ಬ್ಯಾಂಕ್ ಆಫ್ ಬರೋಡಾ ವಿರುದ್ಧ ಪೊಲೀಸ್ ತನಿಖೆ ಚುರುಕು
ಮುಂಬೈ, ಅ.12: ಬ್ಯಾಂಕ್ ಆಫ್ ಬರೋಡಾ ಮೂಲಕ ಕಪ್ಪು ಹಣ ರವಾನೆ ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಸಿಬಿಐ ತಂಡ ಬ್ಯಾಂಕ್ ಶಾಖೆಗಳ ಮೇಲೆ ಭಾನುವಾರ ದಾಳಿ ನಡೆಸಿದರೂ ಬ್ಯಾಂಕಿಗೆ ನಷ್ಟ ಸಂಭವಿಸುವುದಿಲ್ಲ ಎಂದು ಬ್ಯಾಂಕ್ ಪ್ರಕಟಿಸಿದೆ. ಈ ನಡುವೆ ಇಬ್ಬರು ಹಿರಿಯ ಅಧಿಕಾರಿಗಳನ್ನು ವಜಾ ಮಾಡಲಾಗಿದೆ.
ಸಿಬಿಐ ತಂಡ ಭಾನುವಾರದಂದು ಅಶೋಕ್ ವಿಹಾರ್ ಶಾಖೆಯಲ್ಲಿ ಕೆಲ ಕಂಪನಿಗಳು ಹೊಸದಾಗಿ ತೆರೆದಿರುವ 60 ಖಾತೆಗಳ ಮೂಲಕ ಹಣ ವರ್ಗಾವಣೆಯಾಗಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು.[ಬ್ಯಾಂಕ್ ಆಫ್ ಬರೋಡಾದ ಮೇಲೆ ಸಿಬಿಐ ದಾಳಿ]
ಬ್ಯಾಂಕ್ ಆಫ್ ಬರೋಡಾದಿಂದ 6,100 ಕೋಟಿ ರೂ. ಮೊತ್ತದ ಕಪ್ಪುಹಣ ಹಾಂಕ್ ಕಾಂಗ್ ಗೆ ಹರಿದು ಹೋಗಿರುವ ದಾಖಲೆ ಸಿಕ್ಕಿತ್ತು. ಇದಾದ ಬಳಿಕ ದೆಹಲಿ ಶಾಖೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ವಜಾಗೊಳಿಸಿರುವುದಾಗಿ ಬ್ಯಾಂಕ್ ಆಫ್ ಬರೋಡಾ ಪ್ರಕಟಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಆಫ್ ಬರೋಡಾದ ಕಾರ್ಯಕಾರಿ ನಿರ್ದೇಶಕ ಬಿ.ಬಿ ಜೋಶಿ, ಭಾರತದ ಅತಿದೊಡ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಒಂದೆನಿಸಿರುವ ಬ್ಯಾಂಕ್ ಆಫ್ ಬರೋಡಾ ಈ ದಾಳಿಯಿಂದ ವಿಚಳಿತವಾಗಿಲ್ಲ. ಪೊಲೀಸರು ಅನುಮಾನ ವ್ಯಕ್ತವಾಗಿರುವ 59 ಖಾತೆ ಹಾಗೂ ಅದರ ವಿವರಗಳನ್ನು ಪಡೆದುಕೊಂಡಿದ್ದಾರೆ.
ಆಮದು ಪಡೆದುಕೊಂಡಿದ್ದಕ್ಕೆ ಶುಲ್ಕದ ಮೂಲಕ ಹಣವನ್ನು ಹಾಂಗ್ ಕಾಂಗಿನ 50 ಕಂಪನಿಗಳಿಗೆ ರವಾನೆ ಮಾಡಿರುವ ಸುದ್ದಿ ಸಿಕ್ಕಿದೆ.ಕಂಪನಿಗಳ ವಿವರ ಇನ್ನೂ ಬಹಿರಂಗಗೊಂಡಿಲ್ಲ
ಬ್ಯಾಂಕ್ ಷೇರು ಕುಸಿತ: ಬಿಎಸ್ ಇಯಲ್ಲಿ ಸೋಮವಾರದಂದು ಬ್ಯಾಂಕ್ ಆಫ್ ಬರೋಡಾ ಷೇರುಗಳು ಮಧ್ಯಾಹ್ನ 2.35ರ ಸುಮಾರಿಗೆ 176.90 ರು ನಂತೆ 5.40 ರು ಕಳೆದುಕೊಂಡು ಶೇ 2.96ರಷ್ಟು ಇಳಿಮುಖವಾಗಿದೆ. ಇದೇ ಸಮಯಕ್ಕೆ ಎನ್ ಎಸ್ ಇನಲ್ಲಿ 176.65 ರು ನಂತೆ ಶೇ 2.99ರು ನಷ್ಟು ಇಳಿಕೆಯಾಗಿ 5.45 ರು ಕಳೆದುಕೊಂಡಿದೆ.












Click it and Unblock the Notifications