ನೀರವ್ ಮೋದಿಗೆ ಸೇರಿದ ಸಾವಿರಾರು ಕೋಟಿಯಲ್ಲಿ ನೂರಾರು ಕೋಟಿ ಜಪ್ತಿ
ಹಾಂಗ್ ಕಾಂಗ್, ಅಕ್ಟೋಬರ್ 26: ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಬಹುಕೋಟಿ ಹಗರಣದ ರೂವಾರಿ, ವಜ್ರ ವ್ಯಾಪಾರಿ ನೀರವ್ ಮೋದಿ ವಿವಿಧೆಡೆ ಕೂಡಿಟ್ಟಿರುವ ಆಸ್ತಿಯನ್ನು ಕರಗಿಸುವ ಕಾರ್ಯದಲ್ಲಿ ಭಾರತದ ತನಿಖಾ ಸಂಸ್ಥೆಗಳು ನಿರತವಾಗಿವೆ.
ಸರಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ನಲ್ಲಿ 13,400 ಕೋಟಿ ರೂಪಾಯಿ. ಸಾಲ ಬಾಕಿ ಹೊತ್ತುಕೊಂಡು ವಿದೇಶಕ್ಕೆ ಪರಾರಿಯಾಗಿರುವ ಮೋದಿ ವಿರುದ್ಧ ಭಾರತದ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ಕೂಡಾ ಜಾರಿಯಾಗಿದೆ.
ನೀರವ್ ಮೋದಿ ಇಂಗ್ಲೆಂಡ್ ನಲ್ಲೇ ಇದ್ದಾರೆಂಬ ಮಾಹಿತಿ ಇತ್ತೀಚೆಗೆ ಲಭ್ಯವಾಗಿದ್ದು, ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಭಾರತ ಸರ್ಕಾರ ಇಂಗ್ಲೆಂಡ್ ಸರ್ಕಾರದ ಬಳಿ ಮನವಿ ಮಾಡಿಕೊಂಡಿದೆ.
ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಆಭರಣ ಉದ್ಯಮಿ ನೀರವ್ ಮೋದಿ ವಿರುದ್ಧ ಹಾಂಕಾಂಗ್ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಈಗ 255 ಕೋಟಿ ರು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯವು ಮುಂದಾಗಿದೆ.
ಅಕ್ರಮ ಹಣಕಾಸು ಚಟುವಟಿಕೆ ತಡೆ ಕಾಯ್ದೆ(PMLA) ಅನ್ವಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಸಿಗುತ್ತಿದ್ದಂತೆ, ಫೆಬ್ರವರಿ ತಿಂಗಳಿನಲ್ಲಿ 'ನೀರವ್ ಮೋದಿ ಮತ್ತು ಅವರ ಒಡೆತನದ ಕಂಪೆನಿಗೆ ಸೇರಿದ, 523.72 ಕೋಟಿ ರು ಮೌಲ್ಯದ 21 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದೆ
ನೀರವ್ ಮೋದಿಗೆ ಸೇರಿದ ಸುಮಾರು 637 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿಗೊಳಿಸಿದ್ದು, ಭಾರತ ಮಾತ್ರವಲ್ಲದೆ 5 ದೇಶಗಳಲ್ಲಿರುವ ನೀರವ್ ಮೋದಿ ಅವರ ಆಸ್ತಿಯನ್ನು ED ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇನ್ನೊಮ್ಮೆ ನೀರವ್ ಮೋದಿ ಅವರಿಗೆ ಸೇರಿದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದ್ದು, ಖಾತೆಯಲ್ಲಿದ್ದ ಒಟ್ಟು 278 ಕೋಟಿ ರೂ. ಮತ್ತು ಸುಮಾರು 22.69 ಕೋಟಿ ಮೌಲ್ಯದ ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದೆ.

ನೀರವ್ ವಿರುದ್ಧ ಹಾಂಕಾಂಗ್ ನಲ್ಲಿ ದಾವೆ
ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಆಭರಣ ಉದ್ಯಮಿ ನೀರವ್ ಮೋದಿ ವಿರುದ್ಧ ಹಾಂಕಾಂಗ್ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಮೋದಿ ಅವರಿಗೆ ಸೇರಿರುವ ಎರಡು ಕಂಪೆನಿಗಳು ಬ್ಯಾಂಕಿಗೆ ಸುಮಾರು 5.49 ಮಿಲಿಯನ್ ಡಾಲರ್(ಸುಮಾರು 40 ಕೋಟಿ.ರೂ.)ಸಾಲವನ್ನು ಮರು ಪಾವತಿಸಿಲ್ಲ ಎಂದು ಆರೋಪಿಸಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಹಾಂಕಾಂಗ್ ನಲ್ಲಿ ದಾವೆ ಹೂಡಿದೆ.

