ವರ್ತಕರು, ವ್ಯಾಪಾರಸ್ಥರಿಗಾಗಿ ಮುಂದಿನ ವಾರ ಕೇಂದ್ರದಿಂದ ಸಿಹಿ ಸುದ್ದಿ!

ನವದೆಹಲಿ, ನವೆಂಬರ್ 4 : ವರ್ತಕರು ಹಾಗೂ ಸಣ್ಣ ಪ್ರಮಾಣದ ವ್ಯಾಪಾರ ನಡೆಸುವವರಿಗೆ ಅನುಕೂಲಕರವಾದ ಕೆಲವು ಘೋಷಣೆಗಳನ್ನು ಮುಂದಿನ ವಾರ ಮಾಡುವ ಸಾಧ್ಯತೆಗಳಿವೆ. ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿ ಆದ ನಂತರ ತೆರಿಗೆ ಹಾಗೂ ಆಡಳಿತಾತ್ಮಕ ಹೊರೆ ಜಾಸ್ತಿ ಆಗಿದೆ ಎಂದು ದೇಶದಾದ್ಯಂತ ಇರುವ ವರ್ತಕರು ಹಾಗೂ ಸಣ್ಣ ವ್ಯಾಪಾರಸ್ಥರು ಅಲವತ್ತುಕೊಂಡಿದ್ದರು.

ಈ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ನವೆಂಬರ್ 9 ಮತ್ತು 10ರಂದು ಜಿಎಸ್ ಟಿ ಕೌನ್ಸಿಲ್ ಸಭೆ ಇದೆ. ವರ್ತಕರಿಗೆ ನೆರವಾಗುವಂಥ ಹಾಗೂ ದೇಶದ ಆರ್ಥಿಕತೆಗೆ ಬಲ ತುಂಬುವಂಥ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

PM Modi says India may announce tax relief for traders next week

ಕಂಪನಿಗಳ ಆದಾಯಕ್ಕೆ ಸಂಬಂಧಿಸಿದಂತೆ ಇರುವ ಕನಿಷ್ಠ ಮಿತಿಯ ಏರಿಕೆ ಮಾಡುವುದು ಹಾಗೂ ಸಣ್ಣ ಪ್ರಮಾಣದ ವರ್ತಕರು ಮತ್ತು ವ್ಯಾಪಾರಿಗಳಿಗೆ ತೆರಿಗೆ ಪ್ರಮಾಣ ಇಳಿಸುವ ಬಗ್ಗೆ ಕಳೆದ ತಿಂಗಳು ಸಚಿವರ ತಂಡವು ಶಿಫಾರಸು ಮಾಡಿತ್ತು. ಕಳೆದ ಜುಲೈನಲ್ಲಿ ಜಾರಿಗೆ ತಂದ ಜಿಎಸ್ ಟಿಯಿಂದ ಇಡೀ ದೇಶದಲ್ಲಿ ಏಕ ರೂಪ ತೆರಿಗೆ ಜಾರಿಗೆ ಬಂದಿದೆ.

ಜಿಎಸ್ ಟಿ ಜಾರಿಯಿಂದ ಆರ್ಥಿಕತೆಗೆ ಹಿನ್ನಡೆಯಾಗಿದೆ ಎಂಬ ಆರೋಪಗಳು ಪ್ರಧಾನಿ ಮೇಲೆ ಬಂದಿವೆ. ಕಳೆದ ವರ್ಷ ಮಾಡಿದ ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯಿಂದ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಖಾಸಗಿ ಸಂಸ್ಥೆಯೊಂದು ಮಾಡಿದ ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+