅಲ್ಲ ಪಾರಿವಾಳವೂ ಅಲ್ಲ, ನಾವು ಗೂಬೆಗಳು. ಜಾಣತನಕ್ಕೆ ಇರುವ ಹೆಸರು ಗೂಬೆ. ಬೇರೆಯವರು ವಿಶ್ರಾಂತಿ ಯಾವಾಗ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ನಾವು ನೋಡುತ್ತಿರುತ್ತೇವೆ. ನಮ್ಮನ್ನು ಬಕೆಟ್ ನಲ್ಲಿ ದೂಡಲು ನೋಡಬೇಡಿ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಏನು ಸಾಧ್ಯವೋ ಅದನ್ನು ಮಾಡುತ್ತಿದ್ದೇವೆ.

3. ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೇ ಅಧಿಪತಿ

3. ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೇ ಅಧಿಪತಿ

ನಾವಿನ್ನೂ ಸಂಪೂರ್ಣ ತೃಪ್ತಿದಾಯಕವಾಗಿಲ್ಲ. ಕುರುಡರ ಸಾಮ್ರಾಜ್ಯದಲ್ಲಿ ಒಕ್ಕಣ್ಣನೇ ಅಧಿಪತಿ ಎನ್ನುವ ಮಾತಿನಂತೆ ನಮ್ಮ ಪರಿಸ್ಥಿತಿ ಕೂಡಾ.

4. ತಾಜಾ ಬ್ರೆಡ್

4. ತಾಜಾ ಬ್ರೆಡ್

ನಾವು ಪ್ರತೀ ದಿನ ಬೆಳಗ್ಗೆ ತಾಜಾ ಬ್ರೆಡ್ ತಿನ್ನುವುದು ಬ್ರೆಡ್ ತಯಾರಕನ ಪರೋಪಕಾರಿ ಗುಣದಿಂದ ಎನ್ನುವುದಕ್ಕಿಂತ ಆತನಿಗೆ ಹಣ ಮಾಡುವ ಉದ್ದೇಶ ಎನ್ನುವುದು ಸೂಕ್ತ.

5. ವೋಟ್ ಪಡೆಯುವುದಕ್ಕಾಗಲಿ, ಫೇಸ್ ಬುಕ್ ನಲ್ಲಿ ಲೈಕ್ ಪಡೆಯುವುದಕ್ಕಾಗಲಿ ಅಲ್ಲ

5. ವೋಟ್ ಪಡೆಯುವುದಕ್ಕಾಗಲಿ, ಫೇಸ್ ಬುಕ್ ನಲ್ಲಿ ಲೈಕ್ ಪಡೆಯುವುದಕ್ಕಾಗಲಿ ಅಲ್ಲ

ಬ್ಯಾಂಕಿನಲ್ಲಿ ಉತ್ತಮ ಆಡಳಿತ ನಡೆಸುವುದು ವೋಟ್ ಪಡೆಯುವುದಕ್ಕಾಗಲಿ ಅಥವಾ ಫೇಸ್ ಬುಕ್ ನಲ್ಲಿ ಲೈಕ್ ಪಡೆಯುವುದಕ್ಕಾಗಲಿ ಅಲ್ಲ. ಆದರೆ, ಸರಿಯಾದ ದಿಕ್ಕಿನಲ್ಲಿ ಕೆಲಸ ಸಾಗಬೇಕಾಗಿದೆ. ಅದಕ್ಕಾಗಿ ಎಷ್ಟು ಟೀಕೆಗಳು ಬಂದರೂ ಎದುರಿಸುತ್ತೇವೆ. ಟೀಕೆಯಿಂದಲೂ ಕಲಿಯುವುದು ಇರುತ್ತದೆ.

6. ಮಾಧ್ಯಮದವರ ಸಂತೋಷ

6. ಮಾಧ್ಯಮದವರ ಸಂತೋಷ

ನನ್ನ ಕಚೇರಿಯಲ್ಲಿ ಮಾಧ್ಯಮದವರು ಸಂತೋಷದಲ್ಲಿದ್ದಾಗ ಅದಕ್ಕೆ ಅಡಚಣೆ ಮಾಡಿದರೆ ನಾನು ಕ್ರೂರಿಯಾಗುತ್ತೇನೆ.

7. ನಾನು ಸೂಪರ್ ಮ್ಯಾನ್ ಅಲ್ಲ

7. ನಾನು ಸೂಪರ್ ಮ್ಯಾನ್ ಅಲ್ಲ

ನನ್ನ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಡಲಾಗಿದೆ, ನಾನು ಸೂಪರ್ ಮ್ಯಾನ್ ಅಲ್ಲ. ಭಾರತೀಯರ ಯೋಗ ಕ್ಷೇಮ ಕಾಪಾಡಲು ಏನು ಮಾಡಬೇಕೋ, ಅದರ ಸ್ವಲ್ಪ ಅನುಭವವಿದೆ.

8. ಜೇಮ್ಸ್ ಬಾಂಡ್

8. ಜೇಮ್ಸ್ ಬಾಂಡ್

ನಾನು ಜೇಮ್ಸ್ ಬಾಂಡ್ ಇಮೇಜ್ ಇಷ್ಟ ಪಡುವುದಿಲ್ಲ. ಆದರೆ ಬ್ಯಾಂಕರ್ ಏನು ಮಾಡಬೇಕೋ ಅದರ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ.

9. ರಿಸ್ಕ್ ಮ್ಯಾನೇಜ್ಮೆಂಟ್

9. ರಿಸ್ಕ್ ಮ್ಯಾನೇಜ್ಮೆಂಟ್

ಆವಾಗವಾಗ ರಿಸ್ಕ್ ತೆಗೆದುಕೊಳ್ಳದೇ ಇರುವುದೇ ರಿಸ್ಕ್ ಮ್ಯಾನೇಜ್ಮೆಂಟ್ ಪದದ ಅರ್ಥ.

10. ಕಠಿಣ ಮನುಷ್ಯ

10. ಕಠಿಣ ಮನುಷ್ಯ

ನಾನು ಕಠಿಣ ಮನುಷ್ಯನೂ ಅಲ್ಲ, ನಿರಾಶೆಯ ವ್ಯಕ್ತಿಯೂ ಅಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Raghuram Rajan's tenure as RBI governor came to end on Sunday (Sep 4). His three-year tenure was marked by several bold and sharp comments, some of which even led to controversies. Here are Rajan's top ten quotes.
Please Wait while comments are loading...