ಅವ್ಯವಹಾರದ ಪ್ರಮುಖ ಆರೋಪಿ
ಮುಂಬೈ ಮೂಲದ ಉದ್ಯಮಿ ನೀರವ್ ಮೋದಿ ಅವರು ಭಾರತದ ಅತಿದೊಡ್ಡ ಹಣಕಾಸು ಅವ್ಯವಹಾರದ ಪ್ರಮುಖ ಆರೋಪಿಯಾಗಿದ್ದಾರೆ. 2011ರ ಅಕ್ಟೋಬರ್ 21ರಂದು ಫೈರ್‌ಸ್ಟೋನ್ ಟ್ರೇಡಿಂಗ್ ಪ್ರೈವೇಟ್ ಹಾಗೂ 2011ರ ನವೆಂಬರ್‌ನಲ್ಲಿ ಫೈರ್‌ಸ್ಟಾರ್ ಡೈಮಂಡ್ ಕಂಪೆನಿಗಳು ಪಡೆದಿರುವ ಸಾಲಗಳಿಗೆ ಗ್ಯಾರಂಟಿ ನೀಡಿದ್ದರು ಎಂದು ಹೈಕೋರ್ಟಿಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಯೂನಿಯನ್ ಬ್ಯಾಂಕ್ ತಿಳಿಸಿದೆ. ಈ ಬಗ್ಗೆ 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್'ವರದಿ ಮಾಡಿದೆ

4,299 ಕೋಟಿ ರು ಪಿಎನ್ ಬಿ ಹಗರಣದಿಂದಲೇ ಸಿಕ್ಕಿದೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಿತರಿಸಿದ ಸಾಲ ಮರುಪಾವತಿ ಖಾತರಿ ಪತ್ರದ (ಎಲ್ಒಯು) ನಕಲಿಗಳನ್ನು ಬಳಸಿಕೊಂಡು ನೀರವ್ ಮೋದಿ 6,939.84 ಕೋಟಿ ಮೊತ್ತದಲ್ಲಿ 4,299 ಕೋಟಿ ರು ಮೊತ್ತವನ್ನು ತನಗೆ, ತನ್ನ ಸಂಸ್ಥೆಗಳು ಮತ್ತು ಸಂಬಂಧಿಕರಿಗೆ ವರ್ಗಾಯಿಸಿದ್ದಾರೆ ಎಂಬುದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪತ್ತೆಹಚ್ಚಿದೆ.
ನೀರವ್, 1811 ಕೋಟಿ ರೂ. ಹಣವನ್ನು ಯುಎಇಯಲ್ಲಿರುವ ಒಂಬತ್ತು ನಕಲಿ ಕಂಪೆನಿಗಳ ಮೂಲಕ ತಮ್ಮ ಸಮೂಹ ಸಂಸ್ಥೆಗಳು, ಸಹೋದರಿ ಪೂರ್ವಿ ಮೋದಿ ಮತ್ತು ಆಕೆಯ ಪತಿ ಮಯಾಂಕ್ ಮೆಹ್ತಾ ಅವರಿಗೆ ವರ್ಗಾಯಿಸಿದ್ದಾರೆ.

ಭಾರತದಲ್ಲಿನ ತನ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ
ಕನಿಷ್ಠ 137 ಕೋಟಿ ಮೊತ್ತವನ್ನು ಭಾರತದಲ್ಲಿನ ತನ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದಾರೆ. 1,811 ಕೋಟಿಯಲ್ಲಿ 786 ಕೋಟಿಯನ್ನು ಪೂರ್ವಿ ಮತ್ತು ಮಯಾಂಕ್ ಅವರಿಗೆ, 341 ಕೋಟಿ ರೂ ಹಣವನ್ನು ಪೂರ್ವಿ ಮೋದಿ ನಡೆಸುತ್ತಿರುವ ಲಿಲ್ಲಿ ಮೌಂಟೇನ್ ಇನ್ವೆಸ್ಟ್‌ಮೆಂಟ್ ಕಂಪೆನಿಗೆ, 439 ಕೋಟಿ ಮೊತ್ತವನ್ನು ಭಾರತದಲ್ಲಿರುವ ಮೋದಿ ಅವರ ಕಂಪೆನಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು 239 ಕೋಟಿ ಹಣವನ್ನು ಮೋದಿ ತಮಗೇ ವರ್ಗಾಯಿಸಿಕೊಂಡಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